Friday, Oct 22 2021 | Time 20:52 Hrs(IST)
Sports Share

ಭಾವೀನ ಪಟೇಲ್ ಗೆ 3 ಕೋಟಿ ರೂ ನಗದು ಬಹುಮಾನ ಘೋಷಣೆ

ಅಹಮದಾಬಾದ್, ಆಗಸ್ಟ್‌ 29(ಯುಎನ್‌ ಐ) - ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿರುವ ಟೇಬಲ್ ಟೆನಿಸ್ ಆಟಗಾರ್ತಿ ಭಾವೀನಾ ಪಟೇಲ್ ಅವರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಭಿನಂದಿಸಿದ್ದಾರೆ. ಆಕೆ ಸಾಧಿಸಿರುವ ಗೆಲುವಿಗಾಗಿ ಬಹುಮಾನವಾಗಿ ಒಂದು ದೊಡ್ಡ ಮೊತ್ತ ಘೋಷಿಸಿದ್ದಾರೆ. ರಾಜ್ಯ ಸರ್ಕಾರದಡಿ ದಿವ್ಯಾಂಗ್ ಖೇಲ್ ಪ್ರತಿಭಾ ಪ್ರೊತ್ಸಾಹನ್‌ ಪುರಸ್ಕಾರ್‌ ಯೋಜನೆಯಡಿ ಭಾವೀನಾ ಪಟೇಲ್ ಗೆ 3 ಕೋಟಿ ರೂ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಗುಜರಾತ್ ರಾಜ್ಯದ ವಡ್‌ ನಗರ್‌ ಭಾವಿನಾ ಸ್ವಂತ ಊರು. ಆಕೆ 12 ತಿಂಗಳು ಮಗುವಾಗಿದ್ದಾಗ ಪೋಲಿಯೊ ಪೀಡಿತರಾಗಿದ್ದರು.
ಆದರೂ ಇದರಿಂದ ಸ್ಥೈರ್ಯ ಕಳೆದುಕೊಳ್ಳದ ಪದವಿ ವ್ಯಾಸಂಗ ಸಮಯದಲ್ಲಿ ಭಾವೀನಾ ಟೇಬಲ್ ಟೆನಿಸ್ ಆಡಲು ಪ್ರಾರಂಭಿಸಿದಳು. ಈ ವರೆಗೆ ಹಲವು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಿರುವ ಭಾವೀನಾ ಐದು ಚಿನ್ನದ ಪದಕ ಹಾಗೂ 13 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಅವರು ಆಡಿದ ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಯುಎನ್‌ ಐ ಕೆವಿಆರ್‌ 1358
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..
ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

21 Oct 2021 | 11:07 AM

ಭಾರತೀಯ ಕ್ರಿಕೆಟ್ ನ ಗೋಡೆ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್ ಬಿಸಿಸಿಐನಲ್ಲಿ ಹೊಸ ಜವಾಬ್ದಾರಿ ಹೊರುವುದು ಫಿಕ್ಸ್ ಆಗಿದೆ. ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ಆಗಲಿರುವ ರಾಹುಲ್ ಅವರ ಹೆಸರು ಔಪಚಾರಿಕವಾಗಿ ಘೋಷಣೆ ಮಾಡೋದು ಮಾತ್ರ ಬಾಕಿ ಉಳಿದಿದೆ.

 Sharesee more..
ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

21 Oct 2021 | 10:32 AM

ಐರ್ಲೆಂಡ್ ವಿರುದ್ಧ ಸಿಂಹಳೀಯರು ಸುಲಭ ಗೆಲುವು ದಾಖಲಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸುವುದರ ಮೂಲಕ ಶ್ರೀಲಂಕಾ ಸೂಪರ್ 12 ಘಟ್ಟಕ್ಕೆ ಜಿಗಿಯಿತು.

 Sharesee more..
ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

20 Oct 2021 | 7:55 PM

ದುಬೈ ಕ್ರಿಕೆಟ್ ಗ್ರೌಂಡ್ ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಕಾಣಿಸಿತು. ಅದುವೇ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದು.

 Sharesee more..