Friday, Nov 15 2019 | Time 12:32 Hrs(IST)
  • ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ
  • ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
  • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
  • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
  • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ
  • ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ
  • ಸಹಕಾರಿ ಬ್ಯಾಂಕ್‌ ಸಾಲ ಮನ್ನಾಗೆ 1 ಸಾವಿರ ಕೋಟಿ : ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
Karnataka Share

ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ.ಟಿ.ರವಿ ಆರೋಪ

ಬಾಗಲಕೋಟೆ,ಅ 21(ಯುಎನ್ಐ) ಅನಿವಾರ್ಯವಾಗಿ ಎಐಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.ಹೈಕಮಾಂಡ್​​ಗೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ ಎಂದು ಸಚಿವ ಸಿ ಟಿ ರವಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕನ ಹುದ್ದೆಗೆ ಸರ್ವಾನು ಮತದಿಂದ ಆಯ್ಕೆ ಯಾಗಿಲ್ಲ.ಈ ಹುದ್ದೆಗೆ ಕಾಂಗ್ರೆಸ್ ಘಟಾನುಘಟಿ ನಾಯಕರು ಸ್ಪರ್ಧೆಯಲ್ಲಿದ್ದರು. ಸ್ವಾರ್ಥಿ, ವಲಸಿಗರು,ಮೂಲ ಕಾಂಗ್ರೆಸ್​​ ಅವರನ್ನು ಸಿದ್ದರಾಮಯ್ಯ ಸೋಲಿಸಿ ದರು ಇದನ್ನು ನಾನು ಹೇಳುತ್ತಿಲ್ಲ ಕಾಂಗ್ರೆಸ್​​ ಪಕ್ಷದ ನಾಯಕರೆ ಹೇಳಿರೋದು ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಹುಮತದಿಂದ ಆಯ್ಕೆ ಮಾಡಿಲ್ಲ,ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ.70 ವರ್ಷದ ನಂತರ ಕೇಂದ್ರ ಬಿಜೆಪಿ ಮಾರ್ಗದರ್ಶನ ಮಂಡಳಿಗೆ ಹೋಗುವ ನಿಯಮವಿದೆ. ಹೀಗಾಗಿ ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರು ಅಧಿಕಾರದ ರಾಜಕೀಯದಿಂದ ನೇಪಥ್ಯಕ್ಕೆ ಸರಿದರು.ಯಡಿಯೂರಪ್ಪನವರು ಆ ನಿಯಮ ಮೀರಿ ಮುಖ್ಯಮಂತ್ರಿ ಪಟ್ಟ ಕೊಡಲಾಗಿದೆ. ಹೀಗಿದ್ದಾಗಲೂ ಬಿಎಸ್ ಯಡಿಯೂರಪ್ಪ ಅವರನ್ನು ಹತ್ತಿಕ್ಕುತ್ತಿದ್ದಾರೆ ಎನ್ನುವವರು ಮೂರ್ಖರು ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು

ವೀರ ಸಾವರ್ಕರ್ ಬಗ್ಗೆ ಪುಸ್ತಕವನ್ನು ಸಿದ್ದರಾಮಯ್ಯ ಅವರಿಗೆ ಕಳಿಸುವ ವಿಚಾರ ವಾಗಿ ಮಾತನಾಡಿದ ಅವರು,ಬೆಂಗಳೂರಿಗೆ ಹೋದ ತಕ್ಷಣ ಸಿದ್ದರಾಮಯ್ಯ ಅವರಿಗೆ ಸಾವರ್ಕರ್ ಅವರ ಪುಸ್ತಕ ಕಳುಹಿಸಿ ಕೊಡ್ತೇನೆ.ಅವರು ಓದುವ ಅಭ್ಯಾಸ ಬಹಳವಿದೆ. ಸಾವರ್ಕರ್ ಬಗ್ಗೆ ಪುಸ್ತಕವನ್ನು ಓದಿ ತಿಳಿದುಕೊಳ್ಳಲಿ ಎಂದರು.

ಮಾಜಿ ಸಚಿವ ಎಸ್ ಆರ್ ಪಾಟೀಲ್ ಅವರಿಗೆ ನಾಚಿಕೆಯಾಗಬೇಕು. ಅವರು ಯಾವ ಇತಿಹಾಸ ಓದಿಕೊಂಡಿದ್ದಾರೋ ಗೊತ್ತಿಲ್ಲ. ಬಹುಶಃ ಸ್ವಾತಂತ್ರ್ಯ ನಂತರ ಪಾಕಿಸ್ತಾನ ಇತಿಹಾಸ ಓದಿಕೊಂಡಿದ್ರೆ ಹೀಗೆ ಆಗುತ್ತೆ. ಸುಭಾಷ್ ಚಂದ್ರ ಬೋಸ್, ಆಜಾದ್ ಹಿಂದ್ ಪೌಜ್ ಸೇನೆ ನಿರ್ಮಾಣ ಮಾಡಿ, ಭೂಗತರಾಗಿ ಹೋರಾಟ ಮಾಡೋವಾಗ ನಾನೇ ಮೊದಲು ಅವರನ್ನು ಹಿಡಿದು ಕೊಡುತ್ತೇನೆ ಎಂದು ಗಾಂಧೀಜಿ ಹೇಳಿದ್ದರು‌.ಹಾಗಂತ ಗಾಂಧೀಜಿ ಅವರನ್ನು ದೇಶದ್ರೋಹಿ ಎಂದು ಕರೆಯೋಕೆ ಆಗುತ್ತಾ.!? ಆಗೋಲ್ಲ. ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಎಷ್ಟು ಹೋರಾಡಿದ್ರೋ ಅಷ್ಟೇ ಸಾವರ್ಕರ್ ಸೇರಿದಂತೆ ಕ್ರಾಂತಿಕಾರಿಗಳ ಹೋರಾಟವಿದೆ. ಇದನ್ನು ತಿಳಿದುಕೊಂಡಾಗ ಇತಿಹಾಸದ ಸತ್ಯ ಏನು ಅಂತ ಗೊತ್ತಾಗುತ್ತೆ ಎಂದು ಎಸ್​ ಆರ್​ ಪಾಟೀಲ್​​​​ ಅವರಿಗೆ ತಿರುಗೇಟು ನೀಡಿದರು.

ಬಾರದು ಬಪ್ಪದು,ಬಪ್ಪದು ತಪ್ಪದು ಈಗ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಯಡಿಯೂರೂಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ .ಯಾರ್ಯಾರ ಹಣೆ ಯಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ.ಜನ ಆಶೀರ್ವಾದ ಮಾಡಿದ್ರೆ ಏನುಬೇಕಾ ದರೂ ಆಗಬಹುದು. ಹುಲ್ಲು ಕಡ್ಡಿಯನ್ನು ನಿರ್ಲಕ್ಷಿಸಬೇಡಿ.ಗಾಳಿ ಬಂದರೆ ಹುಲ್ಲುಕಡ್ಡಿ ಗೋಪುರ ಮೇಲೆ ಕುಳಿತುಕೊಳ್ಳುತ್ತದೆ.ಹೋಗುವವರೆಲ್ಲಾ ಹುಲ್ಲು ಕಡ್ಡಿಗೂ ಕೈ ಮುಗಿತಾರೆ.ಬಿರುಗಾಳಿ ಬೀಸಿದರೆ ಗೋಪುರವೂ ತಲೆಕೆಳಗಾಗಿ ಬೀಳುತ್ತೆ. ಹಾಗೆ ಯಾರು ಏನುಬೇಕಾದರೂ ಆಗಬಹುದು ಎಂದರು ಸಿದ್ದರಾಮಯ್ಯ ಅವರಿಗೆ ಸಿಟಿ ರವಿ ತಿರುಗೇಟು ನೀಡಿದರು.

ಯುಎನ್ಐ ಎಸ್ಎಂಆರ್ ವಿಎನ್ 0035