Friday, Oct 22 2021 | Time 21:51 Hrs(IST)
Entertainment Share

ಮಗನಿಗಾಗಿ ಮತ್ತೆ ಒಟ್ಟುಗೂಡಿದ ಬಾಲಿವುಡ್‌ ಮಾಜಿ ಜೋಡಿ

ಮುಂಬೈ, ಸೆ 27(ಯುಎನ್‌ ಐ) ಬಾಲಿವುಡ್ ನಟ ಅಮೀರ್ ಖಾನ್, ಕಿರಣ್ ರಾವ್ ದಂಪತಿ ಈ ವರ್ಷದ ಆರಂಭದಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ, ಇತ್ತೀಚೆಗೆ ಮಾಜಿ ದಂಪತಿಗಳು ತಮ್ಮ ಪುತ್ರ ಆಜಾದ್ ಜೊತೆ ಹೊರಗೆ ಊಟಕ್ಕೆ ತೆರಳಿದ್ದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಸುಮಾರು 15 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಈ ದಂಪತಿಗೆ ಆಜಾದ್ (9) ಎಂಬ ಪುತ್ರನಿದ್ದಾನೆ. ವಿಚ್ಛೇದನ ಪಡೆದುಕೊಂಡ ನಂತರ ಇತ್ತೀಚೆಗೆ ಮೊದಲ ಬಾರಿಗೆ ಭಾನುವಾರ (ಸೆಪ್ಟೆಂಬರ್ 26) ಎಲ್ಲರೂ ಒಟ್ಟುಗೂಡಿ ಊಟಕ್ಕೆ ಹೊರಗೆ ತೆರಳಿದ್ದರು. ಭಾರೀ ಭದ್ರತೆಯ ನಡುವೆ ಆಗಮಿಸಿದ ಅವರು ಊಟದ ನಂತರ ಫೋಟೋಗಳಿಗೆ ಸ್ಟಿಲ್ ನೀಡಿದರು.
ಆದರೆ.. ಅವರಿಬ್ಬರೂ ಬೇರ್ಪಟ್ಟ ನಂತರವೂ ಅಮೀರ್ ಖಾನ್ ಅವರ ಹೊಸ ಚಿತ್ರ 'ಲಾಲ್ ಸಿಂಗ್ ಚಡ್ಡಾ' ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಮಗನಿಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ಹೊಣೆ ಹಂಚಿಕೊಳ್ಳಲು ನಿರ್ಧರಿಸಿದ್ದಾಗಿ ಈ ಹಿಂದೆ ಪ್ರಕಟಿಸಿದ್ದರು. ಇತ್ತೀಚೆಗೆ, ಲಡಾಖ್‌ನಲ್ಲಿ ಚಿತ್ರೀಕರಣದ ವೇಳೆ ಮಾಜಿ ಜೋಡಿ ಅಲ್ಲಿನ ಸ್ಥಳೀಯರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಯುಎನ್‌ ಐ ಕೆವಿಆರ್‌ 1408
More News
“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

21 Oct 2021 | 2:01 PM

 Sharesee more..
ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

21 Oct 2021 | 12:28 PM

ಬೇಲ್ ಗಾಗಿ ಅಲೆದಾಡುತ್ತಿರುವ ಬಿಟೌನ್ ಸ್ಟಾರ್ ಪುತ್ರನ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಮುಂಬೈ ಹೈಕೋರ್ಟ್ ನಡೆಯಲಿದೆ. ಅರ್ಥರ್ ರೋಡ್ ಜೈಲು ಪಾಲಾಗಿರುವ ಆರ್ಯನ್ ಖಾನ್, ಕಳೆದ 18 ದಿನಗಳಿಂದ ಬಂಧನದಲ್ಲಿದ್ದಾನೆ.

 Sharesee more..