Friday, Sep 17 2021 | Time 12:13 Hrs(IST)
International Share

ಲಿಬಿಯಾ: ಹಡಗು ದುರಂತದಲ್ಲಿ 57 ವಲಸಿಗರ ಸಾವು

ಲಿಬಿಯಾ: ಹಡಗು ದುರಂತದಲ್ಲಿ 57 ವಲಸಿಗರ ಸಾವು
ಲಿಬಿಯಾ: ಹಡಗು ದುರಂತದಲ್ಲಿ 57 ವಲಸಿಗರ ಸಾವು

ಟ್ರಿಪೋಲಿ, ಜುಲೈ 27 (ಯುಎನ್‌ಐ) ಖುಮ್ಸ್ ಬಳಿಯ ಲಿಬಿಯಾ ಕರಾವಳಿಯಲ್ಲಿ ಹಡಗು ಅಪಘಾತದಲ್ಲಿ ಕನಿಷ್ಠ 57 ಜನರು ಮೃತಪಟ್ಟಿದ್ದಾರೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ (ಐಒಎಂ) ವಕ್ತಾರ ಸಫಾ ಮೆಹ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಖುಮ್ಸ್ ಬಳಿ ಹಡಗು ಅಪಘಾತಕ್ಕೀಡಾದ ನಂತರ ಇಂದು ಲಿಬಿಯಾದಿಂದ ಹಡಗಿನಲ್ಲಿ ಕನಿಷ್ಠ 57 ಜನರು ಬಲಿಯಾಗಿದ್ದಾರೆ" ಎಂದು ಮೆಸೆಲಿ ಕಳೆದ ರಾತ್ರಿ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಮೀನುಗಾರರು ಮತ್ತು ಕರಾವಳಿ ಕಾವಲುಗಾರರ ಸಹಾಯದಿಂದ ಕನಿಷ್ಠ 20 ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ವಲಸಿಗರಲ್ಲಿ ಹದಿನೆಂಟು ಜನರನ್ನು ಮೀನುಗಾರರು ಮತ್ತು ಲಿಬಿಯಾದ ಕಾವಲುಪಡೆ ರಕ್ಷಿಸಿದೆ ಎಂದು ಮೆಸೆಲಿ ಹೇಳಿದ್ದಾರೆ.

ಯುಎನ್ಐ ಎಸ್ಎ 1127