Friday, Sep 17 2021 | Time 11:35 Hrs(IST)
Entertainment Share

ರಾಮ-ಆಂಜನೇಯನ ಸನ್ನಿಧಿಯಲ್ಲಿ ‘ಶಬರಿ’ ಗೆ‌ ಮುಹೂರ್ತ

ರಾಮ-ಆಂಜನೇಯನ ಸನ್ನಿಧಿಯಲ್ಲಿ ‘ಶಬರಿ’ ಗೆ‌ ಮುಹೂರ್ತ
ರಾಮ-ಆಂಜನೇಯನ ಸನ್ನಿಧಿಯಲ್ಲಿ ‘ಶಬರಿ’ ಗೆ‌ ಮುಹೂರ್ತ

ಬೆಂಗಳೂರು, ಜುಲೈ 05(ಯುಎನ್ಐ) ಕೆ.ಕೆ.ಪ್ರೊಡಕ್ಷನ್ಸ್ ಅಂಡ್ ಅಸೋಸಿಯೇಷನ್ಸ್ ಹಾಗೂ ಎಟಿಎಂ ಸ್ಟುಡಿಯೋಸ್ ಬ್ಯಾನರ್‌ ಮೂಲಕ ಕಿರಣ್ ಕುಮಾರ್ ಸಿ., ಅರವಿಂದ್ ಬಿ. ನಿರ್ಮಿಸುತ್ತಿರುವ 'ಶಬರಿ ಸರ್ಚಿಂಗ್ ಫಾರ್ ರಾವಣ' ಚಿತ್ರಕ್ಕೆ ಮುಹೂರ್ತ ನೆರವೇರಿದೆ.ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ಚಿತ್ರದ ನಾಯಕಿ ರಚಿತಾರಾಮ್ ಹಾಗೂ ರಘು ಮುಖರ್ಜಿ ದೇವರನ್ನು ಪ್ರಾರ್ಥಿಸುವ ದೃಶ್ಯದೊಂದಿಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.ಮಹಿಳಾ ಪ್ರದಾನ ರಿವೇಂಜ್, ಥ್ರಿಲ್ಲರ್ ಕಥಾಹಂದರ ಇರುವ ಈ ಚಿತ್ರದಲ್ಲಿ ಡಿಂಪಲ್‌ಕ್ವೀನ್ ರಚಿತಾರಾಮ್ ಶಬರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ ಅಭಿನಯದ 36ನೇ ಚಿತ್ರ. ಕಳೆದ ರಾಮನವಮಿ ಹಬ್ಬದ ದಿನವೇ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರದ ಶೀರ್ಷಿಕೆ,‌ಲುಕ್ ಬಿಡುಗಡೆಯಾಗಿತ್ತು. ರಚಿತಾರಾಮ್ ಉಗ್ರಾವತಾರ ತಾಳಿರುವ ಪೋಸ್ಟರ್‌ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿತ್ತು.ಯುವನಿರ್ದೇಶಕ ನವೀನ್‌ಶೆಟ್ಟಿ ಆ್ಯಕ್ಷನ್‌ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಕೇಶವ್-ಚೇತನ್ ಚಿತ್ರಕಥೆ ಹೆಣೆದಿದ್ದಾರೆ. ಸಂಕಲನಕಾರನಾಗಿದ್ದ ನವೀನ್‌ ಶೆಟ್ಟಿ ಶಬರಿ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಮಹಿಳಾಪ್ರಧಾನ ಕಥಾಹಂದರ ಒಳಗೊಂಡಿರುವ ಈ ಚಿತ್ರದಲ್ಲಿ ರಾವಣನ ಪಾತ್ರ ಇನ್ನೂ ಕುತೂಹಲವಾಗಿದೆ. ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭಿಸುವುದಾಗಿ ನಿರ್ದೇಶಕ ನವೀನ್ ಶೆಟ್ಟಿ ತಿಳಿಸಿದ್ದಾರೆ.ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಇದ್ದು, ಸುರೇಶ್ ಆರ್ಮುಗಂ ಅವರ ಸಂಕಲನ, ವಿಶಾಲ್‌ ಕುಮಾರ್‌ ಗೌಡ ಅವರ ಕ್ಯಾಮೆರಾವರ್ಕ್ ಇರುತ್ತದೆ. ಅಚ್ಯುತ್‌ಕುಮಾರ್, ಪ್ರದೀಪ್ ನಾರಾಯಣ್, ಅರ್ಚನಾ ಕೊಟ್ಟಿಗೆ ಈ ಚಿತ್ರದ ಉಳಿದ ಪಾತ್ರವರ್ಗದಲ್ಲಿದ್ದಾರೆ.ಯುಎನ್ಐ ಎಸ್ಎ 1113

More News

'ತಲೈವಿ' ಚಿತ್ರ ವೀಕ್ಷಿಸಿದ ರಜನಿಕಾಂತ್‌

15 Sep 2021 | 10:45 PM

 Sharesee more..

"ರಾಣ" ಟೀಸರ್ ರಿಲೀಸ್

15 Sep 2021 | 7:03 PM

 Sharesee more..