Friday, Oct 22 2021 | Time 21:42 Hrs(IST)
Sports Share

ಕ್ಲೀವ್‌ಲ್ಯಾಂಡ್ ಫೈನಲ್: ಸಾನಿಯಾ ಜೋಡಿಗೆ ಸೋಲು

ಕ್ಲೀವ್‌ಲ್ಯಾಂಡ್, ಆ.29 (ಯುಎನ್ಐ)- ಕ್ಲೀವ್‌ಲ್ಯಾಂಡ್ ಓಪನ್ ಟೆನಿಸ್ ಟೂರ್ನಾಮೆಂಟ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಕ್ರಿಸ್ಟಿನಾ ಮೆಕ್‌ಹೇಲ್ ಅವರು ಜಪಾನಿನ ಜೋಡಿಯಾದ ಶುಕೋ ಒಯಾಮಾ ಮತ್ತು ಅನ್ನಾ ಶಿಬಹರಾ ವಿರುದ್ಧ ಸೋತು ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟರು.

ಶನಿವಾರ ನಡೆದ ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ಜಪಾನಿನ ಜೋಡಿ ಸಾನಿಯಾ ಮತ್ತು ಮೆಕ್‌ಹೇಲ್‌ರನ್ನು 7-5, 6-3 ಅಂತರದಲ್ಲಿ ಸತತ ಸೆಟ್ ಗಳಲ್ಲಿ ಸೋಲಿಸಿದರು. ಭಾರತ ಮತ್ತು ಅಮೆರಿಕನ್ ಜೋಡಿ 10 ನೇ ಗೇಮ್ ವರೆಗೆ ಮೊದಲ ಸೆಟ್ ನಲ್ಲಿ ಹೋರಾಡಿದರೂ 11 ನೇ ಗೇಮ್ ನಲ್ಲಿ ತಮ್ಮ ಸರ್ವ್ ಕಳೆದುಕೊಂಡರು ಮತ್ತು ನಂತರ 45 ನಿಮಿಷಗಳಲ್ಲಿ 5-7 ರಲ್ಲಿ ಮೊದಲ ಸೆಟ್ ಕಳೆದುಕೊಂಡರು.

ಎರಡನೇ ಸೆಟ್ ನಲ್ಲಿ ಸಾನಿಯಾ ಮತ್ತು ಮೆಕ್ ಹೇಲ್ ಮೊದಲ ಮತ್ತು ಐದನೇ ಗೇಮ್ ನಲ್ಲಿ ತಮ್ಮ ಸರ್ವ್ ಕಳೆದುಕೊಂಡರು. ಜಪಾನಿನ ಜೋಡಿ ಮತ್ತೊಮ್ಮೆ ಎರಡನೇ ಸೆಟ್ ಅನ್ನು 6-3ರಲ್ಲಿ ಗೆದ್ದು ಪ್ರಶಸ್ತಿಯನ್ನು ಪಡೆಯಿತು. ವಿಜೇತ ಜೋಡಿ ಡಾಲರ್ 10300 ಮತ್ತು ರನ್ನರ್ ಅಪ್ ಜೋಡಿ ಡಾಲರ್ 6000 ಪಡೆದರು.

ಯುಎನ್ಐ ವಿಎನ್ಎಲ್ 2005
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..
ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

21 Oct 2021 | 11:07 AM

ಭಾರತೀಯ ಕ್ರಿಕೆಟ್ ನ ಗೋಡೆ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್ ಬಿಸಿಸಿಐನಲ್ಲಿ ಹೊಸ ಜವಾಬ್ದಾರಿ ಹೊರುವುದು ಫಿಕ್ಸ್ ಆಗಿದೆ. ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ಆಗಲಿರುವ ರಾಹುಲ್ ಅವರ ಹೆಸರು ಔಪಚಾರಿಕವಾಗಿ ಘೋಷಣೆ ಮಾಡೋದು ಮಾತ್ರ ಬಾಕಿ ಉಳಿದಿದೆ.

 Sharesee more..
ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

21 Oct 2021 | 10:32 AM

ಐರ್ಲೆಂಡ್ ವಿರುದ್ಧ ಸಿಂಹಳೀಯರು ಸುಲಭ ಗೆಲುವು ದಾಖಲಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸುವುದರ ಮೂಲಕ ಶ್ರೀಲಂಕಾ ಸೂಪರ್ 12 ಘಟ್ಟಕ್ಕೆ ಜಿಗಿಯಿತು.

 Sharesee more..
ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

20 Oct 2021 | 7:55 PM

ದುಬೈ ಕ್ರಿಕೆಟ್ ಗ್ರೌಂಡ್ ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಕಾಣಿಸಿತು. ಅದುವೇ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದು.

 Sharesee more..