Saturday, Jan 18 2020 | Time 20:48 Hrs(IST)
 • ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಿಪೇಯ್ಡ್‌ ಮೊಬೈಲ್‌ನ ಎಸ್‌ಎಂಎಸ್, ಧ್ವನಿ ಸಂದೇಶ ಪುನಾರಂಭ
 • ಗೋರಿಪಾಳ್ಯ ಅಲ್ತಾಫ್​ ಖಾನ್​ ಮರಳಿ ಕಾಂಗ್ರೆಸ್ ತೆಕ್ಕೆಗೆ
 • ಗುಡಿಯಾ ಅತ್ಯಾಚಾರ ಪ್ರಕರಣ: ನ್ಯಾಯ ವಿಳಂಬ ನ್ಯಾಯದ ನಿರಾಕರಣೆ- ಅರವಿಂದ ಕೇಜ್ರಿವಾಲ್
 • “ಉತ್ತರ ಕೊಡಿ ಅಮಿತ್ ಶಾ’ ರಾಜ್ಯ ಕಾಂಗ್ರೆಸ್ ನಿಂದ ಸರಣಿ ಟ್ವೀಟ್ ಸವಾಲು
 • ಸಿನಿಮಾ, ದಾರಾವಾಹಿಗಳ ಅಬ್ಬರದ ನಡುವೆಯೂ ರಂಗಭೂಮಿ ಪ್ರೇಕ್ಷಕರಿಗೆ ಕೊರೆತೆಯಾಗಿಲ್ಲ: ಶೇಖ್ ಮಾಸ್ತರ
 • ರಜನಿಕಾಂತ್ ವಿರುದ್ದ ಪ್ರಕರಣ ದಾಖಲು
 • ಪಣಂಬೂರ್‌ ಬೀಚ್‌ನಲ್ಲಿ ಗಮನ ಸೆಳೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
 • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೨ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ
 • ನಾಳೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ: ರಾಜ್ಯದಲ್ಲಿ 64 65 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
 • ನವೋದ್ಯಮಕ್ಕೆ ಬೆಂಗಳೂರು ರಾಜಧಾನಿ: ರವಿಶಂಕರ್ ಪ್ರಸಾದ್
 • ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬರಲಿ: ರಾಹುಲ್ ಗೆ ಅಮಿತ್ ಶಾ ಸವಾಲು
 • ಭಾರತ ಟೆಸ್ಟ್‌ ತಂಡಕ್ಕೂ ಕಮ್‌ಬ್ಯಾಕ್ ಮಾಡಲಿರುವ ಕನ್ನಡಿಗ ರಾಹುಲ್ ?
 • ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದು ಸುಳ್ಳು ಹೇಳಲು: ಸಿದ್ದರಾಮಯ್ಯ
 • ಸೊಮಾಲಿಯಾ ದಕ್ಷಿಣ ಪ್ರಾಂತ್ಯದಲ್ಲಿ ಸೇನಾ ಪಡೆಗಳಿಂದ 16 ಅಲ್-ಷರಾಬ್ ಉಗ್ರರ ಹತ್ಯೆ
 • ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ಓಪನ್‌ಗೆ ಅರ್ಹತೆ ಪಡೆದ ಪ್ರಜ್ಞೇಶ್ ಗುಣೇಶ್ವರನ್
Parliament Share

೨೦೦೦ ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

೨೦೦೦ ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ
೨೦೦೦ ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ, ಡಿ ೧೦(ಯುಎನ್‌ಐ) ದೇಶದಲ್ಲಿ ನೋಟು ಅಮಾನ್ಯೀಕರಣ ನಂತರ ಚಲಾವಣೆಗೆ ತರಲಾಗಿರುವ ೨ ಸಾವಿರ ರೂಪಾಯಿ ನೋಟುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಲಿದೆ ಎಂದು ಹಬ್ಬಿರುವ ವರದಿಗಳಿಗೆ ಸ್ಪಂದಿಸಿರುವ ಸರ್ಕಾರ ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ರಾಜ್ಯ ಸಭೆಗೆ ಸ್ಪಷ್ಟಪಡಿಸಿದೆ.

೨ ಸಾವಿರ ರೂ ನೋಟುಗಳನ್ನು ಸರ್ಕಾರ ರದ್ದುಗೊಳಿಸಲಿದೆ ಎಂದು ಹಬ್ಬಿರುವ ವದಂತಿಗಳು ಆದಾರ ರಹಿತ, ಆವಾಸ್ತವ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದರು.

ಈ ಬಗ್ಗೆ ಯಾರೊಬ್ಬರೂ ಚಿಂತಿಸುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದರು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರೊಬ್ಬರು, ೨೦೦೦ ರೂ ನೋಟನ್ನು ಸರ್ಕಾರ ಹಿಂತೆಗೆದುಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಸ್ಪಷ್ಟನೆ ನೀಡಿದರು

ಸಮಾಜವಾದಿ ಪಕ್ಷದ ಸದಸ್ಯ ವಿಶ್ವಂಬರ್ ಪ್ರಸಾದ್ ನಿಷಾದ್ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ೨೦೦೦ ರ ನೋಟು ಚಲಾವಣೆಗೆ ತಂದ ನಂತರ ದೇಶದಲ್ಲಿ ಕಪ್ಪುಹಣ ಹೆಚ್ಚಾಗಿದೆ ಎಂಬುದು ಜನರ ಆಕ್ರೋಶ ವಾಗಿದೆ. ಸರ್ಕಾರ ೨೦೦೦ ರೂ ನೋಟುಗಳನ್ನು ಹಿಂಪಡೆದು ಅದರ ಸ್ಥಾನದಲ್ಲಿ ೧,೦೦೦ ರೂ ನೋಟುಗಳನ್ನು ಮತ್ತೆ ಪರಿಚಯಿಸಲಿದೆ ಎಂಬ ವದಂತಿಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ ಎಂದು ಸರ್ಕಾರದ ಗಮನ ಸೆಳೆದರು.

ದೇಶದಲ್ಲಿ ಕಪ್ಪು ಹಣ ನಿರ್ಮೂಲನೆ ಮತ್ತು ನಕಲಿ ನೋಟುಗಳ ಹಾವಳಿ ತೊಲಗಿಸಲು ನೋಟುಗಳ ಅಮಾನ್ಯೀಕರಣ ಕ್ರಮ ಕೈಗೊಂಡಿತ್ತು ಎಂದು ಸಚಿವ ಠಾಕೂರ್ ಸಮರ್ಥಿಸಿಕೊಂಡರು. ಅನೌಪಚಾರಿಕ ಆರ್ಥಿಕತೆಯನ್ನು, ಔಪಚಾರಿಕ ಆರ್ಥಿಕತೆಯನ್ನಾಗಿಸಲು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಮಹತ್ವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿತ್ತು ಎಂದು ಸಚಿವರು ಹೇಳಿದರು.

ಯುಎನ್‌ಐ ಕೆವಿಆರ್ ೧೮.೩೦