ಬೆಂಗಳೂರು, ಫೆ 22 (ಯುಎನ್ಐ ) ಕಾವೇರಿ ನದಿಯ ಹೆಚ್ಚುವರಿ ನೀರು ಬಳಸಲು ತಮಿಳುನಾಡಿಗೆ ಅವಕಾಶ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕಾವೇರಿ-ಗುಂಡಾರ್ ನದಿ ಜೋಡಣೆಗೆ ಯೋಜನೆಗೆ ತಮಿಳುನಾಡು ಮುಂದಾಗಿದೆ. ಹೆಚ್ಚುವರಿ ನೀರು ಬಳಕೆಗೆ ಕರ್ನಾಟಕ ವಿರೋಧಿಸಿದ್ದು, ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ , ಹೇಳಿಕೆ ಕೊಡುವುದರಿಂದ ಯಾವುದೇ ಉಪಯೋಗವಿಲ್ಲ. ಈ ಸಂಬಂಧ ಬಿಗಿ ಕ್ರಮ ಕೈಗೊಳ್ಳುತ್ತೇವೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದರು.
ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಇಂದು ಎಲ್ಲಾ ಇಲಾಖೆಗಳ ಸಮಾಲೋಚನಾ ಸಭೆ ಮುಗಿಯುತ್ತದೆ. ನಾಳೆಯಿಂದ ಬಜೆಟ್ ಸಿದ್ದತೆ ನಡೆಯಲಿದೆ. ಇಂದು ಬೇರೆ ಇಲಾಖೆಗಳ ಪ್ರಮುಖರ ಜೊತೆ ಚರ್ಚೆ ಮಾಡುತ್ತೇನೆ, ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಂಚಮಸಾಲಿ ಸಮಾಜದ ಸಚಿವರು ಸುದ್ದಿಗೋಷ್ಟಿ ನಡೆಸಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಲಿದ್ದಾರೆ ಎಂದರು.
ಯುಎನ್ಐ ಕೆಎಸ್ಆರ್ 1137