Friday, Sep 17 2021 | Time 12:15 Hrs(IST)
National Share

ಕೇರಳದಲ್ಲಿ ಕೋವಿಡ್‍ ನ 20,728 ಹೊಸ ಪ್ರಕರಣಗಳು ವರದಿ

ಕೇರಳದಲ್ಲಿ ಕೋವಿಡ್‍ ನ 20,728 ಹೊಸ ಪ್ರಕರಣಗಳು ವರದಿ
ಕೇರಳದಲ್ಲಿ ಕೋವಿಡ್‍ ನ 20,728 ಹೊಸ ಪ್ರಕರಣಗಳು ವರದಿ

ತಿರುವನಂತಪುರಂ, ಆಗಸ್ಟ್‍ 1 (ಯುಎನ್‍ಐ)- ಕೇರಳದಲ್ಲಿ ಭಾನುವಾರ ಕೋವಿಡ್‍ ನ 20,278 ಹೊಸ ಪ್ರಕರಣಗಲು ವರದಿಯಾಗಿದ್ದು, ಈ ಅವಧಿಯಲ್ಲಿ 17,792 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ ತಿಳಿಸಿದ್ದಾರೆ.

ಕಳೆದ 24 ತಾಸಿನಲ್ಲಿ ಒಟ್ಟು 1,70,690 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಪಾಸಿಟಿವಿಟಿ ಪ್ರಮಾಣ ರಾಜ್ಯದಲ್ಲಿ ಶೇ 12.14ರಷ್ಟಿದೆ.ಈ ವರೆಗೆ ರಾಜ್ಯದಲ್ಲಿ 2,73,87,700 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಎಂದು ಮುಖ್ಯಮಂತ್ರಿ ಭಾನುವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇರಳದಲ್ಲಿ ಭಾನುವಾರ 56 ಮಂದಿ ಸೋಂಕಿನಿಂದ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 16,837ಕ್ಕೆ ಏರಿದೆ. ಕಳೆದ 24 ತಾಸಿನಲ್ಲಿ ಬ್ರಿಟನ್‍ ನಿಂದ ಕೇರಳಕ್ಕೆ ಆಗಮಿಸಿದ ಯಾರೊಬ್ಬರಲ್ಲೂ ಕೋವಿಡ್ ಸೋಂಕು ಪತ್ತೆಯಗಿಲ್ಲ. ಇದುವರೆಗೆ ಬ್ರಿಟನ್‍ ನಿಂದ ಆಗಮಿಸಿದ 11 ಮಂದಿಗೆ ರೂಪಾಂತರ ವೈರಸ್ ರೋಗ ಪತ್ತೆ ಪರೀಕ್ಷೆ ನಡೆಸಲಾಗಿತ್ತು.



ಯುಎನ್‍ಐ ಎಸ್ಎಲ್ಎಸ್ 1951