Tuesday, Nov 30 2021 | Time 18:17 Hrs(IST)
National Share

ಇನ್ಮುಂದೆ ರೈಲುಗಳಲ್ಲೇ ತಯಾರಾಗಲಿದೆ ಊಟ

ನವದೆಹಲಿ,ಅ.22(ಯುಎನ್‌ಐ)ಇಷ್ಟು ದಿನಗಳ ಕಾಲ ರೈಲಿನಲ್ಲಿ ಪ್ರಯಾಣಿಸುವವರಿಗೆ ಸಿದ್ಧ ಆಹಾರ ಸಿಗುತ್ತಿತ್ತು.ಅದು ಕೂಡ ಸ್ಟಾಪ್‌ಗಳಲ್ಲಿ ಹೊರಗಿನಿಂದ ಸಿದ್ಧಾಹಾರಗಳನ್ನು ತಂದು ಮಾರುತ್ತಿದ್ದರು.ಅದು ರುಚಿಯೋ ಶುಚಿಯೋ ಗೊತ್ತಿಲ್ಲ.ದೂರದೂರಕ್ಕೆ ಪ್ರಯಾಣಿಸುವವರು
ಅನಿವಾರ್ಯವಾಗಿ ಹೊಟ್ಟೆತುಂಬಿಸಿಕೊಳ್ಳಲು ತಿನ್ನಲೇಬೇಕು.ಆದರೆ ಇದೀಗ ಭಾರತೀಯ ರೈಲ್ವೆ ಇಲಾಖೆ ರೈಲು ಪ್ರಯಾಣಿಕರಿಗೆ ಒಳ್ಳೆಯ ಸುದ್ದಿ ನೀಡಿದೆ.
ಶೀಘ್ರದಲ್ಲೇ ಪ್ಯಾಂಟ್ರಿ ಕಾರಿನ ಮೂಲಕ ರೈಲುಗಳಲ್ಲಿ ಆಹಾರ ಲಭ್ಯವಾಗಲಿದೆ.ಇಲ್ಲಿಯವರೆಗೆ 'ತಿನ್ನಲು ಸಿದ್ಧ' ಎಂಬ ವ್ಯವಸ್ಥೆ ಮಾತ್ರ ಇತ್ತು ಆದರೆ ದೂರುಗಳ ನಂತರ, ಭಾರತೀಯ ರೈಲ್ವೇಸ್ ಈಗ ಕೆಲವು ಆಯ್ದ ರೈಲುಗಳಲ್ಲಿ ಹಂತ ಹಂತವಾಗಿಈ ವ್ಯವಸ್ಥೆ ಆರಂಭಿಸಲು ನಿರ್ಧರಿಸಿದೆ.
ರೈಲ್ವೆ ಪ್ಯಾಂಟ್ರಿ ಕಾರ್ ಸೌಲಭ್ಯವನ್ನು ಆಯ್ದ ಮಾರ್ಗಗಳು ಮತ್ತು ರೈಲುಗಳಲ್ಲಿ ಪರಿಚಯಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ. ಆಹಾರದ ಬೆಲೆಯಿಂದ ಗುಣಮಟ್ಟದವರೆಗೆ ಪ್ರಯಾಣಿಕರು ಸತತ ದೂರು ನೀಡುತ್ತಿರುವುದನ್ನು ಮನಗಂಡ ಐಆರ್‌ಸಿಟಿಸಿ ಮೂಲಗಳ ಪ್ರಕಾರ, 'ತಿನ್ನಲು ಸಿದ್ಧ' ಆಹಾರದ ಮೌಲ್ಯಮಾಪನದ ಪ್ರಕಾರ, ಜನರು ಅದರಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲ. ಹಿಂದಿನದಕ್ಕೆ ಹೋಲಿಸಿದರೆ, ಜನರು ರೈಲಿನಲ್ಲಿ ಆಹಾರವನ್ನು ಶೇಕಡ 30 ರಷ್ಟು ಮಾತ್ರ ಖರೀದಿಸಲು ಆಯ್ಕೆ ಮಾಡುತ್ತಾರೆ. ಉದಾಹರಣೆಗೆ, ಒಂದು ರೈಲಿನ ಮಾರಾಟವು ಐದು ಲಕ್ಷದವರೆಗೆ ಇತ್ತು, ಈಗ ಅದು ಕೇವಲ 1.5 ಲಕ್ಷಕ್ಕೆ ಇಳಿದಿದೆ.