Monday, Jan 18 2021 | Time 00:59 Hrs(IST)
Special Share

ಹರಿದ್ವಾರದಿಂದ 120 ದಿನಗಳ ಪ್ರವಾಸ ಆರಂಭಿಸಿದ ಜೆ.ಪಿ.ನಡ್ಡಾ

ಹರಿದ್ವಾರ, ಡಿ 4(ಯುಎನ್ಐ)- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಮ್ಮ 120 ದಿನಗಳ ದೇಶಾದ್ಯಂತ ಪ್ರವಾಸವನ್ನು ಹರಿದ್ವಾರದಿಂದ ಶುಕ್ರವಾರ ಆರಂಭಿಸಿದ್ದಾರೆ.
ಹರಿದ್ವಾರದಲ್ಲಿರುವ ಶಾಂತಿ ಕುಂಜ್ ದೇವ್ ಸಂಸ್ಕೃತಿ ವಿಶ್ವವಿದ್ಯಾಲಯಕ್ಕೆ ಅವರು ಶುಕ್ರವಾರ ಭೇಟಿ ನೀಡಿದ್ದರು ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಅವರು ದೇಶಾದ್ಯಂತ ಪ್ರವಾಸ ನಡೆಸಲಿದ್ದಾರೆ. 2024ರ ಲೋಕಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಕೊಂಡು, 2019ರಲ್ಲಿ ಪರಾಭವಗೊಂಡ ಲೋಕಸಭಾ ಕ್ಷೇತ್ರಗಳಗೆ ಆದ್ಯತೆ ನೀಡಿ, ನಡ್ಡಾ ಅವರ ಪ್ರವಾಸ ಮುಂದುವರಿಯಲಿದೆ.
‘ಶಾಂತಿಕುಂಜ್ ನಲ್ಲಿ ಗುರುಗಳ ಆರ್ಶಿವಾದದೊಂದಿಗೆ ನನ್ನ ಯಾತ್ರೆ ಆರಂಭಿಸಿದ್ದೇನೆ. ಎಲ್ಲ ರಾಜ್ಯಗಳಲ್ಲೂ ಪಕ್ಷದ ಬಲವರ್ಧನೆ ಗುರಿಯಾಗಿರಿಸಿ ಪ್ರವಾಸ ಮುಂದುವರಿಸುವೆ ಎಂದು ನಡ್ಡಾ ಹೇಳಿದರು. ಹರಿದ್ವಾರ ಪ್ರವಾಸದ ಸಂದರ್ಭದಲ್ಲಿ ‘ಹರ್ ಕಿ ಪೋರಿ ಘಾಟ್’ ನಡೆದ ಬಳಿ ಗಂಗಾ ಆರತಿಯಲ್ಲಿ ಜೆ.ಪಿ. ನಡ್ಡಾ ಪಾಲ್ಗೊಂಡಿದ್ದರು, ನಡ್ಡಾ ತಮ್ಮ ದೇಶ ವ್ಯಾಪಿ ಪ್ರವಾಸ ವೇಳೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಿದ್ದತೆಗಳನ್ನು ಪರಿಶೀಲಿಸಲಿದ್ದಾರೆ.
ಪಕ್ಷದ ಶಾಸಕರು, ನಾಯಕರೊಂದಿಗೆ ಚರ್ಚೆ ನಡೆಸುವುದರ ಜತೆಗೆ ತಳ ಮಟ್ಟದ ಕಾರ್ಯಕರ್ತರಲ್ಲಿ ಚೈತನ್ಯ ತುಂಬಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.
ದೊಡ್ಡ ರಾಜ್ಯಗಳಲ್ಲಿ ಮೂರು ದಿನಗಳು, ಸಣ್ಣ ರಾಜ್ಯಗಳಲ್ಲಿ 2 ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಪಕ್ಷದ ಸೋಷಿಯಲ್ ಮೀಡಿಯಾ ಸ್ವಯಂ ಸೇವಕರನ್ನೂ ನಡ್ಡಾ ಭೇಟಿ ಮಾಡಲಿದ್ದಾರೆ.
ಯುಎನ್ಐ ಕೆವಿಆರ್ 21.15
More News
ಪುದುಚೇರಿಯ ಬಿಜೆಪಿ ಶಾಸಕ ಹೃದಯಾಘಾತದಿಂದ ನಿಧನ

ಪುದುಚೇರಿಯ ಬಿಜೆಪಿ ಶಾಸಕ ಹೃದಯಾಘಾತದಿಂದ ನಿಧನ

17 Jan 2021 | 3:48 PM

ಪುದುಚೇರಿ, ಜ.17 (ಯುಎನ್ಐ) ಪುದುಚ ರಿಯ ಬಿಜೆಪಿ ಶಾಸಕ ಕೆ.ಜಿ.ಶಂಕರ್ ಭಾನುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

 Sharesee more..
ಸೋಂಕಿತರಿಗಿಂತಲೂ, ಚೇತರಿಸಿಕೊಂಡವರ ಸಂಖ್ಯೆಯೇ ಹೆಚ್ಚು !

ಸೋಂಕಿತರಿಗಿಂತಲೂ, ಚೇತರಿಸಿಕೊಂಡವರ ಸಂಖ್ಯೆಯೇ ಹೆಚ್ಚು !

17 Jan 2021 | 3:42 PM

ನವದೆಹಲಿ, ಜ 17 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 15,144 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ.

 Sharesee more..
ಹೈ-ಟೆನ್ಷನ್ ವಿದ್ಯುತ್ ತಂತಿ ತಗುಲಿ 6 ಬಸ್ ಪ್ರಯಾಣಿರ ದುರ್ಮರಣ

ಹೈ-ಟೆನ್ಷನ್ ವಿದ್ಯುತ್ ತಂತಿ ತಗುಲಿ 6 ಬಸ್ ಪ್ರಯಾಣಿರ ದುರ್ಮರಣ

17 Jan 2021 | 3:31 PM

ಜಾಲೋರ್, ಜ 17 (ಯುಎನ್ಐ) ಬಸ್ ಗೆ ಹೈ-ಟೆನ್ಷನ್ ವಿದ್ಯುತ್ ತಂತಿ ತಗುಲಿದ ಪರಿಣಾಮ 6 ಮಂದಿ ಮೃತಪಟ್ಟಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರ್ಘಟನೆ ರಾಜಸ್ಥಾನದ ಜಾಲೋರ್ನಲ್ಲಿ ಜರುಗಿದೆ.

 Sharesee more..
ಏಕತಾ  ಪ್ರತಿಮೆಗೆ ಸಂಪರ್ಕ ಕಲ್ಪಿಸುವ 8 ಹೊಸ ರೈಲುಗಳಿಗೆ ಪ್ರಧಾನಿ ಚಾಲನೆ

ಏಕತಾ ಪ್ರತಿಮೆಗೆ ಸಂಪರ್ಕ ಕಲ್ಪಿಸುವ 8 ಹೊಸ ರೈಲುಗಳಿಗೆ ಪ್ರಧಾನಿ ಚಾಲನೆ

17 Jan 2021 | 3:20 PM

ಅಹಮದಾಬಾದ್, ಜನವರಿ 17(ಯುಎನ್ಐ) ದೇಶದ ವಿವಿಧ ಪ್ರದೇಶಗಳಿಂದ ಗುಜರಾತಿನ ಏಕತೆಯ ಪ್ರತಿಮೆಗೆ ತಡೆರಹಿತ ರೈಲು ಸಂಪರ್ಕ ಕಲ್ಪಿಸುವ 8 ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಸಿರು ನಿಶಾನೆ ತೋರಿದ್ದಾರೆ.

 Sharesee more..