Friday, Sep 17 2021 | Time 11:43 Hrs(IST)
Sports Share

ಸುರಕ್ಷತಾ ನಿಯಮ ಉಲ್ಲಂಘನೆ, 8 ಜನರ ಮಾನ್ಯತೆ ರದ್ದು

ಸುರಕ್ಷತಾ ನಿಯಮ ಉಲ್ಲಂಘನೆ, 8 ಜನರ  ಮಾನ್ಯತೆ ರದ್ದು
ಸುರಕ್ಷತಾ ನಿಯಮ ಉಲ್ಲಂಘನೆ, 8 ಜನರ ಮಾನ್ಯತೆ ರದ್ದು

ಟೋಕಿಯೊ, ಆಗಸ್ಟ್ 1( ಯುಎನ್ಐ) ಸುರಕ್ಷತಾ ನಿಯಮ ಉಲ್ಲಂಘನೆ ಮಾಡಿದ್ದಾಕ್ಕಾಗಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಸದ್ಯ 8 ಜನರ ಮಾನ್ಯತೆ ರದ್ದುಗೊಳಿಸಲಾಗಿದೆ ಎಂದು ಸಂಘಟನಾ ಸಮಿತಿಯ ಸಿಇಒ ತೋಶಿರೊ ಮುಟೊ ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶನಿವಾರ 21 ಹೊಸ ಕರೋನ ಸೋಂಕು ಪ್ರಕರಣಗಳು ದಾಖಲಾಗಿವೆ. ಸೋಂಕು ಪತ್ತೆ ಪರೀಕ್ಷೆ ಮಾಡಿದವರಲ್ಲಿ ಯಾವುದೇ ಕ್ರೀಡಾಪಟುಗಳು ಸೇರಿಲ್ಲ ಎಂಬುದು ಸಮಾಧಾನಕರ ಸಂಗತಿ.



ಒಲಿಂಪಿಕ್ಸ್ ಮುಗಿಯಲು ಇನ್ನೂ ಕೇವಲ ಒಂದು ವಾರ ಮಾತ್ರ ಬಾಕಿ ಇರುವಾಗ, ಸುರಕ್ಷಿತ ಪ್ಯಾರಾಲಿಂಪಿಕ್ಸ್ ಅನ್ನು ಖಚಿತಪಡಿಸಿಕೊಳ್ಳಲು ಸಂಘಟಕರು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ ಎಂದು ಮುಟೊ ಸುದ್ದಿಗಾರರಿಗೆ ತಿಳಿಸಿದರು. ಮುಟೊ ಪ್ರಕಾರ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರಿಗೆ 10 ಎಚ್ಚರಿಕೆ ನೀಡಲಾಗಿತ್ತು ಮತ್ತು ಸದ್ಯ 8 ಜನರ ಮಾನ್ಯತೆ ರದ್ದುಗೊಳಿಸಲಾಗಿದೆ.

ಯುಎನ್ಐ ಕೆಎಸ್ಆರ್ 0939