Tuesday, Nov 30 2021 | Time 17:33 Hrs(IST)
Entertainment Share

ಫ್ಯಾನ್ಸ್ ಜತೆ ನಟ ವಸಿಷ್ಠ ಸಿಂಹ ಹುಟ್ದಬ್ಬ

ಫ್ಯಾನ್ಸ್ ಜತೆ ನಟ ವಸಿಷ್ಠ ಸಿಂಹ ಹುಟ್ದಬ್ಬ
ಬೆಂಗಳೂರು, ಅ. 19 (ಯುಎನ್ಐ) ಸ್ಯಾಂಡಲ್ ವುಡ್ ನ ಕಂಚಿನ ಕಂಠದ ಕಲಾವಿದ, ಖಡಕ್ ಖಳನಾಯಕ ವಸಿಷ್ಠ ಸಿಂಹ ಇಂದು ಅಭಿಮಾನಿಗಳ ಜತೆ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಕೋವಿಡ್ ಕಾರಣ ಕಳೆದರಡು ವರ್ಷಗಳಿಂದ ಸಿಂಪಲ್ ಆಗಿ ಮನೆಯಲ್ಲೇ ಜನ್ಮದಿನ ಆಚರಿಸಿಕೊಂಡಿದ್ದ ನಟ, ಈ ಬಾರಿ ಅಭಿಮಾನಗಳ ನಡುವೆ 33ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡು ಸಂತಸಪಟ್ಟಿದ್ದಾರೆ.
ಇದೇ ವೇಳೆ ಚಿತ್ರಮಂದಿರಗಳಲ್ಲಿ ಶೇಕಡ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಎಲ್ಲರೂ ಕನ್ನಡ ಚಿತ್ರಗಳನ್ನು ತಪ್ಪದೆ ನೋಡಿ ಹಾಗೂ ಕೊರೋನಾ ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ. ಕನ್ನಡದ ಜತೆಗೆ ತೆಲುಗು ಚಿತ್ರರಂಗದಲ್ಲಿಯೂ ಅವಕಾಶ ಪಡೆದುಕೊಳ್ಳುತ್ತಿರುವ ವಸಿಷ್ಠ ಅಭಿನಯದ “ಕಾಲಚಕ್ರ” ಮುಂದಿನ ತಿಂಗಳು ತೆರೆಗೆ ಬರಲಿದೆ. ಇದಲ್ಲದೆ ಹೆಡ್ ಬುಷ್, ತಲವಾರ್ ಪೇಟ್ ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಯುಎನ್ಐ ಎಸ್ಎ 1700