Friday, Sep 17 2021 | Time 12:45 Hrs(IST)
National Share

ದೇಶದಲ್ಲಿ 41,649 ಹೊಸ ಕೊರೋನ ಪ್ರಕರಣ: 593 ಸಾವು

ದೇಶದಲ್ಲಿ 41,649 ಹೊಸ ಕೊರೋನ ಪ್ರಕರಣ: 593 ಸಾವು
ದೇಶದಲ್ಲಿ 41,649 ಹೊಸ ಕೊರೋನ ಪ್ರಕರಣ: 593 ಸಾವು

ನವದೆಹಲಿ, ಜುಲೈ 31 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 41 ಸಾವಿರ 694 ಹೊಸ ಕೊರೋನ ಸೋಂಕು ಪ್ರಕರಣ ವರದಿಯಾಗಿದ್ದು, ಇದೇ ವೇಳೆ ಚಿಕಿತ್ಸೆ ಫಲಕಾರಿಯಾಗದೆ 593 ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,ಲಕ್ಷ ಮೀರಿದ್ದು ಈವರೆಗೆ 4 ಲಕ್ಷಕ್ಕೂ ಹೆಚ್ಚು ಜನರು ಮಾರಕ ಸೋಂಕಿಗೆ ಬಲಿಯಾಗಿದ್ದಾರೆ ಎಂದೂ ಇಲಾಖೆ ಮಾಹಿತಿ ನೀಡಿದೆ.ಇದರೊಂದಿಗೆ ದೇಶಾದ್ಯಂತ ಚೇತರಿಸಿಕೊಂಡವರ ಸಂಖ್ಯೆ 3,07,81 263 ಕ್ಕೆ ತಲುಪಿದೆ. ಸದ್ಯ ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡ 97.37 ರಷ್ಟಿದೆ. ಈ ಮಧ್ಯೆ, ಈವರೆಗೆ ದೇಶದಲ್ಲಿ 46 ಕೋಟಿಗೂ ಹೆಚ್ಚು ಜನರಿಗೆ ಈವರೆಗೆ ಲಸಿಕೆ ನೀಡಲಾಗಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ಯುಎನ್ಐ ಕೆಎಸ್ಆರ್ 1027