Thursday, Jan 21 2021 | Time 04:35 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
National Share

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಮಹತ್‍ ಸಾಧನೆ, ಟಿಆರ್‍ಎಸ್‍ಗೆ 53 ವಾರ್ಡ್‍ ಗಳಲ್ಲಿ ಗೆಲುವು

ಹೈದರಾಬಾದ್, ಡಿ 4 (ಯುಎನ್ಐ) ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಪ್ರತಿಪಕ್ಷವಾದ ಭಾರತೀಯ ಜನತಾ ಪಾರ್ಟಿ 43 ವಾರ್ಡ್‍ ಗಳನ್ನು ಗೆಲ್ಲುವುದರ ಮೂಲಕ ಮಹತ್‍ ಸಾಧನೆ ಮಾಡಿದ್ದು, ಇನ್ನೂ ಏಳು ವಾರ್ಡ್ ಗಳಲ್ಲಿ ಮುಂದಿದೆ.
ಶುಕ್ರವಾರ ಬೆಳಿಗ್ಗೆ ಕೈಗೆತ್ತಿಕೊಳ್ಳಲಾದ ಮತಎಣಿಕೆಯ ಫಲಿತಾಂಶದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಿರಾಶೆಗೊಂಡಿದ್ದು, 150 ವಾರ್ಡ್‍ ಗಳ ಪೈಕಿ ಕೇವಲ 53 ವಾರ್ಡ್‍ ಗಳಲ್ಲಿ ಜಯ ಸಾಧಿಸಿದ್ದು, ಇನ್ನೂ ಎರಡು ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ.
ಆಡಳಿತಾರೂಢ ಟಿಆರ್‌ಎಸ್, ಬಿಜೆಪಿ ಮತ್ತು ಅಸದುದ್ದೀನ್ ಒವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹುದುಲ್ ಮುಸ್ಲೀಮೀನ್ (ಎಐಎಂಐಎಂ) ನಡುವೆ ತೀವ್ರ ಪೈಪೋಟಿ ಹೊಂದಿದ್ದ ನಗರಪಾಲಿಕೆ ಚುನಾವಣೆಯಲ್ಲಿ ಶೇ 46.55 ರಷ್ಟು ಮತದಾರರು ಮತ ಚಲಾಯಿಸಿದ್ದರು.
ಜಿಎಚ್‌ಎಂಸಿಯ ಒಟ್ಟು 150 ವಾರ್ಡ್‍ ಗಳ ಪೈಕಿ 43 ವಾರ್ಡ್‍ ಗಳಲ್ಲಿ ಎಐಎಂಐಎಂ ಜಯ ಸಾಧಿಸಿದೆ. ಅಂಚೆ ಮತಪತ್ರಗಳ ಎಣಿಕೆ ಮುಗಿದ ನಂತರ ಟಿಆರ್‌ಎಸ್ ಮತ್ತು ಎಐಎಂಐಎಂಗಿಂತ 80 ಕ್ಕೂ ಹೆಚ್ಚು ವಾರ್ಡ್‍ಗಳಲ್ಲಿ ಬಿಜೆಪಿ ಮುಂದಿತ್ತು. ಆದರೆ ಮತಗಟ್ಟೆಗಳ ಮತ ಎಣಿಸಿದ ನಂತರ ಬಿಜೆಪಿ ಹಿನ್ನೆಡೆ ಕಂಡಿತು.
ಜಿಎಚ್‌ಎಂಸಿ ಚುನಾವಣೆಯಲ್ಲಿನ ಗೆಲುವು ಬಿಜೆಪಿಗೆ 2023 ರ ವಿಧಾನಸಭಾ ಚುನಾವಣೆಗೆ ಹೊಸ ನಿರೀಕ್ಷೆಯನ್ನು ಮೂಡಿಸಿದೆ. ಕೇವಲ ಎರಡು ವಾರ್ಡ್ ಗಳಲ್ಲಿ ಕಾಂಗ್ರೆಸ್‌ ಗೆದ್ದಿರುವುದರಿಂದ ಮುಂದಿನ ಚುನಾವಣೆಯಲ್ಲಿ ಆ ಪಕ್ಷ ಲೆಕ್ಕಕ್ಕಿಲ್ಲ ಎಂಬುದು ಈ ಫಲಿತಾಂಶಗಳಿಂದ ಸಾಬೀತಾಗಿದೆ.
ಯುಎನ್‍ಐ ಎಸ್ಎಲ್ಎಸ್ 1946