Thursday, Jan 21 2021 | Time 04:22 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
Special Share

ಹೋರಾಟ ತೀವ್ರಗೊಳಿಸಲು ರಾಜಸ್ತಾನದ ರೈತರು ಜಂತರ್ ಮಂತರ್ ಗೆ ಆಗಮನ

ಜೈಪುರ, ಡಿಸೆಂಬರ್ 1 (ಯುಎನ್‌ಐ) ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ನಡೆಯುತ್ತಿರುವ 'ದೆಹಲಿ ಚಲೋ' ಚಳವಳಿಯಲ್ಲಿ ಭಾಗವಹಿಸಲು ರಾಜಸ್ಥಾನದ ರೈತರು ಶೀಘ್ರದಲ್ಲೇ ನವದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ತಲುಪಲಿದ್ದಾರೆ ಎಂದು ಕಿಸಾನ್ ಮಹಾಪಂಚಾಯತ್ ನಾಯಕ ರಾಂಪಾಲ್ ಜಾಟ್ ಹೇಳಿದ್ದಾರೆ.
ಮೂರು ಕಾನೂನುಗಳನ್ನು ವಿರೋಧಿಸಿ ದೇಶಾದ್ಯಂತ ರೈತರು ರಸ್ತೆಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಕಾಯ್ದೆ ವಿರೋಧಿಸಿ ರೈತರು ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದಾರೆ ಎಂದು ಜಾಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೈತರನ್ನು ಅನಿವಾರ್ಯವಾಗಿ ತಮ್ಮ ಗದ್ದೆಗಳಿಂದ ಹೊರಗೆ ತಂದು ಬೀದಿಯಲ್ಲಿ ಪ್ರತಿಭಟನೆ ನಡೆಸುವಂತೆ ಕೇಂದ್ರ ಸರ್ಕಾರ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜಸ್ಥಾನದಿಂದ ಅನೇಕ ರೈತ ತಂಡಗಳು ದೆಹಲಿಗೆ ತೆರಳುತ್ತಿವೆ ಮತ್ತು ಕೆಲವರು ಈಗಾಗಲೇ ಎರಡು-ಮೂರು ದಿನಗಳ ಹಿಂದೆ ದೆಹಲಿ ತಲುಪಿದ್ದಾರೆ ಎಂದು ಅವರು ಹೇಳಿದರು.
ರಾಜಸ್ಥಾನದಿಂದ ಬಂದ ರೈತರು ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಹರಿಯಾಣ-ರಾಜಸ್ಥಾನ ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 8 ಮೂಲಕ ಶಹಜಹಾನ್‌ ಪುರ ತಲುಪಲಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಅಲ್ಲಿಂದ ಹರಿಯಾಣ ಮತ್ತು ಉತ್ತರ ಪ್ರದೇಶದ ಹಲವು ರೈತ ಗುಂಪುಗಳೊಂದಿಗೆ ಸೇರಿಕೊಂಡು ಅವರು ದೆಹಲಿಯ ಜಂತರ್ ಮಂತರ್ ಕಡೆಗೆ ಸಾಗಲಿದ್ದಾರೆ.
ಉತ್ತರ ಪ್ರದೇಶದ ಕಿಸಾನ್ ಸಂಘರ್ಷ ಸಮಿತಿ ಅಧ್ಯಕ್ಷ ಹಿಮ್ಮತ್ ಸಿಂಗ್ ಗುರ್ಜರ್ ಮಾತನಾಡಿ, ಸರ್ವಾಧಿಕಾರಿ ಕೇಂದ್ರ ಸರ್ಕಾರವು ರೈತರ ಬೃಹತ್ ರಾಲಿಯನ್ನು ಕಡೆಗಣಿಸುತ್ತಿದೆ, ರೈತರ ಮಾರ್ಗವನ್ನು ನಿರ್ಬಂಧಿಸಿ, ಬ್ಯಾರಿಕೇಡ್‌ ಗಳನ್ನು ಹಾಕಿ ಮತ್ತು ರಸ್ತೆಯನ್ನು ಅಗೆಯುತ್ತಿದೆ. ಕೇಂದ್ರವು ರೈತರ ವಿರುದ್ಧ ದಬ್ಬಾಳಿಕೆಯ ನಿಲುವನ್ನು ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.
ಯುಎನ್ಐ ಎಎಚ್ 1707
More News
ಸ್ವಯಂ ಘೋಷಿತ ಆಧ್ಯಾತ್ಮಿಕ ನಾಯಕರ ಆಶ್ರಮಗಳ ವಿರುದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸ್ವಯಂ ಘೋಷಿತ ಆಧ್ಯಾತ್ಮಿಕ ನಾಯಕರ ಆಶ್ರಮಗಳ ವಿರುದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

20 Jan 2021 | 3:56 PM

ನವದೆಹಲಿ, ಜ 20(ಯುಎನ್ಐ)- ಸ್ವಯಂ ಘೋಷಿತ ಆಧ್ಯಾತ್ಮಿಕ ಗುರುಗಳು ನಡೆಸುತ್ತಿರುವ ಆಶ್ರಮಗಳ ವಿರುದ್ಧ ಕ್ರಮ ಜರುಗಿಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಖಟ್ಲೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

 Sharesee more..