Friday, Sep 17 2021 | Time 13:38 Hrs(IST)
National Share

ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು

ದೇಶದಲ್ಲಿ 41, 134 ಹೊಸ ಕೊರೋನ  ಪ್ರಕರಣ: 422 ಜನರ ಸಾವು
ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು

ನವದೆಹಲಿ, ಆ 2 (ಯುಎನ್ಐ ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 41, 134 ಜನರಿಗೆ ಕೊರೊನ ಸೋಂಕು ತಗುಲಿದ್ದು , ಇದೇ ವೇಳೆ ಚಿಕಿತ್ಸೆ ಫಲಕಾರಿಯಾಗದೇ 422 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಹೊಸದಾಗಿ 40,135 ಮಂದಿಗೆ ಕೊರೊನಾ ಸೋಂಕು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,ಕೋಟಿ 16,95,958 ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ 422 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೊರೋನದಿಂದ ಮೃತಪಟ್ಟವರ ಸಂಖ್ಯೆ 4,ಲಕ್ಷದ 24ಸಾವಿರದ ಕಳೆದ 24 ಗಂಟೆಗಳಲ್ಲಿ 36, ಸಾವಿರದ 946 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದು ಈ ಮೂಲಕ ಈವರೆಗೆ ಚೇತರಿಕೊಂಡವರ ಸಂಖ್ಯೆ 3,08,57,467 ಏರಿಕೆಯಾಗಿದೆ. ಇಲಾಖೆ ವರದಿ ಹೇಳಿದೆ.

ಯುಎನ್ಐ ಕೆಎಸ್ಆರ್ 1102