Friday, Oct 22 2021 | Time 21:14 Hrs(IST)
Entertainment Share

ರಿಲೀಸ್ ಆಗ್ತಿದೆ ‘ಕಾಗೆಮೊಟ್ಟೆ’

ರಿಲೀಸ್ ಆಗ್ತಿದೆ ‘ಕಾಗೆಮೊಟ್ಟೆ’
ಬೆಂಗಳೂರು, ಸೆ.27(ಯುಎನ್ಐ) ಮೂವರು ಲೋಕಲ್ ಹುಡುಗರ ಕಥೆಯನ್ನು ಹೇಳುವ ಚಿತ್ರ ಕಾಗೆ ಮೊಟ್ಟೆ ಇದೇ ಶುಕ್ರವಾರ ಅಕ್ಟೋಬರ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ರೆಡ್ ಚಿಲ್ಲಿ ಸಿನಿಮಾಸ್ ಅಡಿಯಲ್ಲಿ ಚಂದ್ರಹಾಸ ಅವರು ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದು, ಗುರುರಾಜ್ ಜಗ್ಗೇಶ್ ಜೊತೆ ಕೆ.ಮಾದೇಶ್ ಹಾಗೂ ಹೇಮಂತ್ ನಾಯಕರಾಗಿದ್ದಾರೆ. ಕನ್ನಡದ‌ ಪ್ರತಿಭೆ ತನುಜಾ ನಾಯಕಿಯಾಗಿ ನಟಿಸಿದ್ದಾರೆ.

ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಹಾಗೂ ಎಚ್.ಎನ್.ಶ್ರೀನಿವಾಸಯ್ಯ ಚಂದ್ರಹಾಸ್ ಜೊತೆ ಕೈಜೋಡಿಸಿದ್ದಾರೆ. ‘ಪಿಳ್ಳಾ, ಗೋವಿ, ಕೃಷ್ಣನ ಕಥೆ’ ಎನ್ನುವ ಟ್ಯಾಗ್‌ಲೈನ್ ಈ ಚಿತ್ರಕ್ಕಿದೆ. ಹಳ್ಳಿಯಲ್ಲಿ ಸಣ್ಣಪುಟ್ಟ ರಾಬರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೂವರು ಹುಡುಗರು ಒಮ್ಮೆ ಒಂದು ದೊಡ್ಡ ಉದ್ದೇಶ ಇಟ್ಟುಕೊಂಡು ಬೆಂಗಳೂರಿಗೆ ಆಗಮಿಸುತ್ತಾರೆ, ಯಾವುದೇ ಹಿನ್ನೆಲೆ ಇಲ್ಲದೆ ಸಿಟಿಗೆ ಬಂದ ಇವರು ತಾವಂದುಕೊಂಡಿದ್ದನ್ನು ಸಾಧಿಸಿದರೇ, ಇಲ್ಲವೇ ಎನ್ನುವುದೇ ‘ಕಾಗೆಮೊಟ್ಟೆ’ ಚಿತ್ರದ ಕಥಾಹಂದರ.

ಕೊಳ್ಳೇಗಾಲ,ಚಾಮರಾಜನಗರಅಲ್ಲದೆಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗಿದೆ. ರಜನೀಕಾಂತ್‌ರ ಆಪ್ತಸ್ನೇಹಿತ ರಾಜ್ ಬಹದೂರ್ ಒಬ್ಬ ಮುಸ್ಲಿಂ ವ್ಯಕ್ತಿಯಾಗಿ ನಟಿಸಿದ್ದಾರೆ. ಈ ಹುಡುಗರಿಗೆ ಸಪೋರ್ಟ್ ಮಾಡುವ ವೇಶ್ಯೆಯ ಪಾತ್ರವನ್ನು ಸೌಜನ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ 3ಹಾಡುಗಳಿದ್ದು, ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ನಟ ಜಗ್ಗೇಶ್ ಸಹ ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದಲ್ಲದೆ ಅದಕ್ಕೆ ತಾವೇ ದನಿಯಾಗಿದ್ದಾರೆ. ಮಾಸ್‌ಮಾದ ಸಾಹಸ, ಕೆ.ಎಂ.ಪ್ರಕಾಶ್ ಸಂಕಲನವಿದ್ದು, ಪಿ.ಎಲ್. ರವಿ ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಪೊನ್ನಂಬಲಂ, ಶರತ್ ಲೋಹಿತಾಶ್ವ‌ ಉಳಿದ ತಾರಾಗಣದಲ್ಲಿದ್ದಾರೆ.

ಯುಎನ್ಐ ಎಸ್ಎ 1653
More News
“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

21 Oct 2021 | 2:01 PM

 Sharesee more..
ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

21 Oct 2021 | 12:28 PM

ಬೇಲ್ ಗಾಗಿ ಅಲೆದಾಡುತ್ತಿರುವ ಬಿಟೌನ್ ಸ್ಟಾರ್ ಪುತ್ರನ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಮುಂಬೈ ಹೈಕೋರ್ಟ್ ನಡೆಯಲಿದೆ. ಅರ್ಥರ್ ರೋಡ್ ಜೈಲು ಪಾಲಾಗಿರುವ ಆರ್ಯನ್ ಖಾನ್, ಕಳೆದ 18 ದಿನಗಳಿಂದ ಬಂಧನದಲ್ಲಿದ್ದಾನೆ.

 Sharesee more..