Friday, Oct 22 2021 | Time 21:55 Hrs(IST)
Entertainment Share

ಚಾರಿಟಿಯ ಮೂಲಕ ಸೇವೆ ಮುಂದುವರಿಯಲಿದೆ; ಸೋನು ಸೂದ್‌

ಮುಂಬೈ, ಸೆ 20(ಯು ಎನ್‌ ಐ) ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಲಾಕ್‌ ಡೌನ್‌ ನಿಂದಾಗಿ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಕೈಲಾದ ನೆರವು ನೀಡುವ ಮೂಲಕ ರಿಯಲ್‌ ಹೀರೋ ಎಂಬ ಪ್ರಶಂಸೆಗೆ ಪಾತ್ರವಾಗಿದ್ದ ಬಾಲಿವುಡ್‌ ನಟ ಸೋನು ಸೂದ್ ತಮ್ಮ ನಿವಾಸಗಳು ಹಾಗೂ ಉದ್ಯಮಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ಐಟಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
' ಆದಾಯ ತೆರಿಗೆ ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ನಾನು ನನ್ನ ಕೆಲಸ ಮುಂದುವರಿಸಲಿದ್ದೇನೆ. ದೇಣಿಗೆ ರೂಪದಲ್ಲಿ ಪಡೆದ ಹಣ ಬ್ಯಾಂಕ್ ಖಾತೆಗಳಲ್ಲಿದೆ. ಅಗತ್ಯವಿರುವವರಿಗೆ ಸಹಾಯ ಕಲ್ಪಿಸಲು ಸಮಯ ಬೇಕಾಗುತ್ತದೆ. ಇಲ್ಲವಾದರೆ 18 ಕೋಟಿಯನ್ನು 18 ಗಂಟೆಗಳಲ್ಲಿ ಖರ್ಚುಮಾಡಬಹುದು. ನಾನು ಪ್ರತಿ ರೂಪಾಯಿಯೂ ಬಡವರಿಗೆ ತಲುಪುವಂತೆ ಕೆಲಸ ಮಾಡುತ್ತೇನೆ. ಚಾರಿಟಿಯ ಮೂಲಕ ಸೇವೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ತಮಗೆ ಈಗ ರಾಜಕೀಯಕ್ಕೆ ಬರುವ ಯಾವುದೇ ಆಲೋಚನೆ ಇಲ್ಲ. ಹಿಂದೆ ಎರಡು ಪಕ್ಷಗಳು ತಮಗೆ ರಾಜ್ಯಸಭಾ ಸ್ಥಾನ ನೀಡುವುದಾಗಿ ಆಹ್ವಾನ ನೀಡಿದ್ದವು. ಆದರೆ, ಆಗ ರಾಜಕೀಯ ಪ್ರವೇಶಿಸಲು ಮನಸಿಲ್ಲದ್ದ ಕಾರಣ ಅಹ್ವಾನ ತಿರಸ್ಕರಿಸಿದ್ದಾಗಿ, ರಾಜಕೀಯ ಪ್ರವೇಶಿಸುವ ಯೋಚನೆ ಬಂದಾಗ ನಾನೇ ದೊಡ್ಡ ದ್ವನಿಯಲ್ಲಿ ಘೋಷಣೆ ಮಾಡುತ್ತೇನೆ ತಮಾಷೆ ಮಾಡಿದ್ದಾರೆ.
ಏತನ್ಮಧ್ಯೆ, ಸೋನು, ಆತನ ಉದ್ಯಮ ಕಚೇರಿಗಳು 20 ಕೋಟಿ ರೂಪಾಯಿ ತೆರಿಗೆ ವಂಚಿಸಿದ್ದಾರೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ . ದೇಣಿಗೆ ರೂಪದಲ್ಲಿ 18 ಕೋಟಿ ರೂ.ಗಳು ಅವರ ಖಾತೆಗಳಲ್ಲಿವೆ ಎಂದು ಬಹಿರಂಗಪಡಿಸಿದರು.
ಯುಎನ್‌ ಐ ಕೆವಿಆರ್‌ 2153
More News
“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

21 Oct 2021 | 2:01 PM

 Sharesee more..
ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

21 Oct 2021 | 12:28 PM

ಬೇಲ್ ಗಾಗಿ ಅಲೆದಾಡುತ್ತಿರುವ ಬಿಟೌನ್ ಸ್ಟಾರ್ ಪುತ್ರನ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಮುಂಬೈ ಹೈಕೋರ್ಟ್ ನಡೆಯಲಿದೆ. ಅರ್ಥರ್ ರೋಡ್ ಜೈಲು ಪಾಲಾಗಿರುವ ಆರ್ಯನ್ ಖಾನ್, ಕಳೆದ 18 ದಿನಗಳಿಂದ ಬಂಧನದಲ್ಲಿದ್ದಾನೆ.

 Sharesee more..