Friday, Sep 17 2021 | Time 13:30 Hrs(IST)
Sports Share

ದಕ್ಷಿಣ ಕೊರಿಯಾ: ಎರಡು ಲಕ್ಷದ ಸನಿಹ ಕೊರನಾ ಸೋಂಕಿತರು

ದಕ್ಷಿಣ ಕೊರಿಯಾ: ಎರಡು ಲಕ್ಷದ ಸನಿಹ ಕೊರನಾ ಸೋಂಕಿತರು
ದಕ್ಷಿಣ ಕೊರಿಯಾ: ಎರಡು ಲಕ್ಷದ ಸನಿಹ ಕೊರನಾ ಸೋಂಕಿತರು

ಸೋಲ್, ಆ.1 (ಯುಎನ್ಐ) ದಕ್ಷಿಣ ಕೊರಿಯಾದಲ್ಲಿ, ಕಳೆದ 24 ಗಂಟೆಗಳಲ್ಲಿ 1,442 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾದ ನಂತರ ಸೋಂಕಿತರ ಸಂಖ್ಯೆ 1,99,787 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಂದು ದಿನ ಮುಂಚೆ ವರದಿಯಾದ 1,539 ಇದ್ದವು. ಭಾನುವಾರ ಪ್ರಕಟಗೊಂಡ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕಾಣುತ್ತಿದೆ. ಆದರೆ ಕಳೆದ 26 ದಿನಗಳಿಂದ 1000 ಕ್ಕೂ ಹೆಚ್ಚು ಸೋಂಕಿತರು ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಕೊರೋನಾ ಪ್ರಕರಣಗಳ ಇತ್ತೀಚಿನ ಹೆಚ್ಚಳವು ಸಿಯೋಲ್ ಮತ್ತು ಅದರ ಸುತ್ತಮುತ್ತಲಿನ ಜಿಯೊಂಗ್ಗಿ ಪ್ರಾಂತ್ಯದಲ್ಲಿ ಸೋಂಕಿನ ಪ್ರಕರಣಗಳಲ್ಲಿ ಗಣನೀಯ ಹೆಚ್ಚಳವಾಗಿದೆ. ಹೊಸ ಪ್ರಕರಣಗಳಲ್ಲಿ, 469 ಮಂದಿ ಸಿಯೋಲ್‌ನ ನಿವಾಸಿಗಳಾಗಿದ್ದರೆ, 393 ಜನರು ಜಿಯೊಂಗ್ಗಿ ಪ್ರಾಂತ್ಯದವರು.

ಇದೇ ಸಮಯದಲ್ಲಿ, ವಿದೇಶದಿಂದ 56 ಸೋಂಕಿತ ಜನರು ಬಂದಿದ್ಪದಾರೆ. ಒಟ್ಟು ಸಂಖ್ಯೆಯನ್ನು 11,952 ಕ್ಕೆ ಹೆಚ್ಚಿಸಿದ್ದಾರೆ. ದೇಶಾದ್ಯಂತ ಇನ್ನೂ ಮೂರು ಸಾವುಗಳು ದೃಢಪಟ್ಟಿದ್ದು, ಸಾವಿನ ಸಂಖ್ಯೆ 2,098 ಕ್ಕೆ ತಲುಪಿದೆ. ಒಟ್ಟಾರೆ ಮರಣ ಪ್ರಮಾಣ 1.05 ಶೇಕಡಾ ಆಗಿದೆ. ಸಂಪೂರ್ಣ ಚೇತರಿಸಿಕೊಂಡ ನಂತರ ಒಟ್ಟು 1,497 ರೋಗಿಗಳನ್ನು ಕ್ವಾರಂಟೈನ್ ನಿಂದ ಬಿಡುಗಡೆ ಮಾಡಲಾಯಿತು, ಸೋಂಕಿನಿಂದ ಮುಕ್ತರಾದವರ ಸಂಖ್ಯೆಯನ್ನು 175,674 ಕ್ಕೆ ಏರಿಕೆ ಆಗಿದೆ.

ಯುಎನ್ಐ ವಿಎನ್ಎಲ್ 1335