Friday, Oct 22 2021 | Time 22:25 Hrs(IST)
Entertainment Share

ಓಟಿಟಿಯಲ್ಲಿ ನಾಳೆ 'ಜಿಲ್ಕಾ'

ಬೆಂಗಳೂರು, ಸೆ. 09(ಯುಎನ್ಐ) ಗಣೇಶ ಚತುರ್ಥಿಯ ದಿನವಾದ ನಾಳೆ ಅಮೆಜಾನ್ ಪ್ರೈಮ್ ಮತ್ತು ನಮ್ಮ ಫ್ಲೆಕ್ಸ್ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಅಪ್ಪಟ ಹಾಸ್ಯ, ಭಾವನಾತ್ಮಕ ಮತ್ತು ಇವತ್ತಿನ ಯಂಗ್ ಜನರೇಷನ್ನಿಗೆ ಒಪ್ಪುವಂತಹ ಮನೋರಂಜನೆಯ ಚಿತ್ರ 'ಜಿಲ್ಕಾ' ಬಿಡುಗಡೆಯಾಗುತ್ತಿದೆ.
ಉಡುಪಿ ಮೂಲದ ಯುವ ನಟ ಕವೀಶ್ ಶೆಟ್ಟಿ ತನ್ನದೇ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಚಿತ್ರದ ಮೂಲಕ ಉದಯೋನ್ಮುಖ ನಾಯಕ ಮತ್ತು ನಿರ್ದೇಶಕನಾಗಿ ಹೊರ ಹೊಮ್ಮಿದ್ದಾನೆ. ಈ ಚಿತ್ರದಲ್ಲಿ ಎರಡು ತಲೆಮಾರುಗಳಲ್ಲಿ ಮನುಷ್ಯನ ಸಂಬಂಧ ಮತ್ತು ಭಾವನೆಗಳಲ್ಲಿ ಉಂಟಾದ ಬದಲಾವಣೆ ಮತ್ತು ಅದರ ಪ್ರಭಾವಗಳನ್ನು ತುಂಬಾ ಸೊಗಸಾಗಿ ಚಿತ್ರಿಸಲಾಗಿದೆ.

ಅಲ್ಲದೆ, ಕವೀಶ್ ಶೆಟ್ಟಿ ಪಾತ್ರಕ್ಕೆ ಸಹಜತೆಯನ್ನು ಒದಗಿಸುವ ಕಾರಣಕ್ಕೆ ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ನಾಯಕನ ದೈಹಿಕ ತೂಕವನ್ನು 52, 68 ಮತ್ತು 78 ಕೆಜಿಯಷ್ಟು ತೂಕವನ್ನು ಪಾತ್ರದ ವಯಸ್ಸಿಗೆ ತಕ್ಕಂತೆ ಶ್ರಮವಹಿಸಿ ಏರಿಳಿತಗೊಳಿಸಿ ನಟಿಸಿರುವುದು ವಿಶೇಷವಾಗಿ ಎದ್ದು ಕಾಣುತ್ತದೆ.

ಚಿತ್ರದಲ್ಲಿ ಪ್ರಿಯಾ ಹೆಗ್ಡೆ, ಲಕ್ಷ್ಯ ಶೆಟ್ಟಿ, ಗೋಪಿಕಾ ದಿನೇಶ್ ಮುಂತಾದವರು ನಟಿಸಿದ್ದಾರೆ. ಲಾಕ್ಡೌನಿಗೂ ಮುನ್ನ ಥಿಯೇಟರ್ನಲ್ಲಿ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿದ್ದ ಚಿತ್ರ ಲಾಕ್ಡೌನ್ ಕಾರಣದಿಂದ ಹೆಚ್ಚಿನ ಸಿನಿಮಾ ಪ್ರಿಯರಿಗೆ ನೋಡುವ ಅವಕಾಶ ಸಿಕ್ಕಿರಲಿಲ್ಲ, ಅದೀಗ ಅಮೆಜಾನ್ ಪ್ರೈಮ್ ಮತ್ತು ನಮ್ಮ ಫ್ಲೆಕ್ಸ್ ಮೂಲಕ ನೆರವೇರುತ್ತಿದೆ.

ಯುಎನ್ಐ ಎಸ್ಎ 1317
More News
“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

21 Oct 2021 | 2:01 PM

 Sharesee more..
ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

21 Oct 2021 | 12:28 PM

ಬೇಲ್ ಗಾಗಿ ಅಲೆದಾಡುತ್ತಿರುವ ಬಿಟೌನ್ ಸ್ಟಾರ್ ಪುತ್ರನ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಮುಂಬೈ ಹೈಕೋರ್ಟ್ ನಡೆಯಲಿದೆ. ಅರ್ಥರ್ ರೋಡ್ ಜೈಲು ಪಾಲಾಗಿರುವ ಆರ್ಯನ್ ಖಾನ್, ಕಳೆದ 18 ದಿನಗಳಿಂದ ಬಂಧನದಲ್ಲಿದ್ದಾನೆ.

 Sharesee more..