Saturday, Aug 15 2020 | Time 10:55 Hrs(IST)
  • ಭಾರತ - ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
  • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
  • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
Entertainment Share

೩೦೦ಕ್ಕೂ ಹೆಚ್ಚು ಮಕ್ಕಳ ‘ಗಿರ್ಮಿಟ್’ ನಾಯಕ-ನಾಯಕಿಗೆ ಯಶ್, ರಾಧಿಕಾ ಧ್ವನಿ!

ಬೆಂಗಳೂರು, ಅ ೨೧ (ಯುಎನ್‌ಐ) ಓಂಕಾರ್ ಮೂವೀಸ್ ಹಾಗೂ ರವಿ ಬಸ್ರೂರ್ ಮೂವೀಸ್ ಲಾಂಛನದಲ್ಲಿನಿರ್ಮಾಣವಾಗಿರುವ ಸಂಪೂರ್ಣವಾಗಿ ಮಕ್ಕಳೇ ಅಭಿನಯಿಸಿರುವ ಪಕ್ಕಾ ಕಮರ್ಷಿಯಲ್ ಚಿತ್ರ ಗಿರ್ಮಿಟ್ ಮುಂದಿನ ತಿಂಗಳ ೮ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ
ಸುಮಾರು ೩೦೦ಕ್ಕೂ ಹೆಚ್ಚು ಮಕ್ಕಳು ಈ ಚಿತ್ರದಲ್ಲಿ ಬರುವ ಕಮರ್ಷಿಯಲ್ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ
ಈ ಹಿಂದೆ ಕಟಕ ಚಿತ್ರವನ್ನು ನಿರ್ದೇಶಿಸಿದ್ದ ರವಿ ಬಸ್ರೂರು ಅವರು ಈ ಚಿತ್ರದ ಮೂಲಕ ಹೊಸದೊಂದು ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ
ಡ್ರಾಮಾ ಜೂನಿಯರ್ಸ್‌ನಂಥ ರಿಯಾಲಿಟಿ ಷೋಗಳಲ್ಲಿ ಅನಾವರಣ ಆಗುತ್ತಿರುವ ಮಕ್ಕಳ ಪ್ರತಿಭೆ ಕಂಡು ನಿರ್ದೇಶಕ ರವಿ ಬಸ್ರೂರು ಬಿಗ್ ಸ್ಕ್ರೀನ್ ಮೇಲೆ ಇಂಥದೊಂದು ಪ್ರಯತ್ನ ಮಾಡಿದ್ದಾರೆ
ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಲ್ಲಿರುವಂತೆ ಆಕ್ಷನ್, ಕಾಮಿಡಿ, ಫ್ಯಾಮಿಲಿ ಡ್ರಾಮಾ ಹೀಗೆ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡ ಈ ಚಿತ್ರದಲ್ಲಿ ಮಕ್ಕಳಿಗೆ ದೊಡ್ಡವರು ದನಿಯಾಗಿದ್ದಾರೆ. ಅಂದರೆ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ರಂಗಾಯಣ ರಘು, ಅಚ್ಯುತ್‌ಕುಮಾರ್, ಸುಧಾ ಬೆಳವಾಡಿ, ಸಾಧುಕೋಕಿಲ, ನಯನ, ಅನುಪಮಾಗೌಡ ಮುಂತಾದವರು ಮಕ್ಕಳ ಪಾತ್ರಗಳಿಗೆ ತಮ್ಮ ವಾಯ್ಸ್ ನೀಡಿದ್ದಾರೆ
ವಿಶೇಷವಾಗಿ ಗಿರ್ಮಿಟ್ ಚಿತ್ರದ ಹೀರೋ-ಹೀರೋಯಿನ್ ಪಾತ್ರಗಳಿಗೆ ಯಶ್, ರಾಧಿಕಾ ಪಂಡಿತ್ ಧ್ವನಿ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಗಿರ್ಮಿಟ್ ಒಂದು ಹೊಸ ಪ್ರಯೋಗವಾಗಿದೆ.
ಯುಎನ್‌ಐ ಎಸ್‌ಎ ವಿಎನ್ ೨೦೪೬