Tuesday, Aug 11 2020 | Time 18:22 Hrs(IST)
 • ಕೆ ಎಲ್‌ ರಾಹುಲ್‌ ನಾಯಕತ್ವದಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದ ಶೆಲ್ಡನ್‌ ಕಾಟ್ರೆಲ್
 • ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿಶೇಷ ಚೇತನ ಮೇಘನಾರನ್ನು ಅಭಿನಂದಿಸಿದ ಡಿಸಿಎಂ ಅಶ್ವತ್ಥ್ ನಾರಾಯಣ್
 • ಅಶೋಕ್ ಗೆಹ್ಲೋಟ್ ಜತೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ !: ಸಚಿನ್ ಪೈಲೆಟ್
 • ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಶೇ 80 ರಷ್ಟು ಸೋಂಕು: ಪ್ರಧಾನಿ ಮೋದಿ
 • ಕೋವಿಡ್‌; 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ
 • ಸೂಪರ್‌ ಓಪವರ್‌ನಲ್ಲಿ ಬೌಲಿಂಗ್‌ ಮಾಡಲು ಬುಮ್ರಾ ಅತ್ಯುತ್ತಮ ಆಯ್ಕೆ: ಆಕಾಶ್ ಚೋಪ್ರ
 • ಪುರುಷರ ರಾಷ್ಟ್ರೀಯ ಹಾಕಿ ಶಿಬಿರ ಅನಿಶ್ಚಿತ
 • 800ನೇ ಟೆಸ್ಟ್‌ ವಿಕೆಟ್‌ಗಾಗಿ ಇಶಾಂತ್‌ ಎದುರು ಬೇಡಿಕೊಂಡಿದ್ದ ಮುತ್ತಯ್ಯ ಮುರಳೀಧರನ್!
 • ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ
 • ಪ್ಲಾಸ್ಮಾ ದಾನಕ್ಕೆ ಐದು ಸಾವಿರ ರೂ ಪ್ರೋತ್ಸಾಹಧನ ಸರಿಯಲ್ಲ: ಇದು ವ್ಯಾಪಾರೀಕರಣವಾಗಬಾರದು: ಡಾ ವಿಶಾಲ್ ರಾವ್
 • ಐಪಿಎಲ್‌ಗೆ ರಾಹುಲ್‌ ರೆಡಿ, ಕಿಂಗ್ಸ್‌ ಇಲೆವೆನ್‌ ಕ್ಯಾಪ್ಟನ್‌ ಭರ್ಜರಿ ಬ್ಯಾಟಿಂಗ್‌ ಅಭ್ಯಾಸ
 • ರಣಬೀರ್ ಅತ್ಯಾಚಾರಿ, ದೀಪಿಕಾ ಸೈಕೋ
 • ಖಾಸಗಿ ಆಸ್ಪತ್ರೆಗಳ ಅವಾಂತರ: ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮುಂದೆ ಸದಸ್ಯರ ಆಕ್ರೋಶ; ಐಸಿಯುಗೆ ಸಿಸಿಟಿವಿ ಅಳವಡಿಕೆ ಬಗ್ಗೆ ನಿರ್ಣಯ
 • ಮೈಸೂರು ಅರಮನೆ ಇನ್ನು ಎಲ್ಲಾ ದಿನಗಳಲ್ಲೂ ಪ್ರವಾಸಿಗರಿಗೆ ಮುಕ್ತ
 • ಚೀನಾ ಉದ್ಯಮಿಗಾಗಿ ತಯಾರಾಗುತ್ತಿದೆ 11 ಕೋಟಿ ರೂ ಚಿನ್ನದ ಮಾಸ್ಕ್ !!
Parliament Share

ಹಡಗು ಮರುಬಳಕೆ ಮಸೂದೆಗೆ ಸಂಸತ್‌ ಅನುಮೋದನೆ

ನವದೆಹಲಿ, ಡಿಸೆಂಬರ್ 9 (ಯುಎನ್‌ಐ) ಹಡಗುಗಳಲ್ಲಿ ಅಪಾಯಕಾರಿ ವಸ್ತುಗಳ ಬಳಕೆಯನ್ನು ನಿರ್ಬಂಧಿಸುವ ಮತ್ತು ಹಡಗುಗಳ ಮರುಬಳಕೆಯನ್ನು ನಿಯಂತ್ರಿಸುವ ಮಸೂದೆಗೆ ರಾಜ್ಯಸಭೆಯಲ್ಲಿ ಧ್ವನಿ ಮತದ ಅಂಗೀಕಾರ ದೊರೆಯುವುದರೊಂದಿಗೆ ಸೋಮವಾರ ಸಂಸತ್ತಿನಿಂದ ಅನುಮೋದನೆ ದೊರೆಯಿತು.
ಹಡಗುಗಳ ಮರುಬಳಕೆ ಮಸೂದೆ 2019 ಅನ್ನು ಮೇಲ್ಮನೆಯಲ್ಲಿ ಹಡಗು ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಡಿಸಿದರು.
ಸದನದಲ್ಲಿ ಮಸೂದೆಯ ಕುರಿತ ಚರ್ಚೆಗೆ ಉತ್ತರಿಸಿದ ಸಚಿವರು, ಹಡಗುಗಳ ಮರುಬಳಕೆ ಮಾಡುವಾಗ ಉದ್ಯೋಗಾವಕಾಶಗಳು, ಕಾರ್ಮಿಕರ ಸುರಕ್ಷತೆ ಮತ್ತು ಮರುಬಳಕೆ ಕಾರ್ಯ ನಡೆಯುತ್ತಿರುವಾಗ ಪರಿಸರವನ್ನು ಗಮನದಲ್ಲಿರಿಸಲಾಗುವುದು ಎಂದು ಸದಸ್ಯರಿಗೆ ಭರವಸೆ ನೀಡಿದರು.
ಹಾಂಕಾಂಗ್ ಸಮಾವೇಶವು ಭಾರತದ ಪರವಾಗಿದೆ. ನಮ್ಮ ದೇಶದಲ್ಲಿ, ಒಂದೇ ಬಾರಿಗೆ 131 ಹಡಗುಗಳನ್ನು ಒಟ್ಟಿಗೆ ಸಮುದ್ರ ತೀರಕ್ಕೆ ಇಳಿಸಬಹುದು. ಹಡಗಿನ ಮರುಬಳಕೆಯನ್ನು ಬೆಂಬಲಿಸುವ ಪ್ರಕೃತಿಯ ಸಮೃದ್ಧಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದರು.
ಸದಸ್ಯರೊಬ್ಬರು ಮಸೂದೆಯ ಹೆಸರು ಬದಲಾವಣೆಗೆ ಒತ್ತಾಯಿಸಿದಾಗ, ಸಚಿವರು ಉತ್ತರಿಸಿ, ಶೇಕಡಾ 95 ರಷ್ಟು ಹಡಗು ಮರುಬಳಕೆ ಆಗುತ್ತದೆ, ಅದಕ್ಕಾಗಿಯೇ ಈ ಹೆಸರನ್ನು ಮಸೂದೆಗೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಭಾರತವು ಈ ರೀತಿಯ 'ಡಂಪಿಂಗ್ ತಾಣ' ಆಗಲಿದೆ ಎಂಬ ಹಲವು ಸದಸ್ಯರು ವ್ಯಕ್ತಪಡಿಸಿದ ಕಳವಳಗಳಿಗೆ ಪ್ರತಿಕ್ರಿಯಿಸಿದ ಮಾಂಡವಿಯಾ, "ಹಡಗುಗಳಿಂದ ಹೊರತೆಗೆಯಲಾದ ವಸ್ತುಗಳು ತಕ್ಷಣವೇ ಅಲ್ಲಿ ಮಾರಾಟವಾಗುತ್ತವೆ. ಸದಸ್ಯರು ಒಮ್ಮೆ ಅಲಾಂಗ್ ಶಿಪ್ ಬ್ರೇಕಿಂಗ್ ಯಾರ್ಡ್‌ಗೆ ಭೇಟಿ ನೀಡಿ ಈ ಬಗ್ಗೆ ತಿಳಿದುಕೊಳ್ಳಬಹುದು ಎಂದು ಹೇಳಿದರು.
ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಎರಡು ಆಸ್ಪತ್ರೆಗಳನ್ನು ಅಲ್ಲಿ ನಿರ್ಮಿಸಲಾಗಿದೆ. ಕಾರ್ಮಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳಲು ಅಲಾಂಗ್ ಅನ್ನು ಅಭಿವೃದ್ಧಿಪಡಿಸಲಾಗಿದೆ, ಅಲ್ಲಿಯೂ ಅಪಾಯಕಾರಿ ತ್ಯಾಜ್ಯ ತೆಗೆಯುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಸಚಿವರು ತಿಳಿಸಿದರು.
ಕೇವಲ ಒಬ್ಬ ವ್ಯಕ್ತಿ ಮೇಲುಸ್ತುವಾರಿ ವಹಿಸಿಕೊಳ್ಳಲು ಅವಕಾಶ ನೀಡುವ ರಾಷ್ಟ್ರೀಯ ಪ್ರಾಧಿಕಾರವು ಪ್ರಸ್ತಾಪ ಸಮರ್ಥನೀಯವಲ್ಲ ಎಂದು ಎಐಟಿಸಿಯ ಸುಖೇಂದು ಶೇಖರ್ ರಾಯ್ ಎತ್ತಿದ ಕಳವಳಕ್ಕೆ ಪ್ರತಿಕ್ರಿಯಿಸಿದ, ಮೇಲುಸ್ತುವಾರಿ ನೋಡಿಕೊಳ್ಳಲು ಒಬ್ಬ ವ್ಯಕ್ತಿ ಸಾಕಾಗುವುದಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ, ಐದರಿಂದ ಆರು ಜನರು ಈ ಪ್ರಾಧಿಕಾರದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಎರಡು ವರ್ಷಗಳಲ್ಲಿ ಸಮುದ್ರ ಪ್ರಯಾಣಿಕರ ಸಂಖ್ಯೆ 2,40,000 ಕ್ಕೆ ಏರಿರುವುದರಿಂದ ಉದ್ಯೋಗ ಕಡಿತವಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು. ನೀಲಿ ಕ್ರಾಂತಿ ಜಾರಿಯಲ್ಲಿದೆ.
ಈ ಮೊದಲು, ಮಾರ್ಸ್ಕ್ ಶಿಪ್ಪಿಂಗ್ ಲೈನ್‌ನ ಹಡಗುಗಳನ್ನು ಭಾರತದಲ್ಲಿ ಮರುಬಳಕೆ ಮಾಡಲಾಗಿಲ್ಲ, ಆದರೆ ಈಗ ಅವು ನಮ್ಮ ದೇಶದಲ್ಲಿಯೂ ಸಹ ಮರುಬಳಕೆ ಮಾಡಲಾಗುತ್ತಿದೆ, ಇದು ಒಂದು ದೊಡ್ಡ ಸಾಧನೆಯಾಗಿದೆ ಎಂದು ಅವರು ಹೇಳಿದರು.
ನವೆಂಬರ್ 25ರಂದು ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆಯಲಾಗಿತ್ತು.
ಯುಎನ್ಐ ಎಎಚ್ 2105
There is no row at position 0.