Friday, Sep 17 2021 | Time 12:33 Hrs(IST)
International Share

ಅಫ್ಘಾನಿಸ್ತಾನದಲ್ಲಿ ಸೇನಾ ದಾಳಿ: 21 ಉಗ್ರರ ಹತ್ಯೆ

ಅಫ್ಘಾನಿಸ್ತಾನದಲ್ಲಿ ಸೇನಾ ದಾಳಿ: 21 ಉಗ್ರರ ಹತ್ಯೆ
ಅಫ್ಘಾನಿಸ್ತಾನದಲ್ಲಿ ಸೇನಾ ದಾಳಿ: 21 ಉಗ್ರರ ಹತ್ಯೆ

ಕಾಬೂಲ್, ಜುಲೈ 31 (ಯುಎನ್ಐ) ಅಫ್ಘಾನಿಸ್ತಾನದ ಉತ್ತರ ಜಾವ್ಜಾನ್ ಪ್ರಾಂತ್ಯದಲ್ಲಿ ಶುಕ್ರವಾರ ತಾಲಿಬಾನ್ ಪ್ರಮುಖ ನೆಲೆಗಳ ಮೇಲೆ ಸೇನಾ ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ 21 ಉಗ್ರರು ಮೃತಪಟ್ಟಿದ್ದಾರೆ.

ಈ ವಿಷಯವನ್ನು ಸೇನಾ ವಕ್ತಾರ ಮೊಹಮ್ಮದ್ ಹನೀಫ್ ರೆಜಾಯಿ ತಿಳಿಸಿದ್ದಾರೆ. ಮುರ್ಘಾಬ್, ಹಸಂತಬಿನ್, ಮತ್ತು ಅಕ್ಕ ಪಕ್ಕದ ಹಳ್ಳಿಗಳಲ್ಲಿ ತಾಲಿಬಾನ್ ನೆಲೆಗಳನ್ನು ಪ್ರಮಖ ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿದೆ.

ಈ ದಾಳಿಯಲ್ಲಿ 21 ಉಗ್ರರರು ಹತರಾಗಿದ್ದು ನಂತರ ಇತರೆ 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಹೊರಬಂದ ನಂತರ ತಾಲಿಬಾನ್ ಉಗ್ರ ಚಟುವಟಿಕೆಗಳನ್ನು ತೀವ್ರಗೊಳಿಸಿ, ಸುಮಾರು 200 ಜಿಲ್ಲೆಗಳನ್ನು ವಶಪಡಿಸಿಕೊಂಡಿದೆ ಎಂದೂ ವರದಿಯಾಗಿದೆ.

ಯುಎನ್ಐ ಕೆಎಸ್ಆರ್ 1258