Tuesday, Nov 30 2021 | Time 17:54 Hrs(IST)
National Share

ನಟಿ ಸುಧಾ ಚಂದ್ರನ್‌ ಕ್ಷಮೆಯಾಚಿಸಿದ ಸಿಐಎಸ್ಎಫ್

ನವದೆಹಲಿ, ಅ. 22(ಯುಎನ್‌ಐ) ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಐಎಸ್‌ಎಫ್, ನಟಿ ಮತ್ತು ಪ್ರಸಿದ್ಧ ಶಾಸ್ತ್ರೀಯ ನೃತ್ಯಗಾರ್ತಿ ಸುಧಾ ಚಂದ್ರನ್ ಅವರ ಕ್ಷಮೆಯಾಚಿಸಿದೆ.

ಪ್ರತಿಬಾರಿಯ ವಿಮಾನ ಪ್ರಯಾಣದ ಸಂದರ್ಭದಲ್ಲಿ ಆಕೆಯ ಕೃತಕ ಕಾಲನ್ನು ತೆಗೆಯುವಂತೆ ಹೇಳಲಾಗುತ್ತಿತ್ತು. ಇದರಿಂದ ತೀವ್ರ ಯಾತನೆಗೆ ಒಳಗಾದ ಆಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದರು.

ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ವಿಡಿಯೋವನ್ನು ಪೋಸ್ಟ್ ಮಾಡಿ ಇದು ತನಗೆ ತುಂಬಾ ನೋವಿನ ಅನುಭವವಾಗಿದೆ ಮತ್ತು ಇಡೀ ಘಟನೆಯಿಂದ ತುಂಬಾ ಬೇಸರವಾಗುತ್ತಿದೆ ಎಂದು ಹೇಳಿದ್ದರು.

ಈ ನಿಟ್ಟಿನಲ್ಲಿ ಟ್ವೀಟ್ ಮಾಡಿರುವ ಸಿಐಎಸ್‌ಎಫ್, “ಸುಧಾ ಚಂದ್ರನ್‌ ಅವರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ತುಂಬಾ ವಿಷಾದಿಸುತ್ತೇವೆ. ನಿಯಮಾವಳಿಯ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಭದ್ರತಾ ತಪಾಸಣೆಗಾಗಿ ಕೃತಕ ಅಂಗವನ್ನು ತೆಗೆಯಬೇಕಾಗುತ್ತದೆ” ಎಂದು ಹೇಳಿದೆ.

ಮತ್ತೊಂದು ಟ್ವೀಟ್ ನಲ್ಲಿ, "ಸಂಬಂಧಿತ ಮಹಿಳಾ ಸಿಬ್ಬಂದಿ ಸುಧಾ ಚಂದ್ರನ್ ಅವರ ಕೃತಕ ಕಾಲನ್ನು ತೆಗೆಯುವಂತೆ ಏಕೆ ವಿನಂತಿಸಿದರು ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನಮ್ಮ ಎಲ್ಲ ಸಿಬ್ಬಂದಿಯನ್ನು ಪ್ರೋಟೋಕಾಲ್‌ಗಳಲ್ಲಿ ಮತ್ತೊಮ್ಮೆ ಜಾಗೃತಗೊಳಿಸಲಾಗುವುದು ಎಂದು ಸುಧಾಚಂದ್ರನ್ ಅವರಿಗೆ ಚಂದ್ರನಿಗೆ ಭರವಸೆ ನೀಡುತ್ತೇವೆ” ಎಂದು ತಿಳಿಸಿದೆ.

ಯುಎನ್ಐ ಎಸ್ಎ 1901