Friday, Sep 17 2021 | Time 12:11 Hrs(IST)
Entertainment Share

ಟೆಡ್ಡಿ ಬೇರ್’ ಸಖತ್ ಹಾರರ್, ರೊಮ್ಯಾಂಟಿಕ್!

ಟೆಡ್ಡಿ ಬೇರ್’ ಸಖತ್ ಹಾರರ್, ರೊಮ್ಯಾಂಟಿಕ್!
ಟೆಡ್ಡಿ ಬೇರ್’ ಸಖತ್ ಹಾರರ್, ರೊಮ್ಯಾಂಟಿಕ್!

ಬೆಂಗಳೂರು, ಜುಲೈ 06 (ಯುಎನ್ಐ) ಇದು ಮಕ್ಕಳು ಅಪ್ಪುವಂತಹ ‘ಟೆಡ್ಡಿ ಬೇರ್’ ಅಲ್ಲ, ದೊಡ್ಡವರನ್ನೇ ಬೆದರಿಸೋಕೆ ರೆಡಿಯಾಗ್ತಿರೋ ಟೆಡ್ಡಿ ಬೇರ್!ಹೊಸ ಮನೆಯೊಂದರಲ್ಲಿ ನಡೆಯುವ ಹಾರರ್ ಮತ್ತು ರೊಮ್ಯಾಂಟಿಕ್ ಕಥಾಹಂದರವಿರುವ ಚಿತ್ರವನ್ನು ಲೋಕೇಶ್ ಬಿ. ನಿರ್ದೇಶಿಸುತ್ತಿದ್ದಾರೆ. ಆದ್ಯಲಕ್ಷ್ಮೀ ಪ್ರೊಡಕ್ಷನ್ಸ್ ಅಡಿಯಲ್ಲಿ ಭರತ್ ಕುಮಾರ್, ನವೀನ್ ರೆಗಟ್ಟಿ ಮತ್ತು ಆರೋನ್ ಕಾರ್ತಿಕ್ ಬಂಡವಾಳ ಹೂಡಿದ್ದು, ಸಾಹಿತ್ಯ ಮತ್ತು ಸಂಗೀತದ ಹೊಣೆಯನ್ನು ಆರೋನ್ ಕಾರ್ತಿಕ್ ಹೊತ್ತಿದ್ದಾರೆ.ಇಂದು ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಅನುರಾಧ ಭಟ್ ಜೀವತುಂಬಿ ಹಾಡಿರುವ ‘ಸ್ವಾಗತ ಸುಸ್ವಾಗತ ಅಮೃತ ಘಳಿಗೆಗೆ ಸ್ವಾಗತ’ ಹಾಡು ಬಿಡುಗಡೆಯಾಯಿತು.ಮೋಷನ್ ಪೋಸ್ಟರ್ ಹಾಗೂ ಆಡಿಯೋ ಬಿಡುಗಡೆಗೊಳಿಸಿದ ಚಿತ್ರ ಸಾಹಿತಿ ಡಾ. ನಾಗೇಂದ್ರ ಪ್ರಸಾದ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಭಾ ಮಾ ಹರೀಶ್ ಚಿತ್ರತಂಡಕ್ಕೆ ಶುಭ ಹಾರೈಸಿದರು.-:ವಿಭಿನ್ನ ಹಾರರ್ ಚಿತ್ರ:-ಈವರೆಗೂ ಸ್ಯಾಂಡಲ್ ವುಡ್ ನಲ್ಲಿ ಹಲವು ಹಾರರ್ ಚಿತ್ರಗಳು ತೆರೆ ಕಂಡಿವೆಯಾದರೂ, ‘ಟೆಡ್ಡಿ ಬೇರ್’ ಅವೆಲ್ಲವುಗಳಿಗಿಂತ ವಿಭಿನ್ನ. ಎಮೋಷನ್, ಸಸ್ಪೆನ್ಸ್ ಕೂಡ ಮಿಳಿತವಾಗಿದೆ. ಚಿತ್ರ ಸೊಗಸಾಗಿ ಮೂಡಿಬರಲು ಎಲ್ಲ ಕಲಾವಿದರೂ ಸಹಕರಿಸಿದ್ದಾರೆ ಎಂದು ನಿರ್ದೇಶಕ ಲೋಕೇಶ್. ಬಿ ತಿಳಿಸಿದರು.ನಿರ್ಮಾಪಕ ಆರೋನ್ ಕಾರ್ತಿಕ್, ನವದಂಪತಿ ಹೊಸ ಮನೆಗೆ ಕಾಲಿಟ್ಟಾಗ ಅಲ್ಲಿ ನಡೆಯುವ ವಿನೋದ, ವಿಚಿತ್ರ ಹಾಗೂ ಭಯಾನಕ ಘಟನೆಗಳು ಪ್ರೇಕ್ಷಕರಿಗೆ ಖಂಡಿತ ರಂಜನೆ ನೀಡಲಿದೆ. 3 ಹಾಡುಗಳಿದ್ದು, ಯಾವ ಅಕ್ಷರದಿಂದ ಪ್ರಾರಂಭವಾಯಿಯೋ ಅದೇ ಅಕ್ಷರದಲ್ಲಿ ಹಾಡಿನ ಪ್ರತಿಯೊಂದು ಪದ ಪ್ರಾಸ ಬರುವಂತೆ ಗಮನವಿಡಲಾಗಿದೆ. ಕಷ್ಟಪಟ್ಟು ಈ ಹಾಡುಗಳನ್ನು ಬರೆದಿದ್ದೇನೆ ಎಂದು ತಿಳಿಸಿದರು.-:ಶೇಕಡ ನೂರರಷ್ಟು ಸೀಟು ಭರ್ತಿಗೆ ಅನುಮತಿ ಬಳಿಕ ತೆರೆಗೆ:-ಚಿತ್ರ ನಿರ್ಮಾಣಕ್ಕೆ ಸಾಕಷ್ಟು ಹಣ ಖರ್ಚಾಗಿರುತ್ತದೆ. ಹೀಗಾಗಿ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಸರ್ಕಾರ ಅನುಮತಿ ನೀಡಿದ ಬಳಿಕವಷ್ಟೇ ‘ಟೆಡ್ಡಿ ಬೇರ್’ ತೆರೆಗೆ ಬರಲಿ. ಅವಸರ ಬೇಡ ಎಂದು ಸಾಹಿತಿ ನಾಗೇಂದ್ರ ಪ್ರಸಾದ್ ಚಿತ್ರತಂಡಕ್ಕೆ ಸಲಹೆ ನೀಡಿದರು.ಥಿಯೇಟರ್ ತೆರೆಯಲು ಸರ್ಕಾರಕ್ಕೆ ಮನವಿ:-ಆದಷ್ಟು ಶೀಘ್ರದಲ್ಲಿಯೇ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಇಂದೂ ಸಹ ಮನವಿ ಮಾಡಿದ್ದಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ತಿಳಿಸಿದರು.ನಾಯಕ ನಟ ಭಾರ್ಗವ್ ಗೆ ಇದು ಮೂರನೇ ಚಿತ್ರವಾಗಿದ್ದು, ಮೊದಲೆರಡು ಚಿತ್ರಗಳಾದ ಇನ್ನೂ ತೆರೆಕಂಡಿಲ್ಲ.ನಾಯಕ ಭಾರ್ಗವನಿಗೆ ಜೋಡಿಯಾಗಿ ಶೈಲಜಾ ಸಿಂಹ, ಲಿಖಿತಾ ನಟಿಸುತ್ತಿದ್ದು, ನಿಖಿಲ್, ವಿಘ್ನೇಶ್, ನವೀನ್ ಪಾಟೀಲ್, ಅಂಜಲಿ, ಅರವಿಂದ್ ತಾರಾಗಣವಿರುವ ಟೆಡ್ಡಿ ಬೇರ್ ಗೆ ಕೃಷ್ಣಸಾರಥಿ ಹಾಗೂ ನಿಖಿಲ್ ಛಾಯಾಗ್ರಹಣವಿದೆ.ಕುಮಾರ್-ನಾಗರಾಜ್ ಸಂಕಲನ, ಲೋಕೇಶ್, ಅಜಿತ್, ಭಾರ್ಗವ ಸಂಭಾಷಣೆಯಿದೆ. ಅಲ್ಟಿಮೇಟ್‍ ಶಿವು ಸಾಹಸ ಕರಿಯಾ ನಂದ ನೃತ್ಯ ಮತ್ತು ಅಜಿತ್ ಕುಮಾತ್ ಸಹ ನಿರ್ದೇಶನವಿದ್ದು, ‘ಸಿರಿ ಮ್ಯೂಸಿಕ್ ಆಡಿಯೋ’ ಸಿಡಿಯನ್ನು ಹೊರತರುತ್ತಿದೆ.ಯುಎನ್ಐ ಎಸ್ಎ 1947

More News

'ತಲೈವಿ' ಚಿತ್ರ ವೀಕ್ಷಿಸಿದ ರಜನಿಕಾಂತ್‌

15 Sep 2021 | 10:45 PM

 Sharesee more..

"ರಾಣ" ಟೀಸರ್ ರಿಲೀಸ್

15 Sep 2021 | 7:03 PM

 Sharesee more..