Friday, Sep 17 2021 | Time 13:13 Hrs(IST)
Sports Share

ಬಾಕ್ಸಿಂಗ್: ಸತೀಶ್ ಗೆ ನಿರಾಸೆ

ಟೋಕಿಯೊ, ಆ.1 (ಯುಎನ್ಐ)- ಭರವಸೆಯ ಯುವ ಬಾಕ್ಸರ್ ಸತೀಶ್ ಕುಮಾರ್ ಒಲಿಂಪಿಕ್ಸ್ ಕ್ರೀಡಾ ಕೂಟದ ಬಾಕ್ಸಿಂಗ್ ಸ್ಪರ್ಧೆಯ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

ಭಾನುವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಸತೀಶ್ ನೀರಸ ಪ್ರದರ್ಶನ ನೀಡಿದರು. ಇವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 0-5 ರಿಂದ ಉಜ್ಬೇಕಿಸ್ತಾನದ ಬಖೋಡಿರ್ ಜಲೋವ್ ಅವರ ವಿರುದ್ಧ ಸೋಲು ಕಂಡರು. ಈ ಮೂಲಕ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದು ಪದಕ ಗೆಲ್ಲುವ ಕನಸಿಗೆ ಪೆಟ್ಟು ಬಿದ್ದಿದೆ.

ಪಂದ್ಯದ ಎಲ್ಲ ಹಂತದಲ್ಲೂ ಉಜ್ಬೇಕಿಸ್ತಾನದ ಆಟಗಾರನ ಕೈ ಮೇಲಾಯಿತು. ಎಲ್ಲ ನಿರ್ಣಾಯಕರು ಬಖೋಡಿರ್ ಜಲೋವ್ ಅವರನ್ನು ವಿಜಯಿ ಎಂದು ಘೋಷಿಸಿದರು.

ಯುಎನ್ಐ ವಿಎನ್ಎಲ್ 1321