Tuesday, Oct 22 2019 | Time 08:46 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Entertainment Share

ಸೃಜನ್-ಹರಿಪ್ರಿಯಾ ಲಿಪ್ ಲಾಕ್ ದೃಶ್ಯ: ಜಾಲತಾಣದಲ್ಲಿ ವೈರಲ್

ಬೆಂಗಳೂರು, ಸೆ 20 (ಯುಎನ್ಐ) ಇತ್ತೀಚೆಗಷ್ಟೆ ‘ಡಿಯರ್ ಕಾಮ್ರೇಡ್’ ಚಿತ್ರದ ಲಿಪ್ ಲಾಕ್ ದೃಶ್ಯ ಜಾಲತಾಣದಲ್ಲಿ ಹರಿದಾಡಿ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವಿನ ಗಾಸಿಪ್ ಗೆ ಕಾರಣವಾಗಿತ್ತು . ಇದೀಗ ‘ಮಜಾ ಟಾಕೀಸ್’ ಖ್ಯಾತಿಯ ಟಾಕಿಂಗ್ ಸ್ಟಾರ್, ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ಲಿಪ್ ಟು ಲಿಪ್ ಕಿಸ್ ಹಾಗೂ ಲಿಪ್ ಲಾಕ್ ದೃಶ್ಯಗಳು ವೈರಲ್ ಆಗಿವೆ.

‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಸೃಜನ್ ಲೋಕೇಶ್ ಹಸಿಬಿಸಿ ದೃಶ್ಯದಿಂದ ಸುದ್ದಿಯಾಗುತ್ತಿದ್ದಾರೆ. ಜತೆಗೆ ಟೀಸರ್ ಮತ್ತು ಹಾಡುಗಳ ಮೂಲಕ ಸಾಕಷ್ಟು ಭರವಸೆ ಹುಟ್ಟಿಸಿದೆ. “ಈ ಖುಷಿಗೆ ಹೆಸರೇನು. . ಈ ನಶೆಗೆ ವಶ ನಾನು. . .” ಹಾಡು ಗುನುಗುವಂತಿದ್ದು, ರೊಮ್ಯಾಂಟಿಕ್ ಆಗಿದೆ. ಇದೇ ಹಾಡಿನಲ್ಲಿ ಸೃಜನ್ ಹಾಗೂ ಹರಿಪ್ರಿಯಾರ ಕಿಸ್ಸಿಂಗ್ ದೃಶ್ಯವಿದೆ,

ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ಸೃಜನ್ ಲೋಕೇಶ್, ಆಗಾಗ್ಗೆ ಚಿತ್ರಗಳಲ್ಲೂ ನಟಿಸುತ್ತ ಗಮನ ಸೆಳೆಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ‘ಹ್ಯಾಪಿ ಜರ್ನಿ’ಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ಎಲ್ಲಿದ್ದೆ ಇಲ್ಲಿತನಕ’ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಇದರ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿದ್ದಾರೆ.

ಯುಎನ್ಐ ಎಸ್ಎ ಕೆಎಸ್ ವಿ 2031