Wednesday, Jul 15 2020 | Time 03:03 Hrs(IST)
National Share

ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ : ಲೋಕಸಭೆಯಲ್ಲಿ ಕಾಂಗ್ರೆಸ್ ಸಭಾತ್ಯಾಗ

ನವದೆಹಲಿ, ನ 22 (ಯುಎನ್ಐ) ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗಿಯವರಿಗೆ, ಮೂರು ಕಾಸಿಗೆ ಪರಭಾರೆ ಮಾಡುವ ಸರ್ಕಾರದ ಕ್ರಮ ವಿರೋಧಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಸಭಾತ್ಯಾಗ ಮಾಡಿದ ಘಟನೆ ಶುಕ್ರವಾರ ಜರುಗಿದೆ.
ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧಿರ್ ರಂಜನ್ ಚೌಧರಿ, ಈ ವಿಷಯ ಪ್ರಸ್ತಾಪಿಸಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಬಂಡವಾಳವನ್ನು ವಾಪಸ್ ತೆಗೆದುಕೊಂಡು ಅದನ್ನು ಅರ್ಧ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡುವ ಕಾಯಕ ಮಾಡಿಕೊಂಡಿದೆ ಎಂದು ದೂರಿದ್ದಾರೆ.
ಒಂದಾದ ಮೇಲೆ ಒಂದರಂತೆ ಸಾರ್ವಜನಿಕ ಉದ್ದಿಮೆಗಳನ್ನು ಸರ್ಕಾರ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದು ಸರ್ಕಾರದ ನೀತಿ ಮತ್ತು ಧೋರಣೆಯನ್ನು ಬಹಿರಂಗಪಡಿಸಿದೆ ಎಂದು ಅವರು ಆರೋಪಿಸಿದರು.
ಗುರುವಾರ ಸಹ, ಸದನದಲ್ಲಿ ಈ ವಿಚಾರ ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಕಳೆದ ಬುಧವಾರ ಜರುಗಿದ ಸಂಪುಟ ಸಭೆಯಲ್ಲಿ ಐದು ಸಾರ್ವಜನಿಕ ಉದ್ದಿಮೆಗಳಿಂದ ಬಂಡವಾಳ ವಾಪಸ್ ಪಡೆಯುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಯುಎನ್ಐ ಕೆಎಸ್ಆರ್ 2230
More News
ಕರೋನ ನಿಯಂತ್ರಣ: ಸರ್ಕಾರ  ಹೇಳುತ್ತಿರುವುದೇನು? ಮಾಡುತ್ತಿರುವುದೇನು?

ಕರೋನ ನಿಯಂತ್ರಣ: ಸರ್ಕಾರ ಹೇಳುತ್ತಿರುವುದೇನು? ಮಾಡುತ್ತಿರುವುದೇನು?

14 Jul 2020 | 8:55 PM

ನವದೆಹಲಿ,ಜುಲೈ 14 (ಯುಎನ್ಐ) ಸರಕಾರ ಕರೋನ ನಿಯಂತ್ರಣ ವಿಚಾರದಲ್ಲಿ ಹೇಳುತ್ತಿರುವುದೇನು? ಮಾಡುತ್ತಿರುವುದೇನು? ಸ್ಯಾನಿಟೈಜರ್ ಗಳಿಗೆ ಶೇಕಡ 18 ರಷ್ಟು ತೆರಿಗೆ ಹಾಕಲು ಹೊರಟಿರುವುದು ಯಾವ ನ್ಯಾಯ ? ನಿಜಕ್ಕೂ ಈಗಿನ ಸನ್ನಿವೇಶದಲ್ಲಿ ಈ ತೀರ್ಮಾನ ಸೂಕ್ತವೇ? ಸಮಜಂಸವೆ??.

 Sharesee more..