Tuesday, Sep 28 2021 | Time 03:53 Hrs(IST)
Sports Share

ಆರ್ಚರಿ: ಅತನು ದಾಸ್ ಗೆ ನಿರಾಸೆ

ಟೋಕಿಯೊ, ಜು.31 (ಯುಎನ್ಐ)- ಆರ್ಚರಿಯಲ್ಲಿ ಪದಕ ಗೆಲ್ಲುವ ಭಾರತದ ಭರವಸೆಯೂ ಕೊನೆಗೊಂಡಿದೆ. ಕೊನೆಯ ಭಾರತೀಯ ಬಿಲ್ಲುಗಾರ ಅತನು ದಾಸ್ ಶನಿವಾರ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಸೋತರು.

ಲಂಡನ್ 2012 ರ ಒಲಿಂಪಿಕ್ ಬೆಳ್ಳಿ ವಿಜೇತ ಜಪಾನ್‌ನ ತಕಹರು ಫುರುಕವಾ ವಿರುದ್ಧ 16 ನೇ ಸುತ್ತಿನಲ್ಲಿ ಆತನು 4-6 ಅಂತರದಲ್ಲಿ ಸೋತರು. ಪ್ರಣವ್ ಜಾಧವ್ ಮತ್ತು ತರುಂದೀಪ್ ರೈ ಈ ಹಿಂದೆ ವೈಯಕ್ತಿಕ ಸ್ಪರ್ಧೆಯ 32 ನೇ ಸುತ್ತಿನಲ್ಲಿ ಸೋತಿದ್ದರು. ಈ ಮೂವರ ಪುರುಷರ ತಂಡ ಕ್ವಾರ್ಟರ್ ಫೈನಲ್ ನಲ್ಲಿ ದಕ್ಷಿಣ ಕೊರಿಯಾದ ವಿರುದ್ಧ ಸೋತಿದ್ದರು.

ಪ್ರವೀಣ್ ಮತ್ತು ದೀಪಿಕಾ ಕುಮಾರಿಯ ಮಿಶ್ರ ಡಬಲ್ಸ್ ತಂಡವು ಸೆಮಿಫೈನಲ್‌ಗೆ ಮುನ್ನ ಸೋಲಿ ಕಂಡಿತ್ತು.

ಯುಎನ್ಐ ವಿಎನ್ಎಲ್ 1728