Friday, Sep 17 2021 | Time 12:17 Hrs(IST)
Entertainment Share

ನಟ ದುನಿಯಾ ವಿಜಯ್ ಗೆ ಮಾತೃವಿಯೋಗ

ಬೆಂಗಳೂರು, ಜುಲೈ 08(ಯುಎನ್ಐ) ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರಿಗೆ ಮಾತೃವಿಯೋಗವಾಗಿದೆ.

ಕಳೆದ 20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ನಾರಾಯಣಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕೋವಿಡ್ ಸೋಂಕಿನಿಂದ ಗುಣಮುಖರಾದ ನಂತರ ಬ್ರೇನ್ ಸ್ಟ್ರೋಕ್ ಉಂಟಾಗಿ ಹಾಸಿಗೆ ಹಿಡಿದಿದ್ದರು.
ದುನಿಯಾ ವಿಜಯ್ ಅವರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 'ಅಮ್ಮಾ ಮತ್ತೆ ಹುಟ್ಟಿ ಬಾ' ಎಂದು ಬರೆದುಕೊಂಡಿದ್ದಾರೆ.
“ಅಮ್ಮನ ಆರೋಗ್ಯ ಬಿಗಡಾಯಿಸುತ್ತಿದೆ” ಎಂದು ಕಳೆದ ಕೆಲ ದಿನಗಳ ಹಿಂದೆ ಜಾಲತಾಣಗಳಲ್ಲಿ ತಿಳಿಸಿ ನೋವು ತೋಡಿಕೊಂಡಿದ್ದರು.

ಯುಎನ್ಐ ಎಸ್‍ಎ 1715
More News

'ತಲೈವಿ' ಚಿತ್ರ ವೀಕ್ಷಿಸಿದ ರಜನಿಕಾಂತ್‌

15 Sep 2021 | 10:45 PM

 Sharesee more..

"ರಾಣ" ಟೀಸರ್ ರಿಲೀಸ್

15 Sep 2021 | 7:03 PM

 Sharesee more..