Friday, Oct 22 2021 | Time 21:03 Hrs(IST)
Entertainment Share

ಶೀಘ್ರದಲ್ಲೇ "ತಾಜ್ ಮಹಲ್ 2" ಟ್ರೇಲರ್

ಶೀಘ್ರದಲ್ಲೇ
ಬೆಂಗಳೂರು, ಸೆ. 07(ಯುಎನ್ಐ) ಶ್ರೀ ಗಂಗಾಂಬಿಕೆ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿ, ದೇವರಾಜ್ ಕುಮಾರ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ "ತಾಜ್ ಮಹಲ್ 2" ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ದೇವರಾಜ್ ಕುಮಾರ್ ಈ ಹಿಂದೆ ಡೇಂಜರ್ ಜೋನ್, ನಿಶ್ಯಬ್ದ 2 ಹಾಗೂ ಅನುಷ್ಕಾ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಗಗನಚುಕ್ಕಿ, ಬರಚುಕ್ಕಿ ಮುಂತಾದ ಕಡೆ 65 ದಿನಗಳ ಚಿತ್ರೀಕರಣ ನಡೆದಿದೆ. ದೇವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಸಮೃದ್ಧಿ ಶುಕ್ಲಾ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಮನವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದು, ವಿಕ್ರಂ ಸೆಲ್ವ ಸಂಗೀತ ನೀಡಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ, ವಿಜಯ್ ಸಂಕಲನ ಹಾಗೂ ಬಿ.ಧನಂಜಯ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಯುಎನ್ಐ ಎಸ್ಎ 0753
More News
“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

21 Oct 2021 | 2:01 PM

 Sharesee more..
ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

21 Oct 2021 | 12:28 PM

ಬೇಲ್ ಗಾಗಿ ಅಲೆದಾಡುತ್ತಿರುವ ಬಿಟೌನ್ ಸ್ಟಾರ್ ಪುತ್ರನ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಮುಂಬೈ ಹೈಕೋರ್ಟ್ ನಡೆಯಲಿದೆ. ಅರ್ಥರ್ ರೋಡ್ ಜೈಲು ಪಾಲಾಗಿರುವ ಆರ್ಯನ್ ಖಾನ್, ಕಳೆದ 18 ದಿನಗಳಿಂದ ಬಂಧನದಲ್ಲಿದ್ದಾನೆ.

 Sharesee more..