Sunday, Nov 29 2020 | Time 18:11 Hrs(IST)
  • ಕೃಷ್ಟಿ ಸುಧಾರಣೆಯಿಂದ ರೈತರಿಗೆ ಮುಕ್ತ ಅವಕಾಶ, ಹಕ್ಕು ಲಭ್ಯ; ಪ್ರಧಾನಿ ಪ್ರತಿಪಾದನೆ
  • ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ : ಮಹೇಶ್ ಕುಮಠಹಳ್ಳಿ ವಿಶ್ವಾಸ
  • ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು
  • ಮಹಿಳೆಗೆ ವಂಚಿಸಿದ ನೈಜೀರಿಯಾ ಪ್ರಜೆ ಬಂಧನ
  • ಯೋಗೇಶ್ವರ್ ಪರ ಮಾತನಾಡುವವರು ಸಚಿವ ಸ್ಥಾನ ತ್ಯಾಗ ಮಾಡಿಲಿ : ಎಂ ಪಿ ರೇಣುಕಾಚಾರ್ಯ
  • ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌
  • ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ
  • ಮಾರಕಾಸ್ತ್ರಗಳಿಂದ ಕೊಚ್ಚಿ‌ ಯುವಕನ ಕೊಲೆ
  • ಸಾಗರ ಭದ್ರತೆಯನ್ನು ಹೆಚ್ಚಿಸುವಲ್ಲಿ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ನಿಂದ ಮಹತ್ವದ ಕ್ರಮ
  • ವಿದ್ಯುತ್ ತಂತಿ ತಗುಲಿ ಕಂಬದಲ್ಲೇ ಲೈನ್ ಮನ್ ಸಾವು: ಮತ್ತೋರ್ವ ಚಿಂತಾಜನಕ
  • ವಿದ್ಯುತ್ ಸ್ಪರ್ಶ: ಕಂಟೈನರ್ ಕ್ಲೀನರ್ ಗೆ ಗಂಭೀರ ಗಾಯ
  • ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ?: ಡಿ ಕೆ ಶಿವಕುಮಾರ್ ಪ್ರಶ್ನೆ
  • ಪ್ರಧಾನಿ ಭೇಟಿ ಹಿನ್ನೆಲೆ: ಸ್ವಾಗತಕ್ಕೆ ವಾರಾಣಸಿ ಸಜ್ಜು
  • ನಿವಾರ್ ಚಂಡಮಾರುತ: ಆಂಧ್ರದಲ್ಲಿ ಆರು ಮಂದಿ ಸಾವು, 543 ಕಿ ಮೀ ಉದ್ದದ ರಸ್ತೆ ಹಾನಿ
  • ಜನತೆಗೆ ಗುರುನಾನಕ್ ಜಯಂತಿ ಶುಭಾಶಯ ಕೋರಿದ ಪ್ರಧಾನಿ
National Share

ಹತ್ರಾಸ್ ಸಂತ್ರಸ್ತೆಯ ಕುಟುಂಬದ ಭೇಟಿಯನ್ನು ತಡೆಯಲು ಸಾಧ್ಯವೇ ಇಲ್ಲ : ರಾಹುಲ್ ಗಾಂಧಿ

ಹತ್ರಾಸ್ ಸಂತ್ರಸ್ತೆಯ ಕುಟುಂಬದ ಭೇಟಿಯನ್ನು ತಡೆಯಲು ಸಾಧ್ಯವೇ ಇಲ್ಲ : ರಾಹುಲ್ ಗಾಂಧಿ
ಹತ್ರಾಸ್ ಸಂತ್ರಸ್ತೆಯ ಕುಟುಂಬದ ಭೇಟಿಯನ್ನು ತಡೆಯಲು ಸಾಧ್ಯವೇ ಇಲ್ಲ : ರಾಹುಲ್ ಗಾಂಧಿ

ನವದೆಹಲಿ, ಅ 03 (ಯುಎನ್ಐ) ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ಮತ್ತು ರಾಜ್ಯ ಪೊಲೀಸರು ಬೆದರಿಕೆ ಹಾಕಿರುವುದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ, ಹತ್ಯೆಗೀಡಾದ ಯುವತಿಯ ಕುಟುಂಬಸ್ಥರನ್ನು ತಾವು ಭೇಟಿ ಮಾಡುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದಿದ್ದಾರೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾದವರ ಕುಟುಂಬವನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರ ನಿಯೋಗವನ್ನು ಶನಿವಾರ ಹತ್ರಾಸ್‌ಗೆ ಕರೆದೊಯ್ಯುತ್ತಿರುವ ರಾಹುಲ್, ಜಗತ್ತಿನ ಯಾವುದೇ ಶಕ್ತಿಯು ಕುಟುಂಬವನ್ನು ಭೇಟಿಯಾಗುವುದನ್ನು ಮತ್ತು ಅವರ ನೋವನ್ನು ಹಂಚಿಕೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಮತ್ತು ರಾಜ್ಯ ಪೊಲೀಸರು ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆ ಮತ್ತು ಅವರ ಕುಟುಂಬವನ್ನು ನಡೆಸಿಕೊಂಡಿರುವ ರೀತಿ ಸ್ವೀಕಾರಾರ್ಹವಲ್ಲ. ಅಂತಹ ನಡವಳಿಕೆಯನ್ನು ಯಾವುದೇ ಭಾರತೀಯರು ಒಪ್ಪಿಕೊಳ್ಳಬಾರದು. ಕುಟುಂಬವನ್ನು ಭೇಟಿಯಾಗುವುದನ್ನು ಮತ್ತು ಅವರ ನೋವನ್ನು ಹಂಚಿಕೊಳ್ಳುವುದನ್ನು ವಿಶ್ವದ ಯಾವುದೇ ಶಕ್ತಿಯಿಂದ ತಡೆಯಲು ಸಾಧ್ಯವಿಲ್ಲ 'ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಈ ಕುರಿತು ಪ್ರಿಯಾಂಕಾ ವಾದ್ರಾ ಟ್ವೀಟ್ ಮಾಡಿದ್ದು, ಉತ್ತರ ಪ್ರದೇಶ ಸರ್ಕಾರ 'ನೈತಿಕವಾಗಿ ಭ್ರಷ್ಟವಾಗಿದೆ' ಎಂದು ಆರೋಪಿಸಿದ್ದಾರೆ. "ಸಂತ್ರಸ್ತೆಗೆ ಸಕಾಲದಲ್ಲಿ ವೈದ್ಯಕೀಯ ಆರೈಕೆ ನೀಡಲಾಗಿಲ್ಲ. ಆಕೆಯ ದೂರನ್ನು ಸಮಯಕ್ಕೆ ಸರಿಯಾಗಿ ದಾಖಲಿಸಿಕೊಂಡಿಲ್ಲ. ಆಕೆಯ ದೇಹವನ್ನು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಯಿತು. ಸಂತ್ರಸ್ತೆಯ ಕುಟುಂಬವನ್ನು ಬಂಧನದಲ್ಲಿಡಲಾಗಿದೆ ಮತ್ತು ಒತ್ತಡ ಹೇರುತ್ತಿದೆ. ಈಗ, ಅವರ ನಾರ್ಕೊ ಪರೀಕ್ಷೆ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗುತ್ತಿದೆ "ಈ ನಡವಳಿಕೆಯು ದೇಶಕ್ಕೆ ಸ್ವೀಕಾರಾರ್ಹವಲ್ಲ. ಬಲಿಪಶುವಿನ ಕುಟುಂಬಕ್ಕೆ ಬೆದರಿಕೆ ಹಾಕುವುದನ್ನು ನಿಲ್ಲಿಸಿ." ಎಂದಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹತ್ರಾಸ್ ಸಾಮೂಹಿಕ ಅತ್ಯಾಚಾರ ಘಟನೆ ಕುರಿತು ಉತ್ತರ ಪ್ರದೇಶ ಸರ್ಕಾರ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ.

ಯುಎನ್‍ಐ ಎಸ್‍ಎ 1140

More News
ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ

ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ

29 Nov 2020 | 5:15 PM

ಚೆನ್ನೈ, ನ 29 (ಯುಎನ್‌ಐ) ಸೂಪರ್‌ಸ್ಟಾರ್ ರಜನಿಕಾಂತ್ ಅವರು ನಾಳೆ ರಜಿನಿ ಮಕ್ಕಳ್‍ ಮಂದಿರಂ (ಆರ್ ಎಂಎಂ) ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ನಾಲ್ಕೈದು ತಿಂಗಳಲ್ಲಿ ಎದುರಾಗುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯಕ್ಕೆ ಪ್ರವೇಶಿಸಬೇಕೇ, ಬೇಡವೇ ಎಂಬ ಕುರಿತು ನಿರ್ಧರಿಸಲಿದ್ದಾರೆ.

 Sharesee more..
ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌

ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌

29 Nov 2020 | 5:10 PM

ನವದೆಹಲಿ, ನ 29 (ಯುಎನ್ಐ) ಹಣದ ಕೊರತೆಯ ನೆಪವೊಡ್ಡಿ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ವೇತನ ತಡೆಹಿಡಿದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ, ಎಸ್‌ಸಿ ಮತ್ತು ಎಸ್‌ಟಿ ಯಾವಾಗಲೂ ಹಿಂದುಳಿದಿರಬೇಕು ಎಮದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬಯಸುತ್ತದೆ ಎಂದು ಆರೋಪಿಸಿದ್ದಾರೆ.

 Sharesee more..
ಕೋವಿಡ್‌: ಯಾವುದೇ ನಿರ್ಲಕ್ಷ್ಯ ಮಾರಣಾಂತಿಕವಾಗಬಹುದು-ಮೋದಿ

ಕೋವಿಡ್‌: ಯಾವುದೇ ನಿರ್ಲಕ್ಷ್ಯ ಮಾರಣಾಂತಿಕವಾಗಬಹುದು-ಮೋದಿ

29 Nov 2020 | 5:00 PM

ನವದೆಹಲಿ, ನ 29 (ಯುಎನ್ಐ) ಕೋರೋನಾ ವೈರಸ್‌ ಸೋಂಕನ್ನು ನಿರ್ಲಕ್ಷ್ಯಿಸುವುದು ಮಾರಣಾಂತಿಕವಾಗಿ ಪರಿಗಣಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

 Sharesee more..
ಜಿಎಚ್‌ಎಂಸಿ ಚುನಾವಣೆ: ಹೈದರಾಬಾದ್‍ ನಲ್ಲಿ ಬೃಹತ್ ರೋಡ್‍ ಶೋ ನಡೆಸಿದ ಅಮಿತ್ ಶಾ

ಜಿಎಚ್‌ಎಂಸಿ ಚುನಾವಣೆ: ಹೈದರಾಬಾದ್‍ ನಲ್ಲಿ ಬೃಹತ್ ರೋಡ್‍ ಶೋ ನಡೆಸಿದ ಅಮಿತ್ ಶಾ

29 Nov 2020 | 4:52 PM

ಹೈದರಾಬಾದ್, ನ 29 (ಯುಎನ್ಐ) ಮುಂಬರುವ ಗ್ರೇಟರ್ ಹೈದರಾಬಾದ್ ಮಹಾ ನಗರ ಪಾಲಿಕೆ(ಜಿಎಚ್‍ಎಂಸಿ) ಚುನಾವಣೆಯ ಪ್ರಚಾರದ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು.

 Sharesee more..