Friday, Sep 17 2021 | Time 11:27 Hrs(IST)
International Share

ಹತ್ಯೆ ಯತ್ನದಿಂದ ಮಡಗಾಸ್ಕರ್ ಅಧ್ಯಕ್ಷ ಪಾರು

ಮಾಸ್ಕೋ, ಜುಲೈ 22 (ಯುಎನ್ಐ/ಸ್ಪುಟ್ನಿಕ್ ) - ಆಫ್ರಿಕಾದ ದ್ವೀಪ ರಾಷ್ಟ್ರ ಮಡಗಾಸ್ಕರ್ ಅಧ್ಯಕ್ಷ ಆಂಡ್ರಿ ರಾಜೋಲಿನಾ ಹತ್ಯೆ ಪ್ರಯತ್ನದಿಂದ ಪಾರಾಗಿದ್ದಾರೆ ಎಂದು ಫ್ರಾನ್ಸ್-ಪ್ರೆಸ್ ಮಾಧ್ಯಮವನ್ನು ಉಲ್ಲೇಖಿಸಿ ಸ್ಪುಟ್ನಿಕ್ ಸುದ್ದಿಸಂಸ್ಥೆ ವರದಿ ಮಾಡಿದೆ.
ರಾಜೋಲಿನಾ ಮೇಲಿನ ಯತ್ನವನ್ನು ಅಧಿಕಾರಿಗಳು ವಿಫಲಗೊಳಿಸಿದ್ದು, ಈ ಸಂಬಂಧ ಆನೇಕ ವಿದೇಶಿಯರು ಮತ್ತು ಮಡಗಾಸ್ಕರ್ ನಿವಾಸಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಸುದ್ದಿ ಸಂಸ್ಥೆಯ ರಾಜತಾಂತ್ರಿಕ ಮೂಲದಂತೆ, ತನಿಖೆಯ ಭಾಗವಾಗಿ ಬಂಧಿಸಲ್ಪಟ್ಟವರಲ್ಲಿ ಇಬ್ಬರು ಫ್ರಾನ್ಸ್ ಪ್ರಜೆಗಳಾಗಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಯುಎನ್ಐ ಎಸ್ಎಲ್ಎಸ್ 1409