Friday, May 29 2020 | Time 10:52 Hrs(IST)
 • 58 ಕಾರ್ಮಿಕರ ಜೀವ ಉಳಿಸಿದ ಸಾಮಾಜಿಕ ಜಾಲತಾಣ
 • ಡ್ರಗ್ಸ್ ಮಾರಾಟ ದಂಧೆ: ನೈಜೀರಿಯಾ ಪ್ರಜೆಯ ಬಂಧನವನ್ನು ಎತ್ತಿಹಿಡಿದ ಹೈಕೋರ್ಟ್‌
 • ವಂದೇ ಭಾರತ್ ಮಿಷನ್: 45 ಸಾವಿರ ಭಾರತೀಯರು ತವರಿಗೆ
 • ಮೆಕ್ಸಿಕೋದಲ್ಲಿ ಕೊರೊನಾ ಸೋಂಕಿಗೆ ಮತ್ತೆ 447 ಬಲಿ, ಒಟ್ಟು 9,044 ಸಾವು
 • ಚಿಲಿಯಲ್ಲಿ 87 ಸಾವಿರ ಕೊರೊನಾ ಸೋಂಕು ಪ್ರಕರಣ
 • ರಾಜ್ಯಸಭಾ ಸದಸ್ಯ ವಿರೇಂದ್ರಕುಮಾರ್ ಇನ್ನಿಲ್ಲ
 • ಸೊಲ್ಲಾಪುರ; ಕೃಷಿ ಭೂಮಿಯಲ್ಲಿ ಸುಮಾರು ೭೦೦ ಪುರಾತನ ನಾಣ್ಯಗಳ ಪತ್ತೆ
 • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
 • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
 • ಲಾಕ್ ಡೌನ್; ರಾಜ್ಯಗಳ ಅಭಿಪ್ರಾಯ ಕೇಳಿದ ಗೃಹ ಸಚಿವ ಅಮಿತ್ ಶಾ
Karnataka Share

ಹೆದ್ದಾರಿಗಳಲ್ಲಿ ಖಾಸಗಿ ಕಂಪನಿಗಳಿಂದ ಟೋಲ್ ಸಂಗ್ರಹ; ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಅ 21 (ಯುಎನ್ಐ) ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ವಕೀಲರಾದ ಗೀತಾ ಮಿಶ್ರಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಅಟಾರ್ನಿ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್ 22ಕ್ಕೆ ಮುಂದೂಡಿತು.

ಕೇಂದ್ರ ಸರ್ಕಾರ 1995ರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕಾಯ್ದೆಯ ಸೆಕ್ಷನ್ 8 ಎ ಅನುಸಾರ ಖಾಸಗಿ ಕಂಪನಿಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಸಂಗ್ರಹಿಸಲು ಅನುಮತಿ ನೀಡಿದೆ. ಇದು ರಾಷ್ಟ್ರೀಯ ಹೆದ್ದಾರಿ 1957 ಹಾಗೂ ಸಂವಿಧಾನದ 14,19 (1)(ಡಿ) ಹಾಗೂ 21 ಪರಿಚ್ಛೇದದ ಉಲ್ಲಂಘನೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಯುಎನ್ಐ ಎಸ್ಎಚ್ 2101
More News
ಗ್ರಾ ಪಂ ಗೆ ನಾಮನಿರ್ದೇಶನ‌ ಸದಸ್ಯರ ನೇಮಕ: ಸರ್ಕಾರದ ವಿರುದ್ಧ ಕಾನೂನು ಹೋರಾಟ- ಸಿದ್ದರಾಮಯ್ಯ

ಗ್ರಾ ಪಂ ಗೆ ನಾಮನಿರ್ದೇಶನ‌ ಸದಸ್ಯರ ನೇಮಕ: ಸರ್ಕಾರದ ವಿರುದ್ಧ ಕಾನೂನು ಹೋರಾಟ- ಸಿದ್ದರಾಮಯ್ಯ

28 May 2020 | 10:18 PM

ಬೆಂಗಳೂರು, ಮೇ 28(ಯುಎನ್‌ಐ) ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸರ್ಕಾರ ಗ್ರಾಮಪಂಚಾಯಿತಿ ಚುನಾವಣೆಯನ್ನು ಮುಂದೂಡಿ ನಾಮನಿರ್ದೇಶನ ಸದಸ್ಯರ ನೇಮಕಕ್ಕೆ ಮುಂದಾಗಿರುವುದರ ವಿರುದ್ಧ ಕಾಂಗ್ರೆಸ್ ಗ್ರಾಮಪಂಚಾಯಿತಿ ಮಟ್ಟದಲ್ಲಿ ಹೋರಾಟ ನಡೆಸಲು ಸಜ್ಜಾಗಿದೆ.

 Sharesee more..
ಪ್ಯಾರಿಸ್ ನಿಂದ 172 ಪ್ರಯಾಣಿಕರು ಬೆಂಗಳೂರಿಗೆ ಆಗಮನ

ಪ್ಯಾರಿಸ್ ನಿಂದ 172 ಪ್ರಯಾಣಿಕರು ಬೆಂಗಳೂರಿಗೆ ಆಗಮನ

28 May 2020 | 10:08 PM

ಬೆಂಗಳೂರು, ಮೇ 28 (ಯುಎನ್ಐ) ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ ಫ್ರಾನ್ಸ್ ನ ಪ್ಯಾರಿಸ್ ನಿಂದ ಗುರು ವಾರ ಸಂಜೆ 4 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಪ್ಪತ್ತೊಂದನೇ ಏರ್ ಇಂಡಿಯಾ ವಿಮಾನದಲ್ಲಿ 172 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.

 Sharesee more..