Friday, Sep 17 2021 | Time 11:51 Hrs(IST)
Entertainment Share

ವಿದೇಶದಿಂದ ತಲೈವಾ ವಾಪಸ್: ಅದ್ದೂರಿ ಸ್ವಾಗತ

ವಿದೇಶದಿಂದ ತಲೈವಾ ವಾಪಸ್: ಅದ್ದೂರಿ ಸ್ವಾಗತ
ವಿದೇಶದಿಂದ ತಲೈವಾ ವಾಪಸ್: ಅದ್ದೂರಿ ಸ್ವಾಗತ

ಚೆನ್ನೈ, ಜುಲೈ 09(ಯುಎನ್ಐ) ಸೂಪರ್ ಸ್ಟಾರ್ ರಜನಿಕಾಂತ್ ವಿದೇಶದಲ್ಲಿ ಆರೋಗ್ಯ ತಪಾಸಣೆ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ.



ನಿನ್ನೆ ತಡರಾತ್ರಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಸೂಪರ್ ಸ್ಟಾರ್ ಅನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ರಜನಿಕಾಂತ್ ಹೆಚ್ಚಿನ ಆರೋಗ್ಯ ತಪಾಸಣೆಗೆಂದು ರಜನಿಕಾಂತ್ ಜೂನ್ 19ರಂದು ವಿಶೇಷ ವಿಮಾನ ಮೂಲಕ ಅಮೆರಿಕಗೆ ತೆರಳಿದ್ದರು.



ಚೆನ್ನೈ ವಿಮಾನ ನಿಲ್ದಾಣದಿಂದ ಸೂಪರ್ ಸ್ಟಾರ್ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೂಪರ್ ಸ್ಟಾರ್ ಆರೋಗ್ಯ ತಪಾಸಣೆ ಮುಗಿಸಿ ಆರೋಗ್ಯವಾಗಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದು, ಹೊರಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ತಲೈವಾ ...ತಲೈವಾ.. ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದರು.



ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಸೂಪರ್ ಸ್ಟಾರ್, ಮಗಳು ಐಶ್ವರ್ಯಾ ಮತ್ತು ಪತ್ನಿ ಲತಾ ಜೊತೆ ಅಮೆರಿಕಗೆ ತೆರಳಿದ್ರು. ಅಮೆರಿಕಗೆ ತೆರಳಿದ ಬಳಿಕ ಮಗಳು ಐಶ್ವರ್ಯಾ ಜೊತೆ ಯುಎಸ್ ನ ಮೆಯೊ ಕ್ಲಿನಿಕ್ ಎದುರು ಕಾಣಿಸಿಕೊಂಡಿದ್ದರು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.



ಕೆಲವು ವರ್ಷಗಳ ಹಿಂದೆ ರಜನಿಕಾಂತ್ ಮೂತ್ರ ಪಿಂಡ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎನ್ನುವ ಮಾಹಿತಿ ಇದೆ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕೆಂದು ವೈದ್ಯರು ಸೂಚಿಸಿದ ಬಳಿಕ ರಜನಿಕಾಂತ್ ರಾಜಕೀಯದಿಂದನೂ ಹಿಂದೆ ಸರಿದಿದ್ದರು. ಬಳಿಕ ಹೆಚ್ಚಿನ ಆರೋಗ್ಯ ತಪಾಸಣೆಗೆಂದು ದಿಢೀರ್ ವಿದೇಶಕ್ಕೆ ತೆರಳಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಇದೀಗ ಸೂಪರ್ ಸ್ಟಾರ್ ವಾಪಸ್ ಆಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.



ಯುಎನ್ಐ ಎಸ್ಎ 1544

More News

'ತಲೈವಿ' ಚಿತ್ರ ವೀಕ್ಷಿಸಿದ ರಜನಿಕಾಂತ್‌

15 Sep 2021 | 10:45 PM

 Sharesee more..

"ರಾಣ" ಟೀಸರ್ ರಿಲೀಸ್

15 Sep 2021 | 7:03 PM

 Sharesee more..