Monday, Nov 30 2020 | Time 10:46 Hrs(IST)
  • ವಾಯುಭಾರ ಕುಸಿತ: ಇನ್ನೂ ಕೆಲ ದಿನ ಕಾಡಲಿದೆ ಮಳೆ ಕಾಟ !!
  • ವಾರಾಣಸಿಗೆ ಇಂದು ಪ್ರಧಾನಿ ಭೇಟಿ: ಹಲವು ಕಾರ್ಯಕ್ರಮಗಳಲ್ಲಿ ಭಾಗಿ
  • ನೈಜೀರಿಯಾದಲ್ಲಿ ನರಮೇಧ: ಕನಿಷ್ಠ 110 ನಾಗರಿಕರು ಬಲಿ
  • ಎಫ್ ಬಿ ಐ ವಿರುದ್ದ ಡೊನಾಲ್ಡ್ ಟ್ರಂಪ್ ಆಕ್ರೋಶ
  • ನಾಯಿಯೊಂದಿಗೆ ಆಟ- ಬೈಡೆನ್ ಕಾಲಿನ ಮೂಳೆ ಮುರಿತ !!
  • ಸಾಕು ನಾಯಿ ಜೊತೆ ಆಟವಾಡುವಾಗ ಜಾರಿ ಬಿದ್ದು ಗಾಯಗೊಂಡ ಜೋ ಬೈಡನ್
  • ಶಿವಸೇನೆಗೆ ಉರ್ಮಿಳಾ ಮಾತೋಂಡ್ಕರ್ ?
  • ನ್ಯೂಯಾರ್ಕ್ ನಲ್ಲಿ ಡಿಸೆಂಬರ್ 7ರಿಂದ ಶಾಲೆಗಳು ಪುನರಾರಂಭ
  • ಇಂದು ವಾರಣಾಸಿಗೆ ಪ್ರಧಾನಿ ಮೋದಿ, ಹಲವು ಕಾರ್ಯಕ್ರಮಗಳಲ್ಲಿ ಭಾಗಿ
National Share

ಸ್ವಮಿತ್ರಾ ಯೋಜನೆಯಡಿ ಆಸ್ತಿ ಚೀಟಿ ವಿತರಣಾ ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ನವದೆಹಲಿ, ಅ 9 (ಯುಎನ್ಐ) ಗ್ರಾಮೀಣ ಭಾರತದ ಪರಿವರ್ತನೆ ಮತ್ತು ಲಕ್ಷಾಂತರ ಭಾರತೀಯರನ್ನು ಸಬಲೀಕರಣಗೊಳಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸ್ವಮಿತ್ರಾ ಯೋಜನೆಯಡಿ ಆಸ್ತಿ ಗುರುತಿನ ಚೀಟಿ ಹಂಚಿಕೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದೆ.
ಈ ಯೋಜನೆ ಒಂದು ಲಕ್ಷ ಆಸ್ತಿ ಮಾಲೀಕರಿಗೆ ಎಸ್‌ಎಂಎಸ್‌ ಲಿಂಕ್‌ ಮೂಲಕ ಆಸ್ತಿ ಕಾರ್ಡ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.
ನಂತರ ಸಂಬಂಧಿಸಿದ ರಾಜ್ಯ ಸರ್ಕಾರಗಳು ಅದನ್ನು ಭೌತಿಕವಾಗಿ ವಿತರಿಸಲಿದ್ದಾರೆ.
ಉತ್ತರ ಪ್ರದೇಶದ 346, ಹರಿಯಾಣದಿಂದ 221, ಮಹಾರಾಷ್ಟ್ರದಿಂದ 100, ಮಧ್ಯಪ್ರದೇಶದಿಂದ 44, ಉತ್ತರಾಖಂಡದಿಂದ 50 ಮತ್ತು ಕರ್ನಾಟಕದ 2 ಸೇರಿದಂತೆ ಆರು ರಾಜ್ಯಗಳ 763 ಗ್ರಾಮಗಳ ಜನರು ಇದರ ಫಲಾನುಭವಿಗಳಾಗಿದ್ದಾರೆ.
ಮಹಾರಾಷ್ಟ್ರವನ್ನು ಹೊರತುಪಡಿಸಿ ಈ ಎಲ್ಲಾ ರಾಜ್ಯಗಳ ಫಲಾನುಭವಿಗಳು ಒಂದು ದಿನದೊಳಗೆ ಆಸ್ತಿ ಕಾರ್ಡ್‌ಗಳ ಭೌತಿಕ ಪ್ರತಿಗಳನ್ನು ಸ್ವೀಕರಿಸುತ್ತಾರೆ - ಮಹಾರಾಷ್ಟ್ರವು ಆಸ್ತಿ ಕಾರ್ಡ್‌ನ ಅತ್ಯಲ್ಪ ವೆಚ್ಚವನ್ನು ಮರುಪಡೆಯುವ ವ್ಯವಸ್ಥೆಯನ್ನು ಹೊಂದಿರುವುದರಿಂದ ಇದು ಒಂದು ತಿಂಗಳ ಸಮಯ ತೆಗೆದುಕೊಳ್ಳುತ್ತದೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಯುಎನ್ಐ ಎಸ್ಎಚ್ 1946
More News
ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ಘರ್ಷಣೆ: 30 ತಾಲಿಬಾನ್ ಉಗ್ರರು ಹತ

ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ಘರ್ಷಣೆ: 30 ತಾಲಿಬಾನ್ ಉಗ್ರರು ಹತ

29 Nov 2020 | 8:35 PM

ಕಾಬೂಲ್, ನ 29 (ಯುಎನ್‍ಐ)- ಆಫ್ಥಾನಿಸ್ತಾನದ ಪೂರ್ವ ಪ್ರಾಂತ್ಯವಾದ ಲಾಗ್ಮಾನ್‌ನಲ್ಲಿ ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಆರು ಕಮಾಂಡರ್‌ಗಳು ಸೇರಿದಂತೆ 30 ತಾಲಿಬಾನ್ ಉಗ್ರರು ಹತರಾಗಿದ್ದು, ಇತರ 17 ಮಂದಿ ಗಾಯಗೊಂಡಿದ್ದಾರೆ ಎಂದು ಆಫ್ಘಾನಿಸ್ತಾನ ಸೇನೆಯ ಪೂರ್ವ ವಿಭಾಗ ಭಾನುವಾರ ತಿಳಿಸಿದೆ.

 Sharesee more..