Friday, Oct 22 2021 | Time 20:59 Hrs(IST)
Sports Share

ಫಿಟ್‌ ಇಂಡಿಯಾ ಮೊಬೈಲ್‌ ಆಪ್‌ ಗೆ ಚಾಲನೆ

ನವದೆಹಲಿ, ಆಗಸ್ಟ್‌ 29( ಯುಎನ್‌ ಐ) ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಫಿಟ್ ಇಂಡಿಯಾ ಆಂದೋಲನದ ಎರಡನೇ ವಾರ್ಷಿಕೋತ್ಸವ ಅಂಗವಾಗಿ ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ದೆಹಲಿಯಲ್ಲಿ ಭಾನುವಾರ ಫಿಟ್‌ ಇಂಡಿಯಾ ಮೊಬೈಲ್‌ ಆಪ್‌ ಗೆ ಚಾಲನೆ ನೀಡಿದರು.
ದೆಹಲಿಯ ಮೇಜರ್‌ ಧ್ಯಾನ್‌ ಚಂದ್‌ ನ್ಯಾಷನಲ್‌ ಸ್ಟೇಡಿಯಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ವ್ಯವಹಾರಗಳ ರಾಜ್ಯ ಸಚಿವ ನಿಸಿತ್‌ ಪ್ರಾಮಾಣಿಕ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅನುರಾಗ್‌ ಠಾಕೂರ್‌ ಇದೊಂದು ಉಚಿತ ಆಪ್‌ ಆಗಿದ್ದು, ಕ್ರೀಡಾ ಪಟುಗಳು, ತಮ್ಮ ದೈಹಿಕ ಸದೃಢತೆ ಕಾಪಾಡಿಕೊಳ್ಳುಲು ನೆರವಾಗಲಿದೆ. ಪ್ರತಿಯೊಬ್ಬ ಕ್ರೀಡಾ ಪಟು ಆರೋಗ್ಯ, ಸದೃಢತೆ ಕಾಪಾಡಿಕೊಳ್ಳಬೇಕು. ದೈಹಿಕ ಕಸರತ್ತು, ಆಹಾರ ಅಭ್ಯಾಸ ಮತ್ತಿತರ ಗಳ ಮೇಲೆ ನಿಗಾ ವಹಿಸಲು ಈ ಅಪ್‌ ಅಳವಡಿಸಿಕೊಂಡು ಶಿಷ್ಟಾಚಾರ ಪಾಲಿಸುವುದು ಅಗತ್ಯವಾಗಿದೆ ಎಂದು ಹೇಳಿದರು
ಆಪ್‌ ಗೆ ಚಾಲನೆ ನೀಡಿದ ನಂತರ ಭಾರತೀಯ ಹಾಕಿ ತಂಡದ ನಾಯಕ ಮನ್‌ ಪ್ರೀತ್‌ ಸಿಂಗ್‌, ಕುಸ್ತಿಪಟು ಸಂಗ್ರಾಮ್‌ ಸಿಂಗ್‌, ಅಯಾಜ್‌ ಮೆಮೂನ್‌, ಕ್ಯಾಪ್ಟನ್‌ ಅನ್ಯ ದಿವ್ಯಾ, ಶಾಲಾ ವಿದ್ಯಾರ್ಥಿ ಹಾಗೂ ಗೃಹಣಿಯೊಂದಿಗೆ ವರ್ಚುವಲ್‌ ಮಾದರಿಯಲ್ಲಿ ಸಂಪರ್ಕ ಸಾಧಿಸಿ ಸಂವಾದ ನಡೆಸಲಾಯಿತು
ಫಿಟ್‌ ಇಂಡಿಯಾ ಆಪ್‌ ಅಂಡ್ರಾಯ್ಡ್‌ ಹಾಗೂ ಐಓಎಸ್‌ ಎರಡರಲ್ಲೂ ಲಭ್ಯವಾಗಲಿದ್ದು, ಬೇಸಿಕ್‌ ಸ್ಮಾರ್ಟ್‌ ಪೋನ್‌ ಗಳಲ್ಲೂ ಕಾರ್ಯನಿರ್ವಹಿಸುವ ರೀತಿ ಅಭಿವೃದ್ದಿಪಡಿಸಲಾಗಿದೆ.
ಭಾರತವನ್ನು ಸದೃಢ ಹಾಗೂ ಆರೋಗ್ಯ ಪೂರ್ಣ ರಾಷ್ಟ್ರವನ್ನಾಗಿಸಬೇಕೆಂಬ ದೂರ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ 2019ರ ಆಗಸ್ಟ್‌ 29ರಂದು ಫಿಟ್‌ ಇಂಡಿಯಾ ಆಂದೋಲಕ್ಕೆ ಚಾಲನೆ ನೀಡಿದ್ದರು. ಫಿಟ್‌ ಇಂಡಿಯಾ ಶಾಲಾ ಸಪ್ತಾಹ, ಫಿಟ್‌ ಇಂಡಿಯಾ ಸ್ವಾತಂತ್ರ್ಯ ಓಟ, ಫಿಟ್‌ ಇಂಡಿಯಾ ಸೈಕ್ಲೋಥಾನ್‌ ಮತ್ತಿತರ ಫಿಟ್‌ ನೆಸ್‌ ಕಾರ್ಯಕ್ರಮಗಳ ಮೂಲಕ ಫಿಟ್‌ ಇಂಡಿಯಾ ಆಂದೋಲನ ದೇಶಾದ್ಯಂತ ಕೋಟ್ಯಾಂತರ ಮಂದಿಯನ್ನು ತಲುಪಿದೆ.
ಯುಎನ್‌ ಐ ಕೆವಿಆರ್‌ 1521
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..
ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

21 Oct 2021 | 11:07 AM

ಭಾರತೀಯ ಕ್ರಿಕೆಟ್ ನ ಗೋಡೆ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್ ಬಿಸಿಸಿಐನಲ್ಲಿ ಹೊಸ ಜವಾಬ್ದಾರಿ ಹೊರುವುದು ಫಿಕ್ಸ್ ಆಗಿದೆ. ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ಆಗಲಿರುವ ರಾಹುಲ್ ಅವರ ಹೆಸರು ಔಪಚಾರಿಕವಾಗಿ ಘೋಷಣೆ ಮಾಡೋದು ಮಾತ್ರ ಬಾಕಿ ಉಳಿದಿದೆ.

 Sharesee more..
ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

21 Oct 2021 | 10:32 AM

ಐರ್ಲೆಂಡ್ ವಿರುದ್ಧ ಸಿಂಹಳೀಯರು ಸುಲಭ ಗೆಲುವು ದಾಖಲಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸುವುದರ ಮೂಲಕ ಶ್ರೀಲಂಕಾ ಸೂಪರ್ 12 ಘಟ್ಟಕ್ಕೆ ಜಿಗಿಯಿತು.

 Sharesee more..
ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

20 Oct 2021 | 7:55 PM

ದುಬೈ ಕ್ರಿಕೆಟ್ ಗ್ರೌಂಡ್ ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಕಾಣಿಸಿತು. ಅದುವೇ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದು.

 Sharesee more..