Saturday, Jul 11 2020 | Time 09:47 Hrs(IST)
Special Share

ಸ್ವಾವಲಂಬಿ ಭಾರತಕ್ಕೆ ಸಂಶೋಧನಾ ಮತ್ತು ಅಭಿವೃದ್ಧಿಗಳು ಪ್ರಮುಖ ಅಂಶ: ಪ್ರಧಾನ್

ಸ್ವಾವಲಂಬಿ ಭಾರತಕ್ಕೆ ಸಂಶೋಧನಾ ಮತ್ತು ಅಭಿವೃದ್ಧಿಗಳು ಪ್ರಮುಖ ಅಂಶ: ಪ್ರಧಾನ್
ಸ್ವಾವಲಂಬಿ ಭಾರತಕ್ಕೆ ಸಂಶೋಧನಾ ಮತ್ತು ಅಭಿವೃದ್ಧಿಗಳು ಪ್ರಮುಖ ಅಂಶ: ಪ್ರಧಾನ್

ನವದೆಹಲಿ, ಜೂನ್ 29 (ಯುಎನ್ಐ) ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಸುವಲ್ಲಿಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತದ ಧ್ಯೇಯವನ್ನು ಈಡೇರಿಸುವಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಮುಖ ಅಂಶವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಅವರೊಂದಿಗೆ ಇಂಡಿಯನ್ ಆಯಿಲ್‌ನ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿ ಮತ್ತು ನಿಯೋಜನಾ ಕೇಂದ್ರಕ್ಕೆ ಫರಿದಾಬಾದ್ನ ಐಎಂಟಿಯಲ್ಲಿ ಎರಡನೇ ಆರ್ ಆ್ಯಂಡ್ ಡಿ ಕ್ಯಾಂಪಸ್‌ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಭಾರತದ ಆರ್‌ ಎಂಡ್‌ ಡಿ ಕೇಂದ್ರ ಸ್ವಾವಲಂಬಿ ಭಾರತದ ಕನಸು ನನಸಾಗಿಸಲು ಗಣನೀಯ ಕೊಡುಗೆ ನೀಡಿದೆ ಎಂದರು.

ಭಾರತೀಯ ತೈಲದ ಆರ್‌ ಎಂಡ್‌ ಡಿ ಕೇಂದ್ರ ಹಲವು ವರ್ಷಗಳಿಂದ ಭಾರತಕ್ಕೆ ಹೊಂದಿಕೊಳ್ಳುವ ಸ್ವದೇಶಿ ತಂತ್ರಜ್ಞಾನ ಮತ್ತು ಪ್ರಕ್ರಿಯೆಗಳತ್ತ ಗಮನ ಹರಿಸಿದೆ ಎಂದಿದ್ದಾರೆ.

ರಾಜ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಚಟುವಟಿಕೆಗಳಿಗೆ ಹರಿಯಾಣ ಸರ್ಕಾರ ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಪ್ರಧಾನ್, ಹರಿಯಾಣವನ್ನು ಸೀಮೆಎಣ್ಣೆ ಮುಕ್ತ ರಾಜ್ಯವನ್ನಾಗಿ ಮಾಡಿದ್ದಕ್ಕಾಗಿ ಮುಖ್ಯಮಂತ್ರಿಯನ್ನು ಅಭಿನಂದಿಸಿದರು.

ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿಶ್ವಕ್ಕೆ ಔಷಧ ಪೂರೈಕೆ ಮಾಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ. ಭಾರತದ ಪೆಟ್ರೋಕೆಮಿಕಲ್‌ ಅಗತ್ಯತೆ ಹೆಚ್ಚಾಗುತ್ತಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಆಮದು ಕಡಿತಗೊಳಿಸಲಾಗಿದೆ ಎಂದಿದ್ದಾರೆ.

ಯುಎನ್ಐ ಎಸ್ಎಚ್ 1657

More News
ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜತೆ ದೂರವಾಣಿ ಮಾತುಕತೆ ನಡೆಸಿದ ರಾಜನಾಥ್ ಸಿಂಗ್

ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜತೆ ದೂರವಾಣಿ ಮಾತುಕತೆ ನಡೆಸಿದ ರಾಜನಾಥ್ ಸಿಂಗ್

10 Jul 2020 | 8:44 PM

ನವದೆಹಲಿ, ಜುಲೈ ೧೦(ಯುಎನ್‌ಐ) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಸಂಜೆ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪೆರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

 Sharesee more..
ಯುಎನ್‌ಐ ಸಿಬ್ಬಂದಿ ಕೋವಿಡ್‌-19ಗೆ ಬಲಿ

ಯುಎನ್‌ಐ ಸಿಬ್ಬಂದಿ ಕೋವಿಡ್‌-19ಗೆ ಬಲಿ

10 Jul 2020 | 7:59 PM

ಹೈದರಾಬಾದ್, ಜು 10 (ಯುಎನ್ಐ) ಹೈದರಾಬಾದ್‌ನ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್ಐ) ಸಿಬ್ಬಂದಿ ಎಚ್.ಮಹೇಶ್ ಎಂಬುವರು ಶುಕ್ರವಾರ ಕೋವಿಡ್ -19ಗೆ ಮೃತಪಟ್ಟಿದ್ದಾರೆ.

 Sharesee more..