Friday, Sep 17 2021 | Time 13:01 Hrs(IST)
International Share

ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು

ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು

ಮಾಸ್ಕೋ, ಆಗಸ್ಟ್ 2 (ಯುಎನ್ಐ) ಅಫ್ಘಾನ್ ನಗರ ಹೆರಾತ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಕದನದಲ್ಲಿ ನಾಗರಿಕರು ಸೇರಿದಂತೆ ಕನಿಷ್ಠ 20 ಜನ ಸಾವನ್ನಪ್ಪಿದ್ದು, ಇತರೆ 90 ಜನರು ಗಾಯಗೊಂಡಿದ್ದಾರೆ ಎಂದು ನ್ಯೂಸ್ ಟಿವಿ ಚಾನೆಲ್ ವರದಿ ಮಾಡಿದೆ.ವಾರಾಂತ್ಯದಲ್ಲಿ,ತಾಲಿಬಾನ್ ಹೋರಾಟಗಾರರು ಹೆರಾತ್ ಹೊರವಲಯವನ್ನು ವಶಪಡಿಸಿಕೊಂಡಿದ್ದಾರೆ ಎಂದೂ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ವಾಯುವ್ಯ ಹೆರಾತ್ ಪ್ರಾಂತ್ಯದ 17 ಜಿಲ್ಲೆಗಳ ಪೈಕಿ 16 ಜಿಲ್ಲೆಗಳು ಈಗ ತಾಲಿಬಾನ್ ನಿಯಂತ್ರಣದಲ್ಲಿವೆ ಟೊಲೊ ನ್ಯೂಸ್ ಪ್ರಕಾರ, ಹೆರಾತ್ ನಗರದಲ್ಲಿ ಕಳೆದ ನಾಲ್ಕು ದಿನಗಳ ಕಾಳಗದಲ್ಲಿ ಹಲವು ನಾಗರಿಕರ ಜೊತೆಗೆ ಅನೇಕ ಯೋಧರು ಸಾವನ್ನಪ್ಪಿದ್ದಾರೆ. ಎಂದು ವರದಿಯಾಗಿದೆ .

ಭಾನುವಾರ, ಸರ್ಕಾರವು ಹೆರಾತ್ ನಗರಕ್ಕೆ ಸೇನೆಯನ್ನು ಕಳುಹಿಸಿದೆ. ಈ ಪ್ರದೇಶದಲ್ಲಿ ತಾಲಿಬಾನ್ ವಿರುದ್ಧ ದೊಡ್ಡ-ಪ್ರಮಾಣದ ಕಾರ್ಯಾಚರಣೆ ಘೋಷಿಸಿತ್ತು. ಸರ್ಕಾರಿ ಪಡೆ ಮತ್ತು ತಾಲಿಬಾನ್‌ಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ.

ಗ್ರಾಮೀಣ ಪ್ರದೇಶಗಳನ್ನು ವಶಪಡಿಸಿಕೊಂಡು ಮತ್ತು ದೊಡ್ಡ ನಗರಗಳ ಮೇಲೆತಾಲಿಬಾನ್ ಆಕ್ರಮಣ ಹೆಚ್ಚಾಗುತ್ತಿದೆ.ಅಫ್ಘಾನಿಸ್ತಾನದಿಂದ ಅಂತಾರಾಷ್ಟ್ರೀಯ ಸೇನೆ ಹಿಂತೆಗೆದುಕೊಂಡ ನಂತರ ದೇಶದಲ್ಲಿ ಆಶಾಂತಿ ,ಜೊತೆಗೆ ಹಿಂಸಾಚಾರ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಯುಎನ್ಐ ಕೆಎಸ್ಆರ್ 0944