Friday, Oct 22 2021 | Time 20:31 Hrs(IST)
Entertainment Share

ಗಾನ ಕೋಗಿಲೆಯ ವಿದಾಯಕ್ಕೆ ಒಂದು ವರ್ಷ

ಬೆಂಗಳೂರು, ಸೆ. 25(ಯುಎನ್ಐ) ಕ್ಯಾಬ್ ನಲ್ಲೂ ಇವರದೇ ದನಿ, ರೇಡಿಯೋದಲ್ಲಿಯೂ ಇವರದೇ ಗಾಯನದ ಮಾಧುರ್ಯ, ಪ್ರತಿಭಾವಂತ ಮಕ್ಕಳ, ಯುವಕರು ಗುನುಗಲೂ ಇವರ ಹಾಡೇ ಬೇಕು.. . .

ಹೌದು, ಇವರೇ ಭಾರತೀಯ ಚಿತ್ರರಂಗ ಎಂದೂ ಮರೆಯಲಾಗದ ಮೇರು ಗಾಯಕ, ನಟ, ನಿರ್ಮಾಪಕ ಎಸ್ ಪಿ ಬಾಲಸುಬ್ರಹ್ಮಣ್ಯಂ.

ಗಾಯನದ ಮೂಲಕ ಅಮರರಾಗಿರುವ ಬಾಲಸುಬ್ರಹ್ಮಣ್ಯಂ ಅವರ ದೈಹಿಕವಾಗಿ ನಮ್ಮೆಲ್ಲರನ್ನು ಅಗಲಿ ಇಂದಿಗೆ ಒಂದು ವರ್ಷ.

ಕೋವಿಡ್-19 ಸೋಂಕಿನಿಂದ ಕಳೆದ ವರ್ಷ ಆಗಸ್ಟ್ 5ರಂದು ಆರಂಭದಲ್ಲಿ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಸುಮಾರು ಎರಡು ತಿಂಗಳು ಜೀವನ್ಮರಣ ಹೋರಾಟ ನಡೆಸಿ ಕೊರೋನಾ ಗೆದ್ದ ಗಾನಗಾರುಡಿಗ ಎಸ್ ಪಿಬಿ ಸಾವನ್ನು ಗೆಲ್ಲಲಿಲ್ಲ.

ಅಸಂಖ್ಯಾತ ಅಭಿಮಾನಿಗಳು, ಶಿಷ್ಯರು, ಕುಟುಂಬವರ್ಗವನ್ನು ತೊರೆದು ಕಳೆದ ವರ್ಷ ಸೆಪ್ಟೆಂಬರ್ 25ರಂದು ಇಹಲೋಕ ತ್ಯಜಿಸಿದರು. ಅವರಿಗೆ ಆಗ 74 ವರ್ಷ ವಯಸ್ಸಾಗಿತ್ತು.

ಸರಿ ಸುಮಾರು 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಎಲ್ಲರ ಮನಗೆದ್ದ ಸ್ವರ ಮಾಂತ್ರಿಕ ಜನಿಸಿದ್ದು 1946 ಜೂನ್ 4ರಂದು.
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಸಾಂಬಮೂರ್ತಿ ಹರಿಕಥಾ ವಿದ್ವಾಂಸರು, ತಾಯಿ ಶಕುಂತಲಮ್ಮ. ಇಂಜಿನಿಯರಿಂಗ್ ಮಾಡಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕಾಲೇಜು ದಿನಗಳಲ್ಲೇ ಸಿನಿಮಾ ಸಂಗೀತದತ್ತ ಆಕರ್ಷಿತರಾಗಿದ್ದರು. ಕಾಲೇಜಿನಲ್ಲಿ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವರು, ಮೊದಮೊದಲು ಪಿ.ಬಿ. ಶ್ರೀನಿವಾಸ್ ಅವರ ಹಾಡುಗಳನ್ನು ಅದ್ಭುತವಾಗಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಕಲೆಯನ್ನು ಮೊದಲಿಗೆ ಗುರುತಿಸಿದ್ದು ಸಂಗೀತ ನಿರ್ದೇಶಕ ಕೋದಂಡಪಾಣಿ ಅವರು. ಸಂಗೀತವನ್ನೇ ವೃತ್ತಿಯನ್ನಾಗಿಸಿಕೋ ಎಂದು ಬೆನ್ನು ತಟ್ಟಿದ್ದು, ಖ್ಯಾತ ಗಾಯಕಿ ಎಸ್. ಜಾನಕಿ.
'ಶ್ರೀ ಶ್ರೀ ಮರ್ಯಾದ ರಾಮಣ್ಣ' ಎಂಬ ತೆಲುಗು ಸಿನಿಮಾದ ಹಾಡಿಗೆ ಧ್ವನಿಯಾಗುವ ಮೂಲಕ 1966ರಲ್ಲಿ ಸಿನಿಮಾ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು. ಅದೇ ವರ್ಷ ಅವರು 'ನಕ್ಕರೆ ಅದೇ ಸ್ವರ್ಗ' ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ಇದಾದ ಮೇಲೆ 'ಹೋಟೆಲ್ ರಾಮಣ್ಣ' ಎಂಬ ಸಿನಿಮಾ ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ್ದರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಗ್ರಗಣ್ಯ ಸಂಗೀತಗಾರನಾಗಿ ಸುಮಾರು 5 ದಶಕ ಮೆರೆದರು.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆಯಿರುವಾಗಲೇ ಬಾಲಿವುಡ್ ಕೂಡ ಅವರನ್ನು ಕೈಬೀಸಿ ಕರೆಯಿತು. ಬಾಲಿವುಡ್ ನಲ್ಲಿ ಕೂಡ ಅವರ ಗೀತೆಗಳಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿ ಪ್ರಶಸ್ತಿಗಳು ಬಂದಿವೆ. ಹೀಗೆ 16ಕ್ಕೂ ಹೆಚ್ಚು ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್ಪಿಬಿ ಹಾಡಿದ್ದಾರೆ.
ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ, ಆಂಧ್ರ ಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ, ಹಲವು ವಿಶ್ವ ವಿದ್ಯಾಲಯಗಳಿಂದ ಡಾಕ್ಟರೇಟ್ ಗಳಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಜಾಗ ಪಡೆದಿದ್ದಾರೆ ಎಂಬುದು ಹೆಮ್ಮೆಯ ವಿಷಯ.
ಯುಎನ್ಐ ಎಸ್ಎ 1642
More News
“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

21 Oct 2021 | 2:01 PM

 Sharesee more..
ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

21 Oct 2021 | 12:28 PM

ಬೇಲ್ ಗಾಗಿ ಅಲೆದಾಡುತ್ತಿರುವ ಬಿಟೌನ್ ಸ್ಟಾರ್ ಪುತ್ರನ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಮುಂಬೈ ಹೈಕೋರ್ಟ್ ನಡೆಯಲಿದೆ. ಅರ್ಥರ್ ರೋಡ್ ಜೈಲು ಪಾಲಾಗಿರುವ ಆರ್ಯನ್ ಖಾನ್, ಕಳೆದ 18 ದಿನಗಳಿಂದ ಬಂಧನದಲ್ಲಿದ್ದಾನೆ.

 Sharesee more..