Tuesday, Nov 30 2021 | Time 18:04 Hrs(IST)
Entertainment Share

ಶ್ರಮಪಟ್ಟರೆ ಜನ ಗುರುತಿಸುತ್ತಾರೆ: “ರೈಡರ್” ನಿಖಿಲ್

ಶ್ರಮಪಟ್ಟರೆ ಜನ ಗುರುತಿಸುತ್ತಾರೆ: “ರೈಡರ್” ನಿಖಿಲ್
ಬೆಂಗಳೂರು, ಅ. 18(ಯುಎನ್ಐ) ಚಲನಚಿತ್ರ ರಂಗದಲ್ಲಿನ ಇಂದಿನ ಆರೋಗ್ಯಕರ ಪೈಪೋಟಿಯಲ್ಲಿ ನಮ್ಮನ್ನು ಗುರುತಿಸಬೇಕಾದರೆ ನಾವು ಹೆಚ್ಚು ಶ್ರಮ ಪಡಬೇಕು. ಆಗ ಖಂಡಿತಾ ಜನ ಒಪ್ಪಿಕೊಳ್ಳುತ್ತಾರೆ ಅಂತ ನಟ ನಿಖಿಲ್ ಕುಮಾರ್ ಹೇಳಿದ್ದಾರೆ.

ಸೀತಾರಾಮ ಕಲ್ಯಾಣ ಚಿತ್ರದ ನಂತರ ನಿಖಿಲ್ ನಟಿಸಿರುವ "ರೈಡರ್" ಚಿತ್ರದ ಹಾಡೊಂದರ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದ್ದು, ಆ ಸಂದರ್ಭದಲ್ಲಿ ಉತ್ತಮ ಚಿತ್ರಗಳು ಹಾಗೂ ಅಭಿನಯ ಕುರಿತು ತಮ್ಮ ಅನಿಸಿಕೆಯನ್ನು ಈ ರೀತಿ ವ್ಯಕ್ತಪಡಿಸಿದ್ರು.
ಸೀತಾರಾಮ ಕಲ್ಯಾಣ ಚಿತ್ರದ ಸಮಯದಲ್ಲಿ ಈ ರೀತಿಯ ಕಥೆ ಬೇಕು ಎಂದು ನಿರ್ದೇಶಕ ವಿಜಯಕುಮಾರ್ ಕೊಂಡ ಅವರಿಗೆ ಹೇಳಿದ್ದೆ. ಅಂತೆಯೇ ನಿರ್ದೇಶಕರು ಉತ್ತಮವಾಗಿ ಚಿತ್ರ ಮೂಡಿಬರುವಂತೆ ಮಾಡಿದ್ದಾರೆ ಎಂದು ರೈಡರ್ ಚಿತ್ರದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರ ಕಾರ್ಯ ವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಬಿಡುಗಡೆಯಾಗಿರುವ ಹಾಡನ್ನು ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದು, ಅರ್ಮಾನ್ ಮಲ್ಲಿಕ್ ಸೊಗಸಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಯೂಟ್ಯೂಬ್ ನಲ್ಲಿ ಈ ಹಾಡು ಭಾರಿ ಸದ್ದು ಮಾಡುತ್ತಿದೆ.

“ನನಗೆ ವೇದಿಕೆ ಹತ್ತಿದ ಮೇಲೆ ಏಕೋ ಡವಡವ ಶುರುವಾಗಿದೆ. ನಾವು ಸಿನಿಮಾ ಸಿದ್ಧ ಮಾಡಿರುತ್ತೇವೆ. ಪ್ರೇಕ್ಷಕರ ಮುಂದಿಡುವ ಸಮಯ ಬಂದಾಗ, ಅವರಿಗೆ ಬೇಕಾದ ಹಾಗೆ ಸಿನಿಮಾ ಮಾಡಿದ್ದೀವಾ? ಎಂಬ ಪ್ರಶ್ನೆ ಕಾಡುತ್ತದೆ. ಕಾಡಲೂ ಬೇಕು. ಆದರೂ ನಮ್ಮ ತಂಡಕ್ಕೆ ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ವಿಶ್ವಾಸವಿದೆ. ಅಲ್ಲದೇ ಸದ್ಯದಲ್ಲೇ ನಮ್ಮ ಸಂಸ್ಥೆ ಮೂಲಕ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುತ್ತೇವೆ ಎಂಬ ವಿಷಯವನ್ನು ನಿಖಿಲ್ ಕುಮಾರ್ ತಿಳಿಸಿದರು.

ನಾಯಕಿ ಕಾಶ್ಮೀರ ಪರದೇಶಿ, ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ‌. ಕಥೆ ಇಷ್ಟವಾಯಿತು. ನಾನು ಇದರಲ್ಲಿ ಸೌಮ್ಯ ಎಂಬ ಪಾತ್ರ ನಿರ್ವಹಿಸುತ್ತಿದ್ದೀನಿ. ಎಲ್ಲರ ಪ್ರೋತ್ರಾಹವಿರಲಿ ಎಂದರು.

ನಮ್ಮ ಚಿತ್ರದಲ್ಲಿ ಆಕ್ಷನ್, ಲವ್, ಎಮೋಷನಲ್ ಎಲ್ಲವೂ ಇದೆ. ನನಗೆ ಸಹಕಾರ ನೀಡಿದ ನಿರ್ಮಾಪಕರಿಗೆ, ನಿಖಿಲ್ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದಿದ್ದು ನಿರ್ದೇಶಕ ವಿಜಯ್ ಕುಮಾರ್ ಕೊಂಡ.

ನಿರ್ಮಾಪಕ ಸುನೀಲ್, ನಿಖಿಲ್ ಕುಮಾರ್ ಸೇರಿದಂತೆ ಇಡೀ ತಂಡದ ಸಹಕಾರದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಸದ್ಯದಲ್ಲೇ ತೆರೆಗೆ ಬರಲಿದೆ ಎಂದರು.

ನಿಖಿಲ್ ಅವರ ಅವರ‌ ಅಭಿನಯ ಚೆನ್ನಾಗಿದೆ. ಪ್ರಧಾನಮಂತ್ರಿಗಳ ಮೊಮ್ಮಗ, ಮುಖ್ಯಮಂತ್ರಿಗಳ ಮಗನಾಗಿದ್ದರೂ ಎಲ್ಲರೊಡನೆ ಅವರು ಬೆರೆಯುವ ರೀತಿ ನಿಜಕ್ಕೂ ಶ್ಲಾಘನೀಯ ಎಂದರು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಂ.ಎಲ್.ಸಿ ಹಾಗೂ ಸಾಯಿಗೋಲ್ಡ್ ಪ್ಯಾಲೆಸ್ ಮಾಲೀಕರಾದ ಶರವಣ.

ಚಿತ್ರದಲ್ಲಿ ಅಭಿನಯಿಸಿರುವ ಕೆ.ಜಿ.ಎಫ್ ಖ್ಯಾತಿಯ ಗರುಡ ರಾಮ್, ಶಿವರಾಜ ಕೆ.ಆರ್.ಪೇಟೆ, ಮಂಜು ಪಾವಗಡ, ಅನುಷಾ ರೈ, ಅರ್ಜುನ್ ಗೌಡ, ನರಸಿಂಹ ಜಾಲಹಳ್ಳಿ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು, ಛಾಯಾಗ್ರಹಕ ಶ್ರೀಶ ಕುದುವಳ್ಳಿ, ನೃತ್ಯ ನಿರ್ದೇಶಕ ಭೂಷಣ್ ಹಾಗೂ ಸಾಹಸ ನಿರ್ದೇಶಕ ಅರ್ಜುನ್ ಹಾಗೂ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಅನೇಕ ಗಣ್ಯರು "ರೈಡರ್" ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.

ಯುಎನ್ಐ ಎಸ್ಎ 1806