Friday, Sep 17 2021 | Time 13:28 Hrs(IST)
International Share

ಪೂರ್ವ ಆಫ್ಘಾನಿಸ್ತಾನದಲ್ಲಿ ಪ್ರವಾಹ: 113 ಮಂದಿ ಸಾವು

ಪೂರ್ವ ಆಫ್ಘಾನಿಸ್ತಾನದಲ್ಲಿ ಪ್ರವಾಹ: 113 ಮಂದಿ ಸಾವು
ಪೂರ್ವ ಆಫ್ಘಾನಿಸ್ತಾನದಲ್ಲಿ ಪ್ರವಾಹ: 113 ಮಂದಿ ಸಾವು

ಮಾಸ್ಕೊ, ಜುಲೈ 31(ಯುಎನ್ಐ/ಸ್ಪುಟ್ನಿಕ್)- ಪೂರ್ವ ಆಫ್ಘಾನಿಸ್ತಾನದಲ್ಲಿ ಭಾರೀ ಪ್ರವಾಹಗಳಿಂದ 113ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಟೊಲೋ ನ್ಯೂಸ್ ವರದಿ ಮಾಡಿದೆ.

ಬುಧವಾರ ಭಾರೀ ಮಳೆಯಿಂದ ನುರಿಸ್ತಾನ್ ಪ್ರಾಂತ್ಯದ ಮೆಹರ್ದಿಶ್ ಗ್ರಾಮವೊಂದು ಪ್ರವಾಹಕ್ಕೆ ತುತ್ತಾಗಿ, 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಆ ನಂತರದ ವರದಿಗಳಂತೆ 58 ಮಂದಿ ಸಾವನ್ನಪ್ಪಿದ್ದು, 158ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಈ ಪ್ರಾಂತ್ಯದಲ್ಲಿ 150ಕ್ಕೂ ಹೆಚ್ಚು ಮನೆಗಳು ನಾಶಗೊಂಡಿವೆ.

ಪ್ರವಾಹಗಳಿಂದ ನುರಿಸ್ತಾನ್ ಪ್ರಾಂತ್ಯದಲ್ಲಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಂತ್ಯದ ಗವರ್ನರ್ ಈ ವಾರದ ಆರಂಭದಲ್ಲಿ ತಿಳಿಸಿದ್ದರು ಎಂಬುದಾಗಿ ಒನ್ ಟಿವಿ ವರದಿ ಮಾಡಿತ್ತು.

ಯುಎನ್ಐ ಎಸ್ ಎಲ್ ಎಸ್ 1822