Thursday, Feb 25 2021 | Time 04:47 Hrs(IST)
Sports Share

ಸ್ಮಿತ್ ಅವರನ್ನು ಕೈ ಬಿಟ್ಟ ರಾಜಸ್ಥಾನ

ನವದೆಹಲಿ, ಜ.20 (ಯುಎನ್ಐ)- ರಾಜಸ್ಥಾನ್ ರಾಯಲ್ಸ್ ತಮ್ಮ ಹಿಂದಿನ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್‌ರನ್ನು ಐಪಿಎಲ್ 2021 ರ ಋತುವಿನಲ್ಲಿ ಬಿಡುಗಡೆ ಮಾಡಿ ಸಂಜು ಸ್ಯಾಮ್ಸನ್ ಅವರನ್ನು ಹೊಸ ನಾಯಕನನ್ನಾಗಿ ನೇಮಿಸಿದೆ.

ರಾಜಸ್ಥಾನ್ ರಾಯಲ್ಸ್ ಬುಧವಾರ ಈ ಹೇಳಿಕೆ ಬಿಡುಗಡೆ ಮಾಡಿದೆ. ಕಳೆದ ಋತುವಿನಲ್ಲಿ ಸ್ಮಿತ್ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ, ಮತ್ತು ಸ್ಮಿತ್ ಅವರ ನಾಯಕತ್ವದಲ್ಲಿ ತಂಡ ನಿರಾಶೆಗೊಂಡಿದೆ. ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಹೊಂದಿದ್ದು, ಈ ಕಾರಣದಿಂದಾಗಿ ಅವರನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೀಮಿತ ಸ್ವರೂಪಕ್ಕೆ ಆಯ್ಕೆ ಮಾಡಲಾಯಿತು.

ರಾಜಸ್ಥಾನ ತಂಡ, ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ವೇಗಿ ಜೋಫ್ರಾ ಆರ್ಚರ್ ಮತ್ತು ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು ಉಳಿಸಿಕೊಂಡಿದೆ. ಉಳಿಸಿಕೊಂಡ ಆಟಗಾರರಲ್ಲಿ ಭಾರತೀಯ ಮತ್ತು ವಿದೇಶಿ ಆಟಗಾರರ ಉತ್ತಮ ಸಂಯೋಜನೆ ಇದೆ ಎಂದು ರಾಜಸ್ಥಾನ ನಂಬಿದೆ.

ರಾಜಸ್ಥಾನದ ಉಳಿಸಿಕೊಂಡ ಆಟಗಾರರು:

ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ರಿಯಾನ್ ಪರಾಗ್, ಶ್ರೇಯಾಸ್ ಗೋಪಾಲ್, ರಾಹುಲ್ ತಿವಾಟಿಯಾ, ಮಹಿಪಾಲ್ ಲೋಮರ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, ಜಯದೇವ್ ಉನಾದ್ಕತ್, ಮಾಯಾಂಕ್ ಮಾರ್ಕಂಡೆ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಮನನ್ ವೊಹ್ರಾ

ಬಿಡುಗಡೆಯಾದ ಆಟಗಾರರು:

ಸ್ಟೀವನ್ ಸ್ಮಿತ್, ಅಂಕಿತ್ ರಜಪೂತ್, ಓಶೇನ್ ಥಾಮಸ್, ಆಕಾಶ್ ಸಿಂಗ್, ವರುಣ್ ಆರನ್, ಟಾಮ್ ಕರೆನ್, ಅನಿರುದ್ ಜೋಶಿ ಮತ್ತು ಶಶಾಂಕ್ ಸಿಂಗ್.

ಯುಎನ್ಐ ವಿಎನ್ಎಲ್ 1907
More News
ಹಗಲು ರಾತ್ರಿ ಟೆಸ್ಟ್: ಟೀಮ್ ಇಂಡಿಯಾಗೆ ಜಯದ ಕನಸು

ಹಗಲು ರಾತ್ರಿ ಟೆಸ್ಟ್: ಟೀಮ್ ಇಂಡಿಯಾಗೆ ಜಯದ ಕನಸು

23 Feb 2021 | 4:27 PM

ಅಹಮದಾಬಾದ್, ಫೆ.23 (ಯುಎನ್ಐ)- ಗೆಲುವಿನ ನಾಗಾಲೋಟದಲ್ಲಿ ತೆಲುತ್ತಿರುವ ಟೀಮ್ ಇಂಡಿಯಾ, ಬುಧವಾರ ನಡೆಯುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಕಾದಾಟ ನಡೆಸಲಿದೆ.

 Sharesee more..
2028ರ ಒಲಂಪಿಕ್ ನ ಪದಕ ಪಟ್ಟಿಯಲ್ಲಿ ಟಾಪ್ 10 ನಲ್ಲಿ ಭಾರತ ಇರಬೇಕು; ಸಚಿವ ಕಿರಣ್ ರಿಜಿಜು

2028ರ ಒಲಂಪಿಕ್ ನ ಪದಕ ಪಟ್ಟಿಯಲ್ಲಿ ಟಾಪ್ 10 ನಲ್ಲಿ ಭಾರತ ಇರಬೇಕು; ಸಚಿವ ಕಿರಣ್ ರಿಜಿಜು

22 Feb 2021 | 8:50 PM

ಬೆಂಗಳೂರು ಫೆ.22 (ಯುಎನ್ಐ) ದೇಶದ ಎಲ್ಲ ಕ್ರೀಡಾ ಕೇಂದ್ರಗಳಲ್ಲಿ ತ್ರಿ ತಾರಾ ಹೊಟೆಲ್ ನಂತಹ ಮೂಲ ಸೌಕರ್ಯ ಇರಬೇಕು. ಆ ನಿಟ್ಟಿನಲ್ಲಿ ನಾವು ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

 Sharesee more..