Tuesday, Nov 30 2021 | Time 18:08 Hrs(IST)
National Share

ಜೈಶಂಕರ್, ಡಬ್ಲ್ಯುಟಿಒ ಡೈರೆಕ್ಟರ್ ಜನರಲ್ ಭೇಟಿ

ನವದೆಹಲಿ, ಅ. 22(ಯುಎನ್ಐ) ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಫ್ಘಾನಿಸ್ತಾನ ಪರಿಸ್ಥಿತಿ ಮತ್ತು ಇಂಡೋ-ಪೆಸಿಫಿಕ್‌ಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಯುಕೆ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ನಿಕೋಲಸ್ ಕಾರ್ಟರ್ ಅವರೊಂದಿಗೆ ಚರ್ಚಿಸಿದ್ದಾರೆ. ಹಾಗೂ ವಿಶ್ವ ವ್ಯಾಪಾರ ಸಂಸ್ಥೆ ಡಬ್ಲ್ಯೂಟಿಒ ನಿರ್ದೇಶಕ ಜನರಲ್ ಫ್ರಾನ್ಸ್ ಟಿಮ್ಮರ್ಮನ್ಸ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

"ನಿಕೋಲಸ್ ಕಾರ್ಟರ್ ಜತೆಗಿನ ಸಂವಾದವು ಅಫ್ಘಾನಿಸ್ತಾನ ಮತ್ತು ಇಂಡೋ-ಪೆಸಿಫಿಕ್ ಸುತ್ತ ಕೇಂದ್ರೀಕೃತವಾಗಿತ್ತು" ಎಂದು ಜೈಶಂಕರ್ ಅವರು ಸಭೆಯ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.

ಯುರೋಪಿಯನ್ ಗ್ರೀನ್ ಡೀಲ್ ನ ಉಸ್ತುವಾರಿ ಯುರೋಪಿಯನ್ ಕಮಿಷನ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಫ್ರಾನ್ಸ್ ಟಿಮ್ಮರ್ಮನ್ಸ್ ಅವರೊಂದಿಗಿನ ಭೇಟಿಯಲ್ಲಿ, ಭಾರತ-ಇಯು ಪಾಲುದಾರಿಕೆ ಮತ್ತು ಇಂಡೋ-ಪೆಸಿಫಿಕ್ ಅನ್ನು ವಿಸ್ತರಿಸುವ ಬಗ್ಗೆ ಇಬ್ಬರೂ ಉತ್ತಮ ಚರ್ಚೆ ನಡೆದಿದ್ದು, ಹವಾಮಾನ ಕ್ರಮ ಮತ್ತು ಅಫ್ಘಾನಿಸ್ತಾನದ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

"ವ್ಯಾಪಾರ ಮತ್ತು ಹೂಡಿಕೆ, ಸಂಪರ್ಕ ಮತ್ತು ಇಂಡೋ-ಪೆಸಿಫಿಕ್ ಸೇರಿದಂತೆ ಭಾರತ-ಇಯು ಪಾಲುದಾರಿಕೆಯನ್ನು ವಿಸ್ತರಿಸುವ ಬಗ್ಗೆ ಉತ್ತಮ ಚರ್ಚೆಯಾಗಿದೆ” ಎಂದು ಜೈಶಂಕರ್ ತಿಳಿಸಿದ್ದಾರೆ.

ನಿಕೋಲಸ್ ಕಾರ್ಟರ್ ಅವರ ಭೇಟಿಯ ಸಮಯದಲ್ಲಿ, ಸಂಭಾಷಣೆ ಅಫ್ಘಾನಿಸ್ತಾನ ಮತ್ತು ಇಂಡೋ-ಪೆಸಿಫಿಕ್ ಸುತ್ತ ಕೇಂದ್ರೀಕೃತವಾಗಿತ್ತು.

ಭಾರತ ಮತ್ತು ಯುಕೆ ಭೂ, ವಾಯು, ನೌಕಾಸೇನೆ ಅಕ್ಟೋಬರ್ 21 ರಂದು ಜಂಟಿ ಸಮರಾಭ್ಯಾಸ ಆರಂಭಿಸಿದ್ದು, ಒಂದು ವಾರದವರೆಗೆ ಇರುತ್ತದೆ. ಕೊಂಕಣ ಶಕ್ತಿ 2021 ಎಂದು ಹೆಸರಿಸಲ್ಪಟ್ಟಿರುವ ಈ ಅಭ್ಯಾಸ, ಪರಸ್ಪರ ಅನುಭವಗಳಿಂದ ಪರಸ್ಪರ ಪ್ರಯೋಜನಗಳನ್ನು ಪಡೆಯುವ ಗುರಿಯನ್ನು ಹೊಂದಿದೆ ಮತ್ತು ಎರಡು ದೇಶಗಳ ನಡುವಿನ ನಿರಂತರ ಸಹಕಾರವನ್ನು ಸಹ ಪ್ರದರ್ಶಿಸುತ್ತದೆ ಎಂದು ನೌಕಾಪಡೆ ಹೇಳಿದೆ.

ಯುಕೆ ಮುಖ್ಯಸ್ಥ ಸರ್ ನಿಕ್ ಕಾರ್ಟರ್ ಅವರು ಗುರುವಾರ ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಭೇಟಿಯಾಗಿದ್ದಾರೆ.
ಯುಎನ್ಐ ಎಸ್ಎ 1838
More News
ಚಾರ್ಧಾಮ್ ದೇವಸ್ಥಾನಂ ಬೋರ್ಡ್​ ರದ್ದುಗೊಳಿಸಿದ ಉತ್ತರಾಖಂಡ ಸರ್ಕಾರ

ಚಾರ್ಧಾಮ್ ದೇವಸ್ಥಾನಂ ಬೋರ್ಡ್​ ರದ್ದುಗೊಳಿಸಿದ ಉತ್ತರಾಖಂಡ ಸರ್ಕಾರ

30 Nov 2021 | 5:05 PM

ಡೆಹ್ರಾಡೂನ್: ನ.

 Sharesee more..
ಈ ಸ್ಕೂಟಿಯ ನಂಬರ್ ಪ್ಲೇಟ್ ಮೇಲೆಯೇ ಎಲ್ಲರ ಕಣ್ಣು

ಈ ಸ್ಕೂಟಿಯ ನಂಬರ್ ಪ್ಲೇಟ್ ಮೇಲೆಯೇ ಎಲ್ಲರ ಕಣ್ಣು

30 Nov 2021 | 3:52 PM

ನವದೆಹಲಿ,ನ.

 Sharesee more..