Tuesday, Sep 28 2021 | Time 04:46 Hrs(IST)
Sports Share

ಬಾಕ್ಸಿಂಗ್: ಕಂಚಿಗೆ ತೃಪ್ತಿ ಪಟ್ಟ ಸತೀಶ್

ಬಾಕ್ಸಿಂಗ್: ಕಂಚಿಗೆ ತೃಪ್ತಿ ಪಟ್ಟ ಸತೀಶ್
ಬಾಕ್ಸಿಂಗ್: ಕಂಚಿಗೆ ತೃಪ್ತಿ ಪಟ್ಟ ಸತೀಶ್

ಟೋಕಿಯೊ, ಆ.1 (ಯುಎನ್ಐ) ಭರವಸೆಯ ಯುವ ಬಾಕ್ಸರ್ ಸತೀಶ್ ಕುಮಾರ್ ಒಲಿಂಪಿಕ್ಸ್ ಕ್ರೀಡಾ ಕೂಟದ ಬಾಕ್ಸಿಂಗ್ ಸ್ಪರ್ಧೆಯ ಸೆಮಿಫೈನಲ್ಸ್ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.



ಭಾನುವಾರ ನಡೆದ ಸೆಮಿಫೈನಲ್ಸ್ ಪಂದ್ಯದಲ್ಲಿ ಸತೀಶ್ ನೀರಸ ಪ್ರದರ್ಶನ ನೀಡಿದರು. ಇವರು ಉಪಾಂತ್ಯ ಪಂದ್ಯದಲ್ಲಿ 0-5 ರಿಂದ ಉಜ್ಬೇಕಿಸ್ತಾನದ ಬಖೋಡಿರ್ ಜಲೋವ್ ಅವರ ವಿರುದ್ಧ ಸೋಲು ಕಂಡರು. ಈ ಮೂಲಕ ಟೂರ್ನಿಯ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದು ಬಂಗಾರ ಗೆಲ್ಲುವ ಕನಸಿಗೆ ಪೆಟ್ಟು ಬಿದ್ದಿದೆ.



ಪಂದ್ಯದ ಎಲ್ಲ ಹಂತದಲ್ಲೂ ಉಜ್ಬೇಕಿಸ್ತಾನದ ಆಟಗಾರನ ಕೈ ಮೇಲಾಯಿತು. ಎಲ್ಲ ನಿರ್ಣಾಯಕರು ಬಖೋಡಿರ್ ಜಲೋವ್ ಅವರನ್ನು ವಿಜಯಿ ಎಂದು ಘೋಷಿಸಿದರು.



ಯುಎನ್ಐ ವಿಎನ್ಎಲ್ 1321