Friday, May 29 2020 | Time 15:35 Hrs(IST)
 • ಬೋಧ್ ಗಯಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸೆರೆ
 • ಚೀನಾ ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಜನರಿಗೆ ಮಾಹಿತಿ ನೀಡಿ; ರಾಹುಲ್ ಗಾಂಧಿ
 • ಜಲ್ಲಿಕಲ್ಲು ವ್ಯಾಪಾರಿ ಭೀಕರ ಕೊಲೆ
 • ಠೇವಣಿದಾರರ ಖಾತೆಗೆ ಬ್ಯಾಂಕ್​​ ಉದ್ಯೋಗಿಯಿಂದಲೇ ಕನ್ನ; 13 39 ಲಕ್ಷ ರೂ ದೋಖಾ
 • ಪರಿಷತ್ತಿನ ಆಯ್ಕೆ ಮುಖ್ಯಮಂತ್ರಿಗಳ ಪರಮಾಧಿಕಾರ: ಸಹಕಾರ ಸಚಿವ
 • ಅಂಬಿ ಹುಟ್ಟು ಹಬ್ಬಕ್ಕೆ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ
 • ಭಾರತದಲ್ಲಿ ಒಂದೇ ದಿನ 7476 ಜನರಿಗೆ ಸೋಂಕು, ಸೋಂಕಿತರ ಸಂಖ್ಯೆ 1 06 ಲಕ್ಷಕ್ಕೇರಿಕೆ
 • ಮೇ 31ಕ್ಕೆ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ನಿರ್ಧಾರ: ಎಸ್‌ ಟಿ ಸೋಮಶೇಖರ್
 • ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ: ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ- ಮುಖ್ಯಮಂತ್ರಿ
 • ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ- ಬಿ ಸಿ ಪಾಟೀಲ್
 • ಕೊರೋನ ಸೋಂಕಿತ ದೇಶಗಳ ಪೈಕಿ ಈಗ ಭಾರತಕ್ಕೆ 9 ನೆ ಸ್ಥಾನ
 • ಸಂತೋಷ್, ಯೋಗೇಶ್ವರ್‌ಗೆ ಪಟ್ಟ , ಬಿಜೆಪಿಯಲ್ಲಿ ಭುಗಿಲೆದ್ದ ಶಾಸಕರ ಆಕ್ರೋಶ
 • ಚಿತ್ರರಂಗಕ್ಕೆ ಅನುದಾನ ನೀಡುವಂತೆ ಸಿಎಂಗೆ ಮನವಿ: ಜೈರಾಜ್
 • ರೆಬಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ "ಬ್ಯಾಡ್ ಮ್ಯಾನರ್ಸ್" ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ
 • ಅಕ್ರಮ ಕಲ್ಲು ಗಣಿಗಾರಿಗೆ ತಡೆಗಟ್ಟಲು ಡ್ರೋನ್ ಸರ್ವೆಗೆ ಮುಖ್ಯಮಂತ್ರಿ ಸೂಚನೆ
Entertainment Share

ಸೋನಾಕ್ಷಿ ಸಿನ್ಹಾ ರಂತವರಿಗೆ ರಾಮಾಯಣ, ಮಹಾಭಾರತ ಧಾರವಾಹಿ ನೆರವಾಗಲಿವೆ; ಮುಖೇಶ್ ಖನ್ನಾ

ಮುಂಬೈ, ಏ ೪ (ಯುಎನ್‌ಐ) ದೂರದರ್ಶನದಲ್ಲಿ ರಾಮಾಯಣ, ಮಹಾ ಭಾರತ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಭಾರಿ ಪ್ರಮಾಣದಲ್ಲಿ ವೀಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.
ಈ ಸಂಬಂಧ ಶಕ್ತಿಮಾನ್ ಖ್ಯಾತಿಯ ಮುಖೇಶ್ ಖನ್ನಾ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ನಿರ್ಧಾರ ಅತ್ಯುತ್ತಮವಾಗಿದ್ದು, ಬಾಲಿವುಡ್ ನಾಯಕಿ ನಟಿ ಸೋನಾಕ್ಷಿ ಸಿನ್ಹಾರಂತಹ ಹೊಸತಲೆಮಾರಿನವರಿಗೆ ಈ ಧಾರಾವಾಹಿಗಳು ತುಂಬಾ ಉಪಯುಕ್ತವಾಗಲಿವೆ ಎಂದು ಹೇಳಿದರು. ಪ್ರಸ್ತುತ ಯುವ ಜನಾಂಗ ಹೊಸ ವಿಷಯಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ನಮ್ಮ ಯುವಜನರು ಇತಿಹಾಸ, ಸಂಸ್ಕೃತಿ, ಭಾರತೀಯ ಮಹಾಕಾವ್ಯಗಳನ್ನು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಮ್ಮೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಸೋನಾಕ್ಷಿ ಸಿನ್ಹಾ , ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹನುಮಂತ ಸಂಜೀವಿನಿ ಪರ್ವತವನ್ನು ಯಾರಿಗೆ ಎತ್ತಿತಂದನು ಎಂದು ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಗೆ ಆಕೆ ಉತ್ತರಿಸಲು ಸಾಧ್ಯವಾಗಿರಲಿಲ್ಲ, ಈ ಘಟನೆಯನ್ನು ಉಲ್ಲೇಖಿಸಿ ಮುಖೇಶ್ ಖನ್ನಾ ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ನಡುವೆ ದೂರದರ್ಶನದಲ್ಲಿ ರಾಮಾಯಣ,ಮಹಾ ಭಾರತ ಮಾತ್ರವಲ್ಲದೆ ದಶಕಗಳ ಹೊಂದೆ ಪುಟ್ಟ ಮಕ್ಕಳನ್ನು ಬಹುವಾಗಿ ಆಕರ್ಷಿಸಿದ್ದ ಶಕ್ತಿಮಾನ್ ಧಾರಾವಾಹಿಯೂ ಮರು ಪ್ರಸಾರ ಮಾಡುವುದಾಗಿ ಘೋಷಿಸಿದ್ದು, ಈ ಧಾರಾವಾಹಿಯಲ್ಲಿ ಮುಖೇಶ್ ಖನ್ನಾ ಪ್ರಮುಖ ಪಾತ್ರ ವಹಿಸಿದ್ದಾರೆ.
ಯುಎನ್‌ಐ ಕೆವಿಆರ್ ೧೮೩೭