Friday, Sep 17 2021 | Time 11:43 Hrs(IST)
Parliament Share

ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ

ನವದೆಹಲಿ, ಜುಲೈ 22( ಯುಎನ್‌ ಐ) ಲೋಕಸಭೆಯಲ್ಲಿ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿ ಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರಿಸಿದ ಪರಿಣಾಮ ಮುಂಗಾರು ಅಧಿವೇಶನದ ಮೂರನೇ ದಿನವಾದ ಗುರುವಾರ ಸಹ ಸಂಸತ್ತಿನ ಕೆಳಮನೆಯ ಕಲಾಪವನ್ನು ಹಲವು ಬಾರಿ ಮುಂದೂಡಿಕೆ ಕಂಡು ಅಂತಿಮವಾಗಿ ದಿನದ ಮಟ್ಟಿಗೆ ಮುಂದೂಡಲಾಯಿತು.
ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಮೂರನೇ ಬಾರಿ ಮರು ಸಮಾವೇಶಗೊಂಡಾಗ ಸ್ಪೀಕರ್‌ ಪೀಠದಲ್ಲಿದ್ದ ಭತೃಹರಿ ಮೆಹತಾಬ್‌, ಅಗತ್ಯ ರಕ್ಷಣಾ ಸೇವೆಗಳ ವಿಧೇಯಕ- 2021 ಮಂಡಿಸುವಂತೆ ರಕ್ಷಣಾ ರಾಜ್ಯ ಸಚಿವ ಅಜಯ್‌ ಭಟ್‌ ಅವರಿಗೆ ಸೂಚಿಸಿದರು.
ಆದರೆ, ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರಿಸಿದ ಪರಿಣಾಮ ಮತ್ತೆ ಸಂಜೆ ನಾಲ್ಕುಗಂಟೆಗೆ ಕಲಾಪ ಮುಂದೂಡಿದರು. ನಾಲ್ಕು ಗಂಟೆಗೆ ಮರು ಸಮಾವೇಶಗೊಂಡಾಗ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದ ಕಾರಣ ಅಂತಿಮವಾಗಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಯುಎನ್‌ ಐ ಕೆವಿಆರ್‌ 1615
There is no row at position 0.