Tuesday, Sep 28 2021 | Time 04:06 Hrs(IST)
Karnataka Share

ಕಲ್ಲಡ್ಕ ಪ್ರಭಾಕರ್ ಭೇಟಿ ಮಾಡಿದ ಈಶ್ವರಪ್ಪ

ಕಲ್ಲಡ್ಕ ಪ್ರಭಾಕರ್ ಭೇಟಿ ಮಾಡಿದ ಈಶ್ವರಪ್ಪ
ಕಲ್ಲಡ್ಕ ಪ್ರಭಾಕರ್ ಭೇಟಿ ಮಾಡಿದ ಈಶ್ವರಪ್ಪ

ಬೆಂಗಳೂರು, ಜು.31(ಯುಎನ್‌ಐ) ಸಂಪುಟದಿಂದ ಕೈಬಿಡುವ ಹಿನ್ನಲೆಯಲ್ಲಿ ಸಿಎಂ ಬೊಮ್ಮಾಯಿಯ ನೂತನ ಸಂಪುಟ ರಚನೆಯಲ್ಲಿ ಸ್ಥಾನಪಡೆಯಲು ರಾಷ್ಟ್ರೀಯ ಸ್ವಯಂ ಸೇವ ಸಂಘದ ನಾಯಕ ಕಲ್ಕಡ್ಕ ಪ್ರಭಾಕರ್ ಭಟ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಕೆಲಕಾಲ ಚರ್ಚಿಸಿದರು.

ಭೇಟಿಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದರೂ ಸಹ ಒಮ್ಮೆಯೂ ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗದೇ ಇರುವುದು ದುರಂತ. ಅವರಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸಲು ಅವಕಾಶ ಸಿಗಲಿಲ್ಲ ಎಂದು ಸೂಚ್ಯವಾಗಿ ಹೇಳಿದರು. ಸಂಪುಟದಿಂದ ಹಿರಿಯ ನಾಯಕರನ್ನು ಕೈಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ,ಸಂಪುಟರಚನೆ ಬಗ್ಗೆ ಕೇಂದ್ರದ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ.

ಸಂಘಟನೆಗೆ ಅನುಕೂಲ ಆಗಬೇಕು. ನಮ್ಮ ಪಕ್ಷದ ಎಷ್ಟೋ ಪ್ರಮುಖ ನಾಯಕರನ್ನು ಬೇರೆಬೇರೆ ಹಂತದಲ್ಲಿ ಕೈ ಬಿಟ್ಟಿದ್ದಾರೆ.ಇತ್ತೀಚೆಗೆ ಕೇಂದ್ರ ಸಂಪುಟ ಪುನಾರಚನೆ ವೇಳೆ ಹರ್ಷವರ್ಧನ್, ರವಿ ಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್ ಎಲ್ಲರನ್ನೂ ಕೈ ಬಿಟ್ಟಿದ್ದಾರೆ.

ಇನ್ನು ಈ ಈಶ್ವರಪ್ಪ ಯಾವೂರು ದಾಸಯ್ಯ? ಎಂದು ಮಾರ್ಮಿಕವಾಗಿ ನುಡಿದರು.ನನಗೆ ಈಗಲೂ ನೂರಾರು ಮಂದಿ ಫೋನ್ ಮಾಡಿ ಯಡಿಯೂರಪ್ಪ, ಅನಂತ್ ಕುಮಾರ್ ನೀವೆಲ್ಲಾ ಹಿರಿಯರು ಪಕ್ಷ ಕಟ್ಟಿದವರು

ನಿಮ್ಮನ್ನು ಬಿಡಬಾರದು ಎಂದು ಅಭಿಮಾನಿಗಳು, ಸ್ವಾಮೀಜಿಗಳು ಹೇಳುತ್ತಿದ್ದಾರೆ .ಡಿಸಿಎಂ ಆದರೂ ಮಾಡಬೇಕಿತ್ತು ಎಂದು ಹೇಳುತ್ತಿದ್ದಾರೆ.

ನೋಡೋಣ ಏನು ಮಾಡ್ತಾರೋ ಗೊತ್ತಿಲ್ಲ.ಅಂತಿಮವಾಗಿ ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು.

ಮುಂದೆ ನಮ್ಮ ಸರ್ಕಾರ ಬರಲು ರಾಜ್ಯಾಧ್ಯಕ್ಷ

ನಳಿನ್ ಕುಮಾರ್ ಕಟೀಲ್ ನೇತೃತ್ವ ಸೇರಿದಂತೆ ಪಕ್ಷದ ನಾಯಕ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ.ಐದನೇ ಬಾರಿಗೆ ಬಿಜೆಪಿಯವರೇ ಸಿಎಂ ಆಗುತ್ತಾರೆಂದು ಈಶ್ವರಪ್ಪ ಭವಿಷ್ಯ ನುಡಿದರು.

ಬಿಜೆಪಿ ಪಕ್ಷ ನಮಗೆ ತಾಯಿ ಇದ್ದಂತೆ.ಆದರೆ ಕಾಂಗ್ರೆಸ್‌‌ನ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಮಗ ಎಂದರೆ

ಬಾದಾಮಿಯಲ್ಲಿ ಅಳಿಯ ಎನ್ನುತ್ತಾರೆ.ಚಾಮರಾಜಪೇಟೆ ಸೊಸೆ ಎನ್ನುತ್ತಾರೆ.ಸಿದ್ದರಾಮಯ್ಯ ಮೊದಲು

ಕಾಂಗ್ರೆಸ್ ಪಕ್ಷ‌ ತಾಯಿಯೋ ಜೆಡಿಎಸ್ ಪಕ್ಷ ತಾಯಿಯೋ, ಯಾವುದು ನಿಮ್ಮ ತಾಯಿ ಪಕ್ಷ ಯಾವುದು ಮೊದಲು ಹೇಳಬೇಕೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈಶ್ವರಪ್ಪ ಉತ್ತರಿಸಿದರು‌.

ಯುಎನ್‌ಐ ಯುಎಲ್, 1914

More News
ಎಸ್ಐಟಿ ರಚನೆಯ ಕಾನೂನಾತ್ಮಕ, ಸಾಂವಿಧಾನಿಕ ಸಿಂಧುತ್ವ ನಿರ್ಧರಿಸಿದ ಬಳಿಕ ಎಸ್ಐಟಿ ವರದಿ ಸಲ್ಲಿಸಲಿ: ಹೈಕೋರ್ಟ್ಗೆ ಜೈಸಿಂಗ್ ವಿವರಣೆ

ಎಸ್ಐಟಿ ರಚನೆಯ ಕಾನೂನಾತ್ಮಕ, ಸಾಂವಿಧಾನಿಕ ಸಿಂಧುತ್ವ ನಿರ್ಧರಿಸಿದ ಬಳಿಕ ಎಸ್ಐಟಿ ವರದಿ ಸಲ್ಲಿಸಲಿ: ಹೈಕೋರ್ಟ್ಗೆ ಜೈಸಿಂಗ್ ವಿವರಣೆ

27 Sep 2021 | 9:33 PM

ಪ್ರಕರಣ ವಿಚಾರಣೆಗೆ ಬರುತ್ತಿದ್ದಂತೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಹೈಕೋರ್ಟ್ನ ಮುಂದಿನ ಆದೇಶಕ್ಕೆ ಒಳಪಟ್ಟು ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದ ಎಸ್ಐಟಿ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿಸಬೇಕು. ಈ ಸಂಬಂಧ ನ್ಯಾಯಾಲಯದ ಅನುಮತಿ ಇಲ್ಲದೇ ವರದಿ ಸಲ್ಲಿಸುವಂತಿಲ್ಲ ಎಂದು ಹೈಕೋರ್ಟ್ ಹಿಂದೆ ಹೊರಡಿಸಿರುವ ಮಧ್ಯಂತರ ಆದೇಶವನ್ನು ತೆರೆವುಗೊಳಿಸಬೇಕು” ಎಂದು ಪುನರುಚ್ಚರಿಸಿದರು.

 Sharesee more..
ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಯನೀಯ ಸ್ಥಿತಿ: ಕೆಎಸ್ಎಲ್ಎಸ್ಎ ವರದಿಯಲ್ಲಿ ಬಹಿರಂಗ

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಯನೀಯ ಸ್ಥಿತಿ: ಕೆಎಸ್ಎಲ್ಎಸ್ಎ ವರದಿಯಲ್ಲಿ ಬಹಿರಂಗ

27 Sep 2021 | 9:31 PM

ಗ್ರಾಮೀಣ ಭಾಗದ ಪಿಎಚ್ಸಿಗಳಲ್ಲಿ ಸೌಲಭ್ಯದ ಕೊರತೆ ಇದೆ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ (ಪಿಐಎಲ್) ಸಂಬಂಧಿಸಿದಂತೆ ಹೈಕೋರ್ಟ್ ಕೆಎಸ್ಎಲ್ಎಸ್ಎಗೆ ಪಿಎಚ್ಸಿಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲು ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್ಎಲ್ಎಸ್ಎ ಸದಸ್ಯ ಕಾರ್ಯದರ್ಶಿಗಳು ರಾಜ್ಯದಾದ್ಯಂತ 100 ಪಿಎಚ್ಸಿಗಳು ಮತ್ತು ಒಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಕುರಿತು ವರದಿ ಸಲ್ಲಿಸಿದ್ದಾರೆ. ಇದರ ಸಮಗ್ರ ವರದಿಯನ್ನು ಕೆಎಸ್ಎಲ್ಎಸ್ಎ ಈಚೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಸಿದೆ. ಕೆಎಸ್ಎಲ್ಎಸ್ಎ ವರದಿಯಲ್ಲಿರುವ ಪ್ರಮುಖ ಅಂಶಗಳು ಇಂತಿವೆ

 Sharesee more..

ಪಕ್ಷ ವಿರೋಧಿಗಳಿಗೆ ಹೆಚ್ ಡಿ ಕೆ ತಿರುಗೇಟು

27 Sep 2021 | 8:47 PM

 Sharesee more..
ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ; ಗೌರವ್‌ ಗುಪ್ತ

ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ; ಗೌರವ್‌ ಗುಪ್ತ

27 Sep 2021 | 7:26 PM

ಬೆಂಗಳೂರು, ಸೆ 27 (ಯುಎನ್ಐ) ರಾಜಾಜಿನಗರ ಶಿವನಗರ 1ನೇ ಮುಖ್ಯರಸ್ತೆ ಮತ್ತು 8ನೇ ಮುಖ್ಯ ರಸ್ತೆ 655 ಮಿಟರ್ ಉದ್ದದ ಗ್ರೇಡ್ ಸೆಪರೇಟರ್ ಮೇಲುಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಬಾಕಿಯಿರುವ ಸಣ್ಣ-ಪುಟ್ಟ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.

 Sharesee more..