Tuesday, Nov 30 2021 | Time 18:07 Hrs(IST)
Entertainment Share

ಗಾಯಕಿ ಕೆ. ಎಸ್. ಚಿತ್ರಾ ಗೆ ಯು ಎ ಇ ಗೋಲ್ಡನ್‌ ವೀಸಾ

ಚೆನ್ನೈ, ಅ 20(ಯುಎನ್‌ ಐ) ದಕ್ಷಿಣ ಭಾರತದ ಪ್ರಮುಖ ಹಿನ್ನೆಲೆ ಗಾಯಕಿ ಕೆ. ಎಸ್. ಚಿತ್ರಾ ಅವರು ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ತಾವು ಯು ಎ ಇ ನೀಡುವ ಗೋಲ್ಡನ್ ವೀಸಾ ಪಡೆದು ಕೊಂಡಿರುವುದಾಗಿ ಸ್ವಯಂ ಚಿತ್ರಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಬುಧವಾರ ಬೆಳಿಗ್ಗೆ, ತಾವು ದುಬೈ ವಲಸೆ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಅಹ್ಮದ್ ಅಲ್ ಮಾರಿ ಅವರಿಂದ ಯು ಎ ಇ ಗೋಲ್ಡನ್ ವೀಸಾವನ್ನು ಸ್ವೀಕರಿಸಿದ್ದು ಅತ್ಯಂತ ಸಂತಸ ತಂದಿದೆ ಎಂದು ಚಿತ್ರಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ.
ಯುಎನ್‌ ಐ ಕೆವಿಆರ್‌ 16.59